ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ ): ತಾಯ್ನಾಡಿನ ಸೇವೆಯನ್ನು ಮಾಡಿ ತವರಿಗೆ ಆಗಮಿಸಿದ ವೀರ ಯೋಧ ಹೆಚ್.ಬಿ.ದೀಪಕ್ ಕುಮಾರ್ ಅವರಿಗೆ ತಮ್ಮ ಸ್ವಗ್ರಾಮದಲ್ಲಿ ಗೌರವಪೂರ್ವಕ ಅದ್ದೂರಿ ಸ್ವಾಗತ ಕೋರಲಾಯಿತು.




ತಾಲೂಕಿನ ಹರದನಹಳ್ಳಿ ಗ್ರಾಮದ ನಿವೃತ್ತ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಸವೇಗೌಡ ಮತ್ತು ಸೌಭಾಗ್ಯ ದಂಪತಿಗಳ ಸುಪುತ್ರ ಹೆಚ್.ಬಿ.ದೀಪಕ್ ಕುಮಾರ್ ಅವರು ಭಾರತೀಯ ಭೂ ಸೇನೆಯಲ್ಲಿ ಕಳೆದ 17 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾದ ನಂತರ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ವಿಶೇಷವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.
ಹೆಚ್.ಬಿ.ದೀಪಕ್ ಕುಮಾರ್ ಅವರು 2009ರಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಯಾಗಿ ಅಲ್ಲಿಂದ ಜಮ್ಮು ಕಾಶ್ಮೀರ, ಚಂಡಿಗಡ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
ಹೆಚ್.ಬಿ.ದೀಪಕ್ ಕುಮಾರ್ ಅವರು ನಿವೃತ್ತಿಯಾದ ನಂತರ ತವರಿಗೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮದ ಹೆಬ್ಬಾಗಿಲಿನ ಬಳಿ ಜಮಾಯಿಸಿದ ಯುವಕರು ಹಾಗೂ ಸಾರ್ವಜನಿಕರು ವೀರಯೋಧ ಹೆಚ್.ಬಿ.ದೀಪಕ್ ಕುಮಾರ್ ಅವರನ್ನು ಸ್ವಾಗತಿಸಿದರು. ನಂತರ ಗ್ರಾಮ ದೇವತೆ ಶ್ರೀ ವಸಮ್ಮ ತಾಯಿ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಯೋಧ ಹೆಚ್.ಬಿ.ದೀಪಕ್ ಕುಮಾರ್ ಅವರನ್ನು ಯುವಕರು, ಮುಖಂಡರುಗಳು, ಯಜಮಾನರುಗಳು, ಜನಪ್ರತಿನಿಧಿಗಳು ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಯುವಕರು, ಸಾರ್ವಜನಿಕರು ಜಯ ಘೋಷಣೆಗಳನ್ನು ಮೊಳಗಿಸಿ ಪಟಾಕಿ ಸಿಡಿಸಿ ತಮ್ಮೂರಿನ ವೀರಯೋಧ ಹೆಚ್.ಬಿ.ದೀಪಕ್ ಕುಮಾರ್ ಅವರಿಗೆ ಗೌರವ ಸಲ್ಲಿಸಿದರು.
ನಂತರ ತೆರೆದ ವಾಹನದಲ್ಲಿ ಯೋಧ ಹೆಚ್.ಬಿ.ದೀಪಕ್ ಕುಮಾರ್ ಅವರನ್ನು ಬೈಕ್ ರಾಲಿಯ ಮೂಲಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಗ್ರಾಮದ ಯುವಕರು, ಮುಖಂಡರುಗಳು, ಜನಪ್ರತಿನಿಧಿಗಳು, ಯಜಮಾನರುಗಳು, ಗ್ರಾಮಸ್ಥರುಗಳು ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.