
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಗ್ರಾಮ ಪಂಚಾಯಿತಿ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ದೊರಕುವ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ವಿ.ಗೋಪಾಲ್ ಹೇಳಿದರು.


ಅವರು ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ಹರದನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಕಯಂತ್ರ, ಅಂಗನವಾಡಿ ಕೇಂದ್ರಕ್ಕೆ ಆಲ್ಮೆರಾ ಹಾಗೂ ಗ್ರಾಮದ ಪ್ರತಿ ಮನೆ ಮನೆಗೆ ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿ ಸಂಗ್ರಹಣೆ ಮಾಡುವ ಬಕೆಟ್ ಗಳನ್ನು ವಿತರಣೆ ಮಾಡಿ ಮಾತಾಡಿದರು.
ಶಾಲೆಯಲ್ಲಿ ಶಿಕ್ಷಕರುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಅವರುಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಗ್ರಾಮ ಪಂಚಾಯಿತಿ ವತಿಯಿಂದ ನೀಡಿರುವ ಗಣಕಯಂತ್ರವನ್ನು ಬಳಸಿಕೊಂಡು ಮಕ್ಕಳಿಗೆ ಕಂಪ್ಯೂಟರ್ ಕಲಿಕೆಯನ್ನು ಉತ್ತಮ ರೀತಿಯಲ್ಲಿ ಕಲಿಸಬೇಕು ಎಂದರು.
ಗ್ರಾಮದಲ್ಲಿನ ಪ್ರತಿಯೊಂದು ಕುಟುಂಬದವರೂ ತಮ್ಮ ಮನೆಗಳಲ್ಲಿನ ಯಾವುದೇ ತ್ಯಾಜ್ಯ ವಸ್ತುಗಳನ್ನು ಕಂಡ ಕಂಡಲ್ಲಿ ಹಾಕದೆ ಗ್ರಾಮ ಪಂಚಾಯಿತಿ ವತಿಯಿಂದ ನೀಡಿರುವ ಬಕೆಟ್ ಗಳನ್ನು ಬಳಸಿಕೊಂಡು ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಹಾಕುವ ಮೂಲಕ ನೈರ್ಮಲ್ಯತೆಯನ್ನು ಕಾಪಾಡಬೇಕೆಂದು ಹೇಳಿದರು.
ಅಂಗನವಾಡಿ ಕೇಂದ್ರದಲ್ಲಿ ಕೇಂದ್ರದ ದಾಖಲೆಗಳು ಸೇರಿದಂತೆ ಇತರ ವಸ್ತುಗಳನ್ನು ಹಾಳಾಗದಂತೆ ಎಚ್ಚರಿಕೆವಹಿಸಿ ಆಲ್ಮೆರಾವನ್ನು ಬಳಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ ಲೋಕೇಶ್, ರೇಣುಕಾರಾಮಕೃಷ್ಣ, ಪಿಡಿಓ ಮೋಹನ್, ಕಾರ್ಯದರ್ಶಿ ಪುಷ್ಪಕಾಂತ್, ಬಿಲ್ ಕಲೆಕ್ಟರ್ ವಸಂತ, ಸಿಬ್ಬಂದಿಗಳಾದ ಕೋಟೆಗೌಡ, ಅಶೋಕ್, ಸತೀಶ್, ಮುಖ್ಯ ಶಿಕ್ಷಕ ಮುರಳಿ, ಶಿಕ್ಷಕರಾದ ಜಯಣ್ಣ, ನಿರಂಜನ್, ವಿದ್ಯಾ, ಎಸ್ ಡಿ ಎಂ ಸಿ ಅಧ್ಯಕ್ಷ ಹರೀಶ್, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಮ್ಮ, ಸಹಾಯಕಿ ಗೌರಾಜಮ್ಮ, ಆಶಾ ಕಾರ್ಯಕರ್ತೆ ಶೈಲಜ, ಮುಖಂಡರಾದ ರಾಮಕೃಷ್ಣ, ಲೋಕೇಶ್, ಆನಂದ್, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.