
ನಾಯಕನಹಟ್ಟಿ: ಮೇ.11.
ವಿಶ್ವಮೆಚ್ಚುವ ಸಂವಿಧಾನದ ರಚನೆ ಜತೆಗೆ ಕಲಿಯುಗದ ದೇವರಾಗಿದ್ದಾರೆ ಡಾ.ಬಿ.ಆರ್ ಅಂಬೇಡ್ಕರ್ ಎಂದು ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್
ತಿಳಿಸಿದರು.

ಸಮೀಪದ ನಲಗೇತನಹಟ್ಟಿ ಗ್ರಾಮದ ಶ್ರೀ ತಿಮ್ಮಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ
ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರತಿಯೊಂದು ದಲಿತ ಕೇರಿಗಳಲ್ಲಿ ವಿದ್ಯಾವಂತರು ಹೆಚ್ಚಾಗಬೇಕು ಉನ್ನತ ಸ್ಥಾನಮಾನ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಆಗ ಮಾತ್ರ ಅಂಬೇಡ್ಕರ್ ಅವರ ಆಶಯ ಈಡೇರಿಸಲು ಸಾಧ್ಯವಾಗುತ್ತದೆ ಹಾಗಾಗಿ
ಅ೦ಬೇಡ್ಕರ್ ತತ್ವ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಸಂವಿಧಾನಕ್ಕೆ ಗೌರವ ಕೋಡೋಣ ಎಂದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಮೆರವಣಿಗೆ
ನಲಗೇತನಹಟ್ಟಿ ಗ್ರಾ. ಪಂ. ಅಧ್ಯಕ್ಷೆ ಪಾಲಮ್ಮ ಪೂರ್ಣ ಓಬಯ್ಯ, ಚಾಲನೆ ನೀಡಿದರು.
ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಟಿ. ವಿಜಯ್ ಕುಮಾರ್.ನಲಗೇತನಹಟ್ಟಿ ಗ್ರಾ.ಪಂ. ಸದಸ್ಯೆ ಬೋರಮ್ಮ, ಎ.ಎಸ್.ಎಸ್.ಕೆ. ಸಂದೇಶ್ ,
ಡಿಎಸ್ಎಸ್ ತಾಲೂಕು ಸಂಚಾಲಕ ನಲಗೇತನಹಟ್ಟಿ ಕೆ.ಬಿ. ನಾಗರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಬಿ. ತಿಪ್ಪೇಸ್ವಾಮಿ ಕುದಾಪುರ, ಚಳ್ಳಕೆರೆ ಭದ್ರಿ, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಶಿಕ್ಷಕ ಮಹಾಂತೇಶ್, ವಕೀಲ ಪರಮೇಶ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಎಂ.ಬಿ. ಸಣ್ಣ ಬೋರಯ್ಯ,ಸೇರಿದಂತೆ
ಕಾರ್ಯಕ್ರಮದ ಆಯೋಜಕರು ಗ್ರಾಮ ಶಾಖೆ ಸಂಘಟಿಕರು ಹಟ್ಟಿಯ ಯಜಮಾನರು ನೌಕರವರ್ಗ ನಲಗೇತನಹಟ್ಟಿ ಸಮಸ್ತ ಗ್ರಾಮಸ್ಥರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳು
ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.