ಹೊಸದುರ್ಗ: ಕಾಂಗ್ರೆಸ್ ಸರಕಾರದಲ್ಲಿ ಉಪ್ಪಾರ ಜನಾಂಗದ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡಬೇಕು. ಅಪೂರ್ಣಗೊಂಡಿರುವ ಭಗೀರಥ ಏಕಾಶಿಲ ಮೂರ್ತಿ, ಭುವನೇಶ್ವರಿ ಕಲ್ಲಿನ ರಥ, ಸಮುದಾಯ ಭವನ ನಿರ್ಮಾಣಕ್ಕೆ ಸರಕಾರ ಅನುದಾನ ಒದಗಿಸಬೇಕು ಎಂದು ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ತಾಲೂಕಿನ ಬ್ರಹ್ಮವಿದ್ಯಾನಗರದ ಭಗೀರಥ ಪೀಠದಲ್ಲಿ ಸೋಮವಾರ ಸಂಜೆ ನಡೆದ ೨೬ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಉಪ್ಪಾರ ನಿಗಮಕ್ಕೆ ೫೦ ಕೋಟಿ ರೂ ಅನುದಾನ ನೀಡಬೇಕು. ಇಲ್ಲದಿದ್ದರೆ ಈ ಹಿಂದೆ ಇದ್ದಂತೆ ದೇವರಾಜು ಅರಸು ನಿಗಮದ ಮೂಲಕವೇ ನಮ್ಮ ಉಪ್ಪಾರ ಜನಾಂಗಕ್ಕೆ ಸೌಲಭ್ಯಗಳನ್ನು ಒದಗಿಸಬೇಕು. ಹಾಗೆಯೇ ನಿಗಮಕ್ಕೆ ಕೂಡಲೇ ಪದಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಅತ್ಯಂತ ಹಿಂದುಳಿದ ಉಪ್ಪಾರ ಸಮಾಜದ ಅಭಿವೃದ್ದಿಗೆ ಕಳೆದ ೨೬ ವರ್ಷಗಳಿಂದ ಕಟಿಬದ್ದವಾಗಿ ಶ್ರಮಿಸುತ್ತಿದ್ದೇವೆ. ಗುರು ಪರಂಪರೆಯಲ್ಲಿ ಬೆಳೆದು ಬಂದ ಹಾದಿಯಲ್ಲಿ ಸಾಗುತ್ತಿರುವ ಭಗೀರಥ ಪೀಠ ಇಂದು ಎಲ್ಲ ಭಕ್ತರ ಸಹಕಾರದೊಂದಿಗೆ ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತಿದ್ದು, ಶಾಲಾ ಕಾಲೇಜುಗಳನ್ನು, ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಮಾಡುತ್ತಿದ್ದೇವೆ. ಸಮಾಜದ ಸಂಘಟನೆಗೆ ನಿರಂತರ ಜÁಗೃತಿ ಕಾರ್ಯಕ್ರಮಗಳು, ಸಮಾಜದ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶ್ರೀ ಮಠ ಮಾಡುತ್ತಿದೆ ಎಂದರು.
ಸರ್ಕಾರದಿAದ ಹಲವಾರು ಕೆಲಸಗಳು ಆಗಬೇಕಿದೆ. ಭುವನೇಶ್ವರಿ ಕಲ್ಲಿನ ರಥ ಹಾಗೂ ಭಗೀರಥ ಏಕಶಿಲಾ ಮೂರ್ತಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಶ್ರೀಮಠದ ಆವರಣದಲ್ಲಿ ಪ್ರಕೃತಿ ಚಿಕಿತ್ಸಾಲಯ ಆರಂಭಿಸುವ ಉದ್ದೇಶವಿದೆ. ಮುಂದಿನ ದಿನಗಳಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಎಲ್ಲಾ ಕಾರ್ಯಗಳಿಗೆ ಸರ್ಕಾರದ ಸಹಕಾರ ಅಗತ್ಯವಿದೆ ಎಂದರು.
ಗAಗಾ ನದಿ ಉಗಮವಾಗಿರುವುದು ಭಗೀರಥ ಮಹರ್ಷಿಗಳಿಂದ ಈ ಸಮುದಾಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬರಲಿ. ಉಪ್ಪಾರ ಶ್ರೀಮಠದ ೫೦೦ ಎಕರೆ ಭೂಮಿಯನ್ನು ಮುಂದಿನ ೨೦ ವರ್ಷಗಳವರೆಗೂ ನೋಂದಣಿ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಶ್ವಾಸನೆ ನೀಡಿದರು.
ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸಮಾಜವನ್ನು ಮೇಲೆತ್ತಲು ಭಗೀರಥ ಶ್ರೀಗಳು ಶ್ರಮಿಸುತ್ತಿದ್ದಾರೆ. ಭಗಿರಥ ಸಮಾಜ ಸೇರಿದಂತೆ ರಾಜ್ಯದ ಸಣ್ಣ ಸಣ್ಣ ಸಮುದಾಯಗಳ ಜೊತೆ ನಾನು ಸದಾ ನಿಲ್ಲುವ ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡಿದರು.
ರಾಜ್ಯ ಆಹಾರ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಿ ಜಿ ಗೋವಿಂದಪ್ಪ ಮಾತನಾಡಿ, ಪುರುಷೋತ್ತಮಾನಂದಪುರಿ ಶ್ರೀಗಳ ಮೊದಲ ಪಟ್ಟಾಭಿಷೇಕದಲ್ಲಿ ನಾನು ಭಾಗವಹಿಸಿದ್ದೆ. ಹಾಗೆ ೨೬ ವರ್ಷದ ನಂತರದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿಯೂ ಇದ್ದೇನೆ. ಇಷ್ಟು ದೀರ್ಘಕಾಲದ ಶಾಸಕ ಅವಧಿಯನ್ನು ಪೂರೈಸಲು ಪೂಜ್ಯ ಪುರುಷೋತ್ತಮಾನಂದ ಶ್ರೀಗಳ ಆಶೀರ್ವಾದವಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ರವರು ಶ್ರೀ ಮಠದ ಬಗ್ಗೆ ಅಪಾರವಾದ ಗೌರವ ಇಟ್ಟು ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತೋಷದಾಯಕ ಸಂಗತಿ ಎಂದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಾನವನ ಆಯುಷ್ಯ ನೂರು ವರ್ಷವೆಂದು ಪರಿಗಣಿಸಬಹುದು. ನೂರು ವರ್ಷದ ಅವಧಿಯಲ್ಲಿ ಎಂತಹ ಕೆಲಸವನ್ನು ಮಾಡಬೇಕು ಎನ್ನುವುದು ಬಹಳ ಮುಖ್ಯ. ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದಕ್ಕಿಂತ ಬದುಕಿದ ಅವಧಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಮಾಜವನ್ನು ಕಟ್ಟಿ ಬೆಳೆಸಿದ್ದೇವೆ ಎನ್ನುವುದು ಬಹಳ ಮುಖ್ಯ
ಶಾಲು, ಹಾರ, ಕೃತಿಗಳನ್ನು ನೀಡಿ ಗೌರವಿಸಿ ಮಾತನಾಡಿದರು.
ಯಾಕೆಂದರೆ ಸಮಾಜ ನಮ್ಮನ್ನು ಈ ಸ್ವಾಮಿತ್ವದ ಸ್ಥಾನದಲ್ಲಿ ಕೂರಿಸಿದೆ. ಕೂತ್ಮೇಲೆ ನಾವು ವೈಭವದಿಂದ ಮೆರೆಯೋದಕ್ಕಿಂತ ಹೆಚ್ಚಾಗಿ ಸಮಾಜ ವೈಭವದಿಂದ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಬೇಕಾಗಿರುವಂಥದ್ದು ಶಿಸ್ತು, ಸಂಸ್ಕೃತಿ, ಶಿಕ್ಷಣ ಸಂಘಟನೆ. ಇವುಗಳು ಇದ್ದಾಗ ಯಾವ ಸಮಾಜವಾದರೂ ಅಭಿವೃದ್ಧಿ ಹೊಂದಲು ಸಾಧ್ಯ eಒಜಡಿu.
ಪುರುಷೋತ್ತಮಾನಂದಪುರಿ ಸ್ವಾಮಿಗಳವರು ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಜವಾಬ್ದಾರಿ ವಹಿಸಿಕೊಂಡು ಸಮಾಜ ಮೆಚ್ಚುವ ಹಾಗೆ ಸೇವಾ ಕಾರ್ಯಗಳನ್ನು ಮಾಡುತ್ತಾ, ಜನರಲ್ಲಿ ಜಾಗೃತಿಯನ್ನುಂಟು ಮಾಡುತ್ತಿದ್ದಾರೆ. ಪೂಜ್ಯರಿಗೆ ಪಟ್ಟಾಭಿಷೇಕ ಆಗಿ ಇಂದಿಗೆ ೨೬ ವರ್ಷ ಆಯಿತು. ನಮ್ಮ ದೃಷ್ಟಿಯಲ್ಲಿ 26 ವರ್ಷ ಎನ್ನುವುದು ದೊಡ್ಡದೇನಲ್ಲ.ಒಳ್ಳೆಯ ಕಾರ್ಯಗಳನ್ನು ಪ್ರಾರಂಭಿಸಿದರೆ ವಿಘ್ನಗಳು ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುವವು. ಅವುಗಳೇ ನಮ್ಮ ಸಂಪತ್ತೆಂದು ಭಾವಿಸಿಕೊಳ್ಳಬೇಕು. ಯಾರಿಗೆ ಯಾವ ವಿಘ್ನಗಳು ಇಲ್ವೋ ಅವರು ಪ್ರಗತಿ ಹೊಂದಲು ಸಾಧ್ಯವಿಲ್ಲ. ವಿಘ್ನಗಳು ಬಂದಾಗ ಪುಟಿದೇಳುವಂಥ ನೈತಿಕ ನೆಲೆಗಟ್ಟು ಬೆಳೆಸಿಕೊಳ್ಳಬೇಕು. ಆ ಹಿನ್ನಲೆಯಲ್ಲಿ ಸ್ವಾಮೀಜಿಯವರು ಬಹಳ ಒಳ್ಳೆಯ ಸೇವಾಕಾರ್ಯಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಣ್ಣ ನೀರಾವರಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಭೋಸರಾಜು ಮಾತನಾಡಿ ಜೀವನದಲ್ಲಿ ಅಮೂಲ್ಯವಾದದ್ದು ಧರ್ಮ, ಸಂಸ್ಕಾರ. ಸಂಸ್ಕೃತಿ, ಧರ್ಮ ಮತ್ತು ಸಂಸ್ಕಾರ ಇವುಗಳ ಕೇಂದ್ರ ಬಿಂದು ಎಂದರೆ ಅದು ಶೈಕ್ಷಣಿಕ ಸಂಸ್ಧೆಗಳು ಮಠಮಾನ್ಯಗಳು, ದೇವಾಲಯಗಳು, ಅವುಗಳು ಧರ್ಮಕ್ಕಾಗಿ ತಮ್ಮನ್ನ ತಾವು ಸದಾ ತೋಡಗಿಸಿಕೊಂಡಿರುತ್ತವೆ, ನಮ್ಮ ಬದುಕು ಧಾರ್ಮಿಕ ವಿಧಿ ವಿಧಾನಗಳ ಜೋತೆ ಹೋಗಿದ್ದೆ ಆದರೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು
ಈ ಸಂಧರ್ಬದಲ್ಲಿ ಸಚಿವ ಸಂತೋಷ್‌ಲಾಡ್, ಶಾಸಕ ಬಿ.ಜಿ.ಗೋವಿಂದಪ್ಪ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ,ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾ ಸಂಸ್ಧಾನ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ,ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ,ಬೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಸೇವಲಾಲ್ ಸ್ವಾಮೀಜಿ, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.