December 13, 2025
IMG-20251211-WA0168.jpg

ನಾಯಕನಹಟ್ಟಿ : ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ನಾಯಕನಹಟ್ಟಿ ಪೊಲೀಸ್ ಉಪನಿರೀಕ್ಷಕ ಜಿ ಪಾಂಡುರಂಗಪ್ಪ ಹೇಳಿದರು.

ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗ ಹಾಗೂ ಚಳ್ಳಕೆರೆ ಉಪ ವಿಭಾಗ, ತಲಕು ವೃತ್ತ ಮತ್ತು ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರು ಬೆಲೆಬಾಳುವ ವಸ್ತುಗಳನ್ನು ಇತರರಿಗೆ ಗೋಚರಿಸುವ ಹಾಗೆ ಕಾಣದಂತೆ ರಕ್ಷಿಸಿಕೊಳ್ಳಬೇಕು. ಪೋಕ್ಸೋ ಕಾಯಿದೆ – 2012, 18 ವರ್ಷದೊಳಗಿನ ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳಂತಹ ದುರ್ಘಟನೆಗಳನ್ನು ತಡೆಗಟ್ಟಲು ಹಾಗೂ ಮಕ್ಕಳಿಗೆ ರಕ್ಷಣೆ, ಭದ್ರತೆ ಮತ್ತು ನ್ಯಾಯ ಒದಗಿಸುವುದರ ಜೊತೆಗೆ ಅವರ ಆಸಕ್ತಿ ಮತ್ತು ಹಿತ ಕಾಪಾಡುವ ಉದ್ದೇಶಗಳನ್ನು ಇರಿಸಿಕೊಂಡು ಜಾರಿಗೆ ತರಲಾಗಿದೆ. ಹೆಣ್ಣು ಹಾಗೂ ಗಂಡು ಲಿಂಗ ಭೇದವಿಲ್ಲದೆ ಲೈಂಗಿಕ ಕಿರುಕುಳಕೊಟ್ಟರೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದರೆ ಅಂತವರಿಗೆ ಸುಮಾರು 20 ವರ್ಷಗಳ ಅಥವಾ ಗಲ್ಲು ಶಿಕ್ಷೆಯಾಗುವ ಸಂಭವಿಸುತ್ತದೆ ಆದ್ದರಿಂದ 18 ವರ್ಷದೊಳಗಿನ ಮಕ್ಕಳಿಗೆ ಲೈಂಗಿಕ ದೌರ್ಜನ್ಯಕ್ಕೆ ಎಡೆ ಮಾಡಿಕೊಡಬಾರದು ಇಂತಹ ಪ್ರಕರಣಗಳು ಜಾಮೀನು ರಹಿತ ಅಪರಾಧವಾಗಿರುತ್ತವೆ.

ಹೆಣ್ಣು ಮಕ್ಕಳು 18 ವರ್ಷ ಪೂರೈಸಿ 19ನೇ ವರ್ಷಕ್ಕೆ ಕಾಲಿಟ್ಟಾಗ ಮಾತ್ರ ಕಾನೂನು ಬದ್ಧವಾಗಿ ಮದುವೆಯಾಗಲು ಅರ್ಹರಾಗಿರುತ್ತಾರೆ. ಅದೇ ರೀತಿಯಾಗಿ ಗಂಡು ಮಕ್ಕಳು 21 ವರ್ಷ ಮೇಲ್ಪಟ್ಟವರು ಮದುವೆಯಾಗಲು ಅರ್ಹರಾಗಿರುತ್ತಾರೆ. ಇದರ ಒಳಗಿನ ವಯಸ್ಸಿನವರು ಮದುವೆಯಾದರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಮದುವೆಯಾದರೂ ಕೂಡ ಅಸಿಂಧು, ಸಿಂಧು ಆಗುವುದಿಲ್ಲ. ಆ ರೀತಿಯಲ್ಲಿ ಬಾಲ್ಯ ವಿವಾಹದವಾದರೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ಅಥವಾ 112 ಗೆ ಸಂಪರ್ಕಿಸಿ. ಇಂದಿನ ಕಾಲದಲ್ಲಿ ಹುಟ್ಟಿದ ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಿದ್ದರು. ಚಿಕ್ಕವಯಸಿಗೆ ಮದುವೆ ಮಾಡುವುದರಿಂದ ಹೆಣ್ಣು ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಹಾಗೂ ಬುದ್ಧಿ ಬೆಳವಣಿಗೆ ಆಗಿರುವುದಿಲ್ಲ ಎನ್ನುವ ದೃಷ್ಟಿಯಿಂದ ಬಾಲ್ಯ ವಿವಾಹ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಬಾಲ್ಯ ವಿವಾಹ ಮಾಡಿದಲ್ಲಿ ಹೆಣ್ಣು ಮತ್ತು ಗಂಡಿನ ಕಡೆಯವರು ಮದುವೆ ಮಾಡಿಸಲು ಬಂದ ಪೂಜಾರಿ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗುತ್ತದೆ. ವಿದ್ಯಾರ್ಥಿಗಳು ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಕ್ಷಣ 1098 ಅಥವಾ 112ಗೆ ಕರೆ ಮಾಡಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಮುಖ್ಯ ಶಿಕ್ಷಕ ಬಿ.ಆರ್ ರಮೇಶ್, ಸಹ ಶಿಕ್ಷಕ ಫಣಿಯಂದ್ರ ಕುಮಾರ್,ಡಿ. ಈರಣ್ಣ, ಬಸವರಾಜ್, ವೀರೇಶ್, ಕೆ ಮಾರುತಿ, ಬಿ ಉಮೇಶ್, ಕೆ. ರಾಜಣ್ಣ, ತಿಮ್ಮರಾಜ್, ಶಬ್ಬೀರ್, ಹಾಲೇಶ್.
ನಾಯಕನಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಅಣ್ಣಪ್ಪನಾಯ್ಕ, ಕುಮಾರ್, ದೇವರಾಜ್ ಕೋಟೆ ,ವೀರೇಶ್, ಮಹೇಶ್, ಸೇರಿದಂತೆ ವಿದ್ಯಾರ್ಥಿ -ವಿದ್ಯಾರ್ಥಿಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading