
ಹಿರಿಯೂರು:
ನಗರದಲ್ಲಿ ಬಿಸಿಲಿನಿಂದ ಬಸವಳಿದ ಭೂಮಿಗೆ ದಿಡೀರನೆ ಸುರಿದ ಆಲಿಕಲ್ಲಿನ ಮಳೆ ಭೂಮಿಯನ್ನು ತಂಪಾಗಿಸಿರುವುದಲ್ಲದೆ, ನಗರದ ನೆಹರು ಮೈದಾನ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸುರಿದ ಮಳೆಯಿಂದಾಗಿ ನೆಹರು ಮೈದಾನದಲ್ಲಿ ನಡೆಯುತ್ತಿದ್ದ ಬೃಹತ್ ಕ್ರಿಕೆಟ್ ಪಂದ್ಯಾವಳಿ ಮದ್ಯದಲ್ಲಿಯೇ ನಿಂತು ಹೋಯಿತು.
ನಗರದ ಕ್ರಿಕೆಟ್ ಪ್ರಿಯರು ಬಹಳ ದಿನಗಳಿಂದ ಕುತೂಹಲದಿಂದ ಕಾಯುತ್ತಿದ್ದ ಈ ಕ್ರಿಕೆಟ್ ಪಂದ್ಯಾವಳಿ ದಿಡೀರ್ ಸುರಿದ ಮಳೆಯಿಂದಾಗಿ ನೆಹರು ಕ್ರೀಡಾಂಗಣದ ತುಂಬೆಲ್ಲ ನೀರು ನಿಂತು ಮೈದಾನ ಮಳೆಯಲ್ಲಿ ತೋಯ್ದು ಹೋಗಿದ್ದರಿಂದ ಪಂದ್ಯ ದಿಡೀರ್ ರದ್ದಾಗಿದ್ದು, ನಗರದ ಕ್ರಿಕೆಟ್ ಪ್ರಿಯರಿಗೆ ತುಂಬಾ ನಿರಾಶೆಯನ್ನು ಉಂಟುಮಾಡಿದೆ.
ತಾಲ್ಲೂಕಿನ ವಿವಿಧ ಗ್ರಾಮೀಣ ಪ್ರದೇಶದಲ್ಲೂ ಸಹ ಮಳೆಯಾಗಿರುವ ಸುದ್ದಿ, ನಮ್ಮ “ಹಿರಿಯೂರು ನ್ಯೂಸ್” ಪತ್ರಿಕಾ ಕಚೇರಿಗೆ ಜನರು ಪೋನ್ ಮಾಡಿ ತಿಳಿಸಿದ್ದು, ಯುಗಾದಿಯ ನೂತನ ಹೊಸವರ್ಷದಲ್ಲಿ ಬರದ ನಾಡಿಗೆ ವರುಣನ ಕೃಪೆಯಿಂದಾಗಿ ತಾಲ್ಲೂಕು ಸಮೃದ್ಧವಾಗಿ ಅಚ್ಚಹಸಿರಿನಿಂದ ಕಂಗೊಳಿಸುವ ಮುನ್ಸೂಚನೆಯನ್ನು ಮಳೆರಾಯ ನೀಡಿದಂತಾಗಿದೆ.
ಬಿರುಬಿಸಿಲಿನ ಶಕೆ ತಾಳಲಾರದೇ ಬೇಸತ್ತಿದ್ದ ಜನಕ್ಕೆ ಮಳೆರಾಯನ ಆಗಮನದಿಂದ ಸಂತಸವನ್ನು ತಂದಿದ್ದು, ಯುಗಾದಿಯ ಹೊಸವರ್ಷದಲ್ಲಿ ಆರಂಭವಾಗಿರುವ ಹೊಸಮಳೆಯು ತಾಲ್ಲೂಕಿನ ಜನರ ಜೀವನಾಡಿಯಾಗಿರುವ ವಾಣಿವಿಲಾಸ ಜಲಾಶಯವನ್ನು ಭರ್ತಿ ಮಾಡುವ ಜೊತೆಗೆ ತಾಲ್ಲೂಕಿನಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿ ರೈತರ ಬದುಕು ಹಸನಾಗಲಿ ಎಂಬುದಾಗಿ “ಹಿರಿಯೂರು ನ್ಯೂಸ್” ತಂಡದಿಂದ ಶುಭಹಾರೈಸಲಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.