March 11, 2026
IMG-20260310-WA0174.jpg

ಹೊಸದುರ್ಗ: ಸಮಾಜ ಸೇವಕ, ಅಭಿವೃದ್ಧಿಯ ಚಿಂತಕ ಹಾಗೂ ಬಿಜೆಪಿ ಮುಖಂಡರಾದ ಎಸ್. ಲಿಂಗಮೂರ್ತಿ ಅವರಿಗೆ ಸುಮಾರು 35 ವರ್ಷಗಳ ಸಮಾಜ ಸೇವೆಯನ್ನು ಗುರುತಿಸಿ ಅಮೇರಿಕಾದ ಫ್ಲೋರಿಡಾ ರಾಜ್ಯದ ಯೋಗ ಸಂಸ್ಕೃತ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಎಸ್. ಲಿಂಗಮೂರ್ತಿ ಅವರಿಗೆ ಅಭಿನಂದನಾ ಸಮಾರಂಭವನ್ನು ಇಂದು (ಮಾರ್ಚ್ 11, ಬುಧವಾರ) ಸಂಜೆ 4 ಗಂಟೆಗೆ ಪಟ್ಟಣದ ಡಿ.ಆರ್.ಎನ್ ಬಡಾವಣೆಯ ಶಿವನೇಕಟ್ಟೆ ಸಮೀಪದಲ್ಲಿರುವ ಟೌನ್ ಕ್ಲಬ್‌ನಲ್ಲಿ ಆಯೋಜಿಸಲಾಗಿದೆ.
ಎಸ್. ಲಿಂಗಮೂರ್ತಿ ಅವರು ರಾಜ್ಯ ಬಿಜೆಪಿ ಮುಖಂಡರಾಗಿದ್ದು, ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಖನಿಜ ನಿಗಮ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading