ಚಳ್ಳಕೆರೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭಾನುವಾರ ಚಳ್ಳಕೆರೆಯಲ್ಲಿ ಅನಾವರಣಗೊಳಿಸಿದರು. ಫೆ. ೨೭ ಮತ್ತು ೨೮ ರಂದು ಜಿತ್ರದುರ್ಗ ನಗರದಲ್ಲಿ ೧೮ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ. ಇದರ ಅಂಗವಾಗಿ ಸಮ್ಮೇಳನದ ಲಾಂಛನವನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ಅನಾವರಣಗೊಳಿಸಿದರು. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಸಾಹಿತ್ಯ ಪ್ರೇಮಿಗಳಿಗೆ ಹಬ್ಬವಾಗಿದೆ ಎಂದರು.
ಲಾಂಛನದ ಬಲಬದಿಯಲ್ಲಿ ಕುದುರೆಯ ಮೇಲೆ ಕುಳಿತ ಮದಕರಿನಾಯಕನ ಭಾವಚಿತ್ರ ಇದೆ ಮತ್ತೊಂದು ಬದಿಯಲ್ಲಿ ಏಳು ಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿದ ಒನಕೆ ಓಬವ್ವನ ಭಾವಚಿತ್ರವಿದೆ. ಇದರ ಜೊತೆಗೆ ಭುವನೇಶ್ವರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಲಾಂಛನವನ್ನು ಹೊಂದಿದೆ. ೧೭ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹೊಳಲ್ಕೆರೆಯಲ್ಲಿ ಜರುಗಿತ್ತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ವಿ.ಎಲ್.ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ವಿ.ಶ್ರೀನಿವಾಸ ಮಳಲಿ, ಕೋಶಾಧ್ಯಕ್ಷ ಚೌಳೂರು ಲೋಕೇಶ್, ನಿವೃತ್ತ ಪ್ರಾಂಶುಪಾಲರಾದ ಡಾ.ಸಿ.ಶಿವಲಿಂಗಪ್ಪ, ಡಾ.ಎಂ.ಶಿವಲಿAಗಪ್ಪ, ವೀರಣ್ಣ ಚೌಳೂರು, ಪ್ರಗತಿಪರ ರೈತ ದಯಾನಂದ್, ರೈತ ಮುಖಂಡ ಕೆ.ಪಿ.ಭೂತಯ್ಯ ಮತ್ತಿತರರಿದ್ದರು.
ಪುಸ್ತಕ ಮಳಿಗೆಗಳಿಗೆ ಅವಕಾಶ
ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೆ ಅವಕಾಶ ಒದಗಿಸಲಾಗುವುದು. ಇದರ ಜೊತೆಗೆ ಸಮ್ಮೇಳನ ಜರುಗುವ ಚಳ್ಳಕೆರೆ ಗೇಟ್ ನಲ್ಲಿರುವ ಎಸ್.ಕೆ. ಸಮುದಾಯ ಭವನದಲ್ಲಿ ಪುಸ್ತಕ ಮಾರಾಟ ಮಳಿಗೆ, ಕೃಷಿ, ಸ್ವಸಹಾಯ ಸಂಘಗಳು ಸೇರಿದಂತೆ ನಾನಾ ರೀತಿಯ ಮಾರಾಟ ಮಳಿಗೆಗಳಿಗೆ ಅವಕಾಶವಿದೆ. ಆಸಕ್ತರು ಸಂಪರ್ಕಿಸಿ. ೯೯೭೨೧೫೫೧೭೭, ೯೪೪೯೭೫೯೨೧೯.
About The Author
Discover more from JANADHWANI NEWS
Subscribe to get the latest posts sent to your email.