January 30, 2026
IMG-20250211-WA0201.jpg

ಚಳ್ಳಕೆರೆ: ಗ್ರಾಮೀಣ ಭಾಗದ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಹೈನುಗಾರಿಕೆ ಪದ್ಧತಿಯನ್ನು ಹೆಚ್ಚಿನ ರೀತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬನೆ ಜೀವನವನ್ನು ನಡೆಸಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದರು. 

ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಳೆಯ ಆಶ್ರತ ಪ್ರದೇಶದ ಆದಾಯ ಉತ್ಪನ್ನ ಮಾರ್ಗಗಳ ಮಾದರಿ ಕೃಷಿ ಅಭಿವೃದ್ಧಿ ಮತ್ತು ಪುನಶ್ಚೇತನ ಯೋಜನೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಹೈನುಗಾರಿಕೆ ಉದ್ಯಮದ ಪುನಸ್ಚೇತನಕ್ಕಾಗಿ ರೈತರಿಗೆ ಹಸುಗಳನ್ನು ಕೊಳ್ಳಲು ಸಬ್ಸಡಿಯಾಗಿ 20,000 ಧನ ಸಹಾಯ ನೀಡುತ್ತಿದ್ದು ಹಾಲಿಗೆ ಐದು ರೂಗಳ ಪ್ರೋತ್ಸಾಹ ಧನವನ್ನು ಸಹ ನೀಡುತ್ತಿದೆ ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು ಈ ಯೋಜನೆ ಜಾರಿಯಿಂದ ಚಿತ್ರದುರ್ಗ ಜಿಲ್ಲೆಗೆ ನಾಲ್ಕು ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು 

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ: ಸರ್ಕಾರ ರೈತರ ಪರವಾಗಿದ್ದು ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸುತ್ತಿದ್ದರು ಸಹ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು ಒಂದು ತಾಲೂಕಿಗೆ ಪ್ರತಿ ತಿಂಗಳು 230 ಕೋಟಿಯಷ್ಟು ಹಣವನ್ನು ವ್ಯಯಿಸುತ್ತಿದೆ ಆದರೂ ಪ್ರತಿಪಕ್ಷಗಳಿಗೆ ಸಮಾಧಾನವಿಲ್ಲ ಗ್ಯಾರಂಟಿ ಯೋಜನೆಗಳನ್ನು ಟಿಕ್ಕಿಸಿದ್ದ ಪ್ರಧಾನಿ ಮೋದಿಯವರು ಸಹ ದೆಹಲಿ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ಜನರ ಕಣ್ಣ ಮುಂದೆ ಇದೆ ರಾಜ್ಯದಲ್ಲಿ ಈ ಹಿಂದೆ ಕುಮಾರಸ್ವಾಮಿ ಸೇರಿದಂತೆ ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳಾಗಿದ್ದರು ಸಹ ಜನಪರವಾದ ಕಾರ್ಯಕ್ರಮಗಳನ್ನು ತರುವಲ್ಲಿ ವಿಫಲರಾಗಿದ್ದರು ಎಂದು ವಾಗ್ದಾಳಿ ನಡೆಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ರೇಣುಕಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 800 ಕುಟುಂಬಗಳು ಹೈನುಗಾರಿಕೆ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ಲಾಭಗಳಿಸುತ್ತವೆ ಈ ಉತ್ಪಾದಕ ಸಂಘದ ವತಿಯಿಂದ ಪ್ರತಿದಿನ 13೦೦ ಲೀಟರ್ ನಷ್ಟು ಹಾಲು ಉತ್ಪಾದನೆಯಾಗುತ್ತಿದ್ದು ರೈತರು ಎರಡು ಕೋಟಿಯಷ್ಟು ಆದಾಯ ಗಳಿಸಿ ತಮ್ಮ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಅಮೃತ ಮಹಲ್ ಕಾವಲು ಹೋರಾಟ ಸಮಿತಿ ವತಿಯಿಂದ ದೊಡ್ಡ ಉಳ್ಳಾರ್ತಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ರೂಪಿಸಲು ಸಮಿತಿ ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮನವಿ ಸಲ್ಲಿಸಿದರು ಚಳ್ಳಕೆರೆ ನಗರ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡ ಕೋಟಿ ತಿಪ್ಪೇಸ್ವಾಮಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳ ರೈತರಿಗೆ ಕೃಷಿ ಪರಿಕರಗಳನ್ನು ಹಾಗೂ ಬೀಜ ವಿತರಣೆಯಲ್ಲಿ ಸರ್ಕಾರ ರೈತರಿಗೆ ಕೊಡುವ ಸಬ್ಸಿಡಿಯನ್ನು ಎಲ್ಲಾ ರೈತರಿಗೂ ಸಮಾನವಾಗಿ ವಿತರಿಸುವಂತೆ ಮನವಿ ಪತ್ರ ಸಲ್ಲಿಸಿದರು. ಇದೇ ವೇಳೆ ರೇಣುಕಾಪುರ ಗ್ರಾಮಸ್ಥರು ಪಶು ಆಸ್ಪತ್ರೆಯನ್ನು ತೆರೆಯಲು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಅಶೋಕ್ ಪಶು ಇಲಾಖೆ ನಿರ್ದೇಶಕ ರೇವಣ್ಣ ಸೋಮಶೇಖರ್ ಕೃಷಿ ಅಧಿಕಾರಿ ಮಹೇಶ್ ಬಿ ಶಿವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾನಜ್ಜ ನಾಗೇಶ್ ರೆಡ್ಡಿ ಮಂಜುನಾಥ ಕುಮಾರ್ ವಿಶ್ವನಾಥ್ ರೆಡ್ಡಿ ರೆಡ್ಡಿ ಹಳ್ಳಿ ವೀರಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಾಕ್ಸ್ ಮಾಡಿ

ರೈತರ ಸಂತಸ

ಹೈನುಗಾರಿಕೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದಿಂದಾಗಿ ಇಂದು ಹಸುಗಳನ್ನು ಕೊಂಡು ಹಾಲು ಉತ್ಪಾದನೆ ಸೇರಿದಂತೆ ಕೊಟ್ಟಿಗೆ ಗೊಬ್ಬರದ ಸಹಾಯದಿಂದ ಉತ್ತಮ ಬೆಳೆಯುತ್ತಿದ್ದೇವೆ ಅಲ್ಲದೆ ಹಾಲಿನ ಐದು ರೂಗಳ ಪ್ರೋತ್ಸಾಹ ಧನದಿಂದಾಗಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿರುವುದರಿಂದ ಲಕ್ಷಾಂತರ ಸಂಬಳ ಪಡೆಯುವ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ ಎಂದು ರೈತರಾದ ಅಂಬರೀಶ್ ಹಾಗೂ ನರಸಿಂಹಮೂರ್ತಿ ಸಂತಸ ಹಂಚಿಕೊಂಡರು.

ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಟಿ.ರಘುಮೂರ್ತಿ ಕೃಷಿ ಸಚಿವರನ್ನು ಆತ್ಮೀಯವಾಗಿ ಬರಮಾಡಿ ಕೊಂಡು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಚಲುವನಾರಾಯಣಸ್ವಾಮಿ ರೈತರಿಂದ ಮನವಿ ಸ್ವೀಕರಿಸಿದರು.ನಗರಸಭೆ ಅಧ್ಯಕ್ಷೆ ಜಯತುನ್ ಬಿ.ಉಪಾಧ್ಯಕ್ಷ ಸುಮಕ್ಕ ಬರಮಣ್ಣ ಹಾಗೂ ನಗರಸಭೆ ಸದಸ್ಯರು ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading