ಚಳ್ಳಕೆರೆ ಫೆ.11
ಚಳ್ಳಕೆರೆ ತಾಲ್ಲೂಕ್ಕಿನ ಗ್ರಾಮಲೆಕ್ಕಾಧಿಕಾರಿ ಚಂಡಿಗಡದಲ್ಲಿ ಫೆ 19 ರಂದು ನಡೆಯಲಿರುವ ರಾಷ್ಟ್ರಮಟ್ಟದ ಪುರುಷರ 100 ಮೀಟರ್ ರನ್ನಿಂಗ್ ರೇಸ್ ಕ್ರೀಡೆಯಲ್ಲಿ ಭಾಗವಹಿಸುವ ಪ್ರಯುಕ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕ್ ಘಟಕ ವತಿಯಿಂದ ಕ್ರೀಡಾಪಟು ಗ್ರಾಮಲೆಕ್ಕಾಧಿಕಾರಿ ಹಿರಿಯಣ್ಣ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು..
ತಾಲೂಕು ನೌಕರರ ಸಂಘ ಅಧ್ಯಕ್ಷ ಸಿ.ಟಿ.ವೀರೇಶ್ ಮಾತನಾಡಿ ಇಂತಹ ಕ್ರೀಡಾ ಪ್ರತಿಭೆಗಳು ಸರ್ಕಾರಿ ನೌಕರರಲ್ಲಿ ಹೆಚ್ಚಾಗಬೇಕೆಂದು ತಿಳಿಸಿ ಕ್ರೀಡಾಪಟುವಿಗೆ ತನುಮನ ದನ ಸಹಾಯ ಮಾಡಲು ನೌಕರರ ಸಂಘದಿಂದ ನಿರ್ಧರಿಸಿದ್ದೇವೆ ಎಂದು ತಿಳಿಸಿ ಗೆದ್ದು ಕೀರ್ತಿ ತರಲೆಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ತಿಪ್ಪೇಸ್ವಾಮಿ.ಲ ಎಸ್.ಪಿ ತಿಪ್ಪೇಸ್ವಾಮಿ ರಾಜ್ಯ ಪರಿಷತ್ ಸದಸ್ಯೆ ವೆಂಕಟ ಲಕ್ಷ್ಮಮ್ಮ. ಉಪಾಧ್ಯಕ್ಷ ಎಂ.ಶ್ರೀನಿವಾಸ್ ಖಜಾಂಚಿ ರಾಮಚಂದ್ರಪ್ಪ ನಿರ್ದೇಶಕರುಗಳಾದ ಅಶೋಕ್ ಕುಮಾರ್ .ರಾಜಣ್ಣ .ಮಂಜಣ್ಣ ಬಸವರಾಜ್ .ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಕ್ರೀಡಾಪಟುವನ್ನು ಅಭಿನಂದಿಸಿ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಜಯವನ್ನು ಸಾಧಿಸಿ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು.


About The Author
Discover more from JANADHWANI NEWS
Subscribe to get the latest posts sent to your email.