January 30, 2026
Screenshot_20241211_171140.png

ಚಳ್ಳಕೆರೆ ಡಿ. 11

ಕೋಟಿ ಕೋಟಿ ಸುರಿದು ಸರಕಾರಿ ಆಸ್ಪತ್ರೆ ಕಟ್ಟಿದರೂ ಸಹ ಇಲ್ಲಿ
ಮನುಷ್ಯ ಸತ್ತ ಮೇಲೂ ಆತನಿಗೆ ನೆಮ್ಮದಿ ಇಲ್ಲದಂತಾಗಿದೆ.
ಹೌದು ಚಳ್ಳಕೆರೆ ನಗರದ ಹೃದಯ ಭಾಗದಲ್ಲಿ ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾದೂ ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಅಪಘಾತದಲ್ಲಿ ದೂರದ ನಗರದ ಮೃತ ದೇಹಗಳ ಸಂಗ್ರಹಣೆ.ಕೊಲೆ. ಅಪರಿತ ಶವಗಳನ್ನು ಕುಟುಂಬಸ್ಥರ ಪತ್ತೆಗಾಗಿ ಅವರ ವಶಕ್ಕೆ ಶವ ಹಸ್ತಾಂತರ ಮಾಡಲು ಎರಡು ಮೂರು ದಿನಗಳು ಬೇಕಾದಗ ಕೊಳೆಯುವ
ಸಾಧ್ಯತೆ ಇದೆ.
ನಗರದ ಸಾರ್ವಜನಿಕ‌ ಆಸ್ಪತ್ರೆಯ ಆವರಣದಲ್ಲಿರು ಶವಗಾರದಲ್ಲಿ‌ ಶಿಥಲೀಕರ ವ್ಯವಸ್ಥೆಯಿಲ್ಲದೆ ಇರುವುದು ಶವಗಳ ರಕ್ಷಣೆ ಮಾಡಲು ಪೋಲಿಸರು ಹರಸಹಾಸ ಪಡಬೇಕಾಕಿದೆ.
ಚಳ್ಳಕೆರೆ ಹೊರವಲದ ವೀರದಿಮ್ಮನಹಳ್ಳಿ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ವ್ಯಕ್ತಿಯೊಬ್ಬನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಳ್ಳಕೆರೆ ಪೋಲಿಸರು ಮೃತನ ಗುರುತು ಹಾಗೂ ಕುಟುಂಬಸ್ಥರ ಪತ್ತೆಗಾಗಿ ಶವವನ್ನು ಸಾರ್ವಜನಿಕ ಆಸ್ಪತ್ರರಯ ಶವಗಾರದಲ್ಲಿಟ್ಟಿದ್ದು ಎರಡು ದಿನ ಕಳೆದರೆ ಕೊಳವೆ ಭೀತಿಯಿಂದ ಶವ ರಕ್ಷಣೆಗಾಗಿ ಶಿಥಲೀಕರಣ ಶವಗಾರಕ್ಕೆ ಮೃತ ಶವ ಸಾಗಿಸಲು ಖಾಸಗಿ ಆಸ್ಪತ್ರೆಯ ಶಿಥಲೀಕರಣ ಶವಗಾರದಲ್ಲಿಡಲು ದಿನಕ್ಕೆ ಎರಡು ಸಾವಿರ ಬಾಡಿಗೆ ಪಾವತಿ ಮಾಡಬೇಕು ಆದರೆ ಅಪರಿಚಿತ ಶವಕ್ಕೆ ಬಾಡಿಗೆ ಪಾವತಿ ಮಾಡುವವರಹ ಯಾರು ಎಂಬ ಚಿಂತೆಯಾದರೆ ಕೊನೆಗೆ ಹಿರಿಯೂರು ಸರಕಾರಿ ಆಸ್ಪತ್ರೆಯ ಶಿಥಲೀಕರಣ ಶವಗಾರಕ್ಕೆ ಕುಟುಂಬಸ್ಥರ ಪತ್ತೆಗಾಗಿ ಮೃತ ದೇಹ ಶೇಖರಣೆ ಮಾಡಲು ಮುಂದಾಗಿದ್ದಾರೆ.
ತಾಲೂಕಿನಲ್ಲಿ ನಡೆಯುವ ಅಪಘಾತ,
ಆತ್ಮಹತ್ಯೆ, ಕೊಲೆ, ಪ್ರಕೃತಿ ವಿಕೋಪ, ಮತ್ತಿತರ ಸಂದರ್ಭಗಳಲ್ಲಿ ಮೃತಪಟ್ಟವರ
ಮರಣೋತ್ತರ ಪರೀಕ್ಷೆಯನ್ನು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯ
ಶವಾಗಾರದಲ್ಲಿ ನಡೆಸಲಾಗುತ್ತದೆ. ಅದರಲ್ಲೂ ಅತಿ ಹೆಚ್ಚು ಮರಣೋತ್ತರ
ಪರೀಕ್ಷೆಗಳು ಇಲ್ಲಿಯೇ ನಡೆಯುತ್ತವೆ.
ಆದ್ದರಿಂದ ಈಗಿರುವ ಶವಗಾರವನ್ನು ವಿಸ್ತರಿಸಿ ಶವಗಾರದಲ್ಲಿ ಶಿಥಕರಣದ ವ್ಯವಸ್ಥೆ ಒದಗಿಸಬೆರಕಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading