July 12, 2025
1752241948143.jpg


ಚಳ್ಳಕೆರೆ ಜುಲೈ11:
ಜನಸಂಖ್ಯೆ ನಿಯಂತ್ರಣ ಅಗತ್ಯ ಎಂದು ಮೀರಾಸಾಬಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೆಚ್.ಸಿ.ಗುರುಪ್ರಸಾದ್ ಅಭಿಪ್ರಾಯಪಟ್ಟರು.
ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗಲು ಬಡತನ, ಅಜ್ಞಾನ, ಮಾಹಿತಿ ಕೊರತೆ, ಮೂಢನಂಬಿಕೆ, ಬಾಲ್ಯ ವಿವಾಹ ಇವು ಸಹ ಜನಸಂಖ್ಯಾ ಸ್ಪೋಟಕ್ಕೆ ಕಾರಣ. ಇದರಿಂದ ಜನರಿಗೆ ಆಹಾರ, ನೀರು, ಬಟ್ಟೆ, ವಸತಿ ಕೊರತೆ ಉಂಟಾಗುತ್ತದೆ. ನಿರುದ್ಯೋಗ, ಬಡತನ ಹೆಚ್ಚಾಗುತ್ತದೆ. ಇದರ ಜೊತೆಗೆ ಮಾಲಿನ್ಯವೂ ಉಂಟಾಗುತ್ತದೆ. ಈ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಬೇಕಾದರೆ ನಿಗಧಿತ ವಯಸ್ಸಿಗೆ ಗಂಡು ಹೆಣ್ಣು ಮದುವೆಯಾಗಬೇಕು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಬೇಕು. ಇದರಲ್ಲಿ ತಾತ್ಕಾಲಿಕ ವಿಧಾನಗಳಾದ ನುಂಗುವ ಮಾತ್ರೆ, ಚಾಯ ಮಾಲಾ, ಡಿಂಪ, ನಿರೋದ್‍ಗಳನ್ನು ಉಪಯೋಗಿಸಬೇಕು. ಶಾಶ್ವತ ವಿಧಾನಗಳಾದ ಲಾಪೆÇ್ರಸ್ಕೋಪಿಕ್, ಟ್ಯೂಬ್ಟೊಮಿ ಆಪರೇಷನ್, ಪುರುಷರು ವ್ಯಾಸೆಕ್ಟಮಿ ಆಪರೇಷನ್ ಮಾಡಿಸಿಕೊಳ್ಳಬಹುದು. ಚಿಕ್ಕ ಸಂಸಾರ ಚೊಕ್ಕ ಸಂಸಾರ ಎಂಬಂತೆ ಪ್ರತಿಯೊಬ್ಬರು ಹೆಣ್ಣಾಗಲಿ ಗಂಡಾಗಲಿ ಒಂದೇ ಮಗುವಿಗೆ ಆಪರೇಷನ್ ಮಾಡಿಸಿಕೊಳ್ಳಬೇಕು ಇದರಿಂದ ಫೋಷಕರ ಆದಾಯ ಸುಧಾರಿಸುತ್ತದೆ ಹಾಗೂ ಒಂದೇ ಮಗುವನ್ನು ಆರೋಗ್ಯವಂತ ಮಗುವನ್ನಾಗಿ ಚೆನ್ನಾಗಿ ನೋಡಿಕೊಳ್ಳಬಹುದು. ಆ ಮಗುವಿಗೆ ಉನ್ನತ ಶಿಕ್ಷಣ ಕೊಡಿಸಬಹುದು. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಜನರಿಗೆ ಉತ್ತಮವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ನವೀನ್ ಕುಮಾರ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಕುಂತಲಮ್ಮ, ಸಮುದಾಯ ಆರೋಗ್ಯಾಧಿಕಾರಿ ಸ್ನೇಹ, ಶಬೀನ ಬಾನು, ಫಾರ್ಮಸಿ ಅಧಿಕಾರಿ ಶಂಕರ್, ಶುಶ್ರೂಷಕಿ ಚಾಂದ್, ಆಶಾ ಕಾರ್ಯಕರ್ತರಾದ ರಾಧಮ್ಮ, ಸಿಬ್ಬಂದಿಗಳಾದ ಸಾಗರ್ ಹಾಗೂ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading