
ಚಳ್ಳಕೆರೆ ಅ.11
ಚಳ್ಳಕೆರೆ-
ರಾತ್ರಿ ಸುರಿದ ಭಾರಿ ಮಳೆಯಿಂದಾಗಿ. ನಗರದ ತಾಲೂಕು ಪಂಚಾಯತಿ ಸಮೀಪವಿರುವ ತೋಟಗಾರಿಕೆ ಇಲಾಖೆಯ ಕಚೇರಿ ಒಳಗೆ ನೀರು ನುಗ್ಗಿದ್ದು ಕಚೇರಿಯಲ್ಲಿ ಇದ್ದಂತಹ ಕಡಿತಗಳು ಮಳೆಯ ನೀರಿನಿಂದ ಹಾನಿಯಾಗಿವೆ.










ತಾಲೂಕು ಪಂಚಾಯತ್ ಕಚೇರಿ ಕಾಂಪೌಂಡ್ ಗೋಡೆ ಕುಸಿದು ಅಲ್ಲಿಂದ ನುಗ್ಗಿದ ನೀರು ತೋಟಗಾರಿಕೆ ಇಲಾಖೆ ಕಚೇರಿ ಒಳಗೆ ನುಗ್ಗಿದ್ದು ಕೆಳಗೆ ಇದ್ದಂತಹ ಹಲವು ಕಡಿತಗಳು ಹಾಗೂ ಕಂಪ್ಯೂಟರ್ ಕೆಲವು ವಸ್ತುಗಳು ಹಾಳಾಗಿವೆ.
ಇಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಕಚೇರಿ ಬೀಗ ತೆಗೆದಾಗ ಕಚೇರಿ ಒಳಗೆ ನೀರು ನಿಂತಿರುವುದನ್ನು ಕಂಡು ತಕ್ಷಣವೇ ಸಿಬ್ಬಂದಿ ಒಳಗೋಡಿ ಕಂಪ್ಯೂಟರ್ನ ಕೆಲವು ವಸ್ತುಗಳು ಹಾಗೂ ಕಡಿತಗಳನ್ನ ಅಲ್ಲಿಂದ ತೆರವು ಮಾಡುವ ಕಾರ್ಯ ಮಾಡಿದ್ದಾರೆ…