
ನಾಯಕನಹಟ್ಟಿ:: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಯಕನಹಟ್ಟಿ ಹೋಬಳಿಯಲ್ಲಿ ಉತ್ತಮ ಮಳೆಯಾಗಿದೆ.
ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗನೂರಹಟ್ಟಿ 2ನೇ ವಾರ್ಡಿನ ಕನ್ನಯ್ಯನಹಟ್ಟಿ ಗ್ರಾಮದ ಸರ್ವೆ ನಂಬರ್ 93ರ ರೈತ ಕೆ ಟಿ ತಿಪ್ಪೇಸ್ವಾಮಿ ರವರ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ಹಾಕಲಾಯಿತು. ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಸುಮಾರು 150ಕ್ಕೂ ಹೆಚ್ಚು ಅಡಿಕೆ ಸಸಿಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಇನ್ನೂ ನಂಗಿಓಬಮ್ಮ ಪಾಲಯ್ಯ ಸರ್ವೆ ನಂಬರ್ 55ರ 2 ಎಕರೆ ಈರುಳ್ಳಿ ಸಂಪೂರ್ಣವಾಗಿ ನೀರಲ್ಲಿ ಕೊಚ್ಚಿಹೋಗಿದೆ . ಮತ್ತು 95ರ ಸರ್ವೇ ನಂಬರ್ ಬೈಯಣ್ಣ ಬೋರಯ್ಯ ಅವರ 2 ಎಕರೆ ಈರುಳ್ಳಿ ನೀರಲ್ಲಿ ಕುಚ್ಚು ಹೋಗಿದೆ ಎಂದು ರೈತರು ತಮ್ಮ ಮಾಧ್ಯಮದೊಂದಿಗೆ ಅಳಿಲು ಹೇಳಿಕೊಂಡಿದ್ದಾರೆ.



ಇದೆ ವೇಳೆ ರೈತರಾದ ಕೆ ಟಿ ತಿಪ್ಪೇಸ್ವಾಮಿ, ನಾಗರಾಜ್, ತಿಪ್ಪೇಸ್ವಾಮಿ ನಂಗಿಓಬಮ್ಮ ಪಾಲಯ್ಯ, ಬೈಯಣ್ಣ ಬೋರಯ್ಯ, ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.