January 29, 2026
IMG-20260111-WA0133.jpg

ನಾಯಕನಹಟ್ಟಿ-: ಸಮೀಪದ ಮಲ್ಲೂರಹಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಗ್ರಾಮದ ಆರಾಧ್ಯ ದೈವ ಶ್ರೀ ಕೊಲ್ಲಾಪುರದಮ್ಮ ದೇವರ ಸನ್ನಿಧಿಯಲ್ಲಿ ಅಯ್ಯಪ್ಪ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿ ಮಾಲಧಾರಿಗಳು ಸಂಭ್ರಮಾ ಸಡಗರದಿಂದ ಅದ್ದೂರಿಯಾಗಿ ಶಬರಿ ಯಾತ್ರೆಗೆ 80 ಜನ ಮಾಲಾಧಾರಿಗಳು ಶನಿವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಭಜನೆ, ಶರಣಘೋಷದ ನಡುವೆ ದೀಪೋತ್ಸವ, ಪೂಜೆ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ಫಲಪುಷ್ಪ, ಹಣ್ಣುಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ
ಜರುಗಿತು.

ಈ ಸಂದರ್ಭದಲ್ಲಿ ಮಾಲಾಧಾರಿ ಗುರುಸ್ವಾಮಿಗಳಾದ ವಿಜಯಕುಮಾರ್ ಸ್ವಾಮಿ ಮಾತನಾಡಿ,ನಮ್ಮ ಗ್ರಾಮದಲ್ಲಿ ಕಳೆದ್ 36ವರ್ಷಗಳಿಂದ ನಿರಂತರವಾಗಿ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿಕೊಂಡು ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದೇವೆ.ಅಯ್ಯಪ್ಪ
ಸ್ವಾಮಿ ಮಾಲಾಧಾರಿಗಳ ಕಠಿಣ ವ್ರತವು ತಪಸ್ಸು ಇದ್ದಂತೆ. ಭಕ್ತಿಯಿಂದ ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ.ಜೀವನದಲ್ಲಿ ಅಷ್ಟಾಂಗ ಯೋಗಪದ್ದತಿಗಳಾದ ಯಾಮ, ನಿಯಮ, ಯೋಗ, ಆಸನ, ಮಿತ್ಯಾಹಾರ, ಧಾರಣಾ, ಧ್ಯಾನ, ಸಮಾಧಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಮನಸ್ಸು ಏಕಾಗ್ರತೆಯಿಂದ ಯಾವುದೇ ಚಿಂತೆಯಿಲ್ಲದೆ ಆನಂದಮಯವಾಗಿರುತ್ತದೆ ಎಂದರು. ಅಯ್ಯಪ್ಪ 18 ಮೆಟ್ಟಿಲುಗಳಲ್ಲಿ 18 ತತ್ವಗಳನ್ನು ಇವೆ. ಅವುಗಳನ್ನು ಅರಿತು 18 ವರ್ಷಗಳ ಕಾಲ ಯಾರು ಬಂದು ಮೆಟ್ಟಿಲು ಹತ್ತಿ ನನ್ನ ದರ್ಶನ ಮಾಡುತ್ತಾರೋ ಅವರೂ ಮೊಕ್ಷಾಧೀಪತಿ ಆಗುತ್ತಾರೆ ಅದಕ್ಕೆ ಭಗವಂತಾ ಆ ಮೆಟ್ಟಿಲಿನ ಮೇಲೆ ತತ್ವಮಸಿ ಎಂದು ಬರೆದಿದ್ದಾನೆ ಇದರ ಅರ್ಥ ‘ನಾನೇ ನೀನು ನೀನೆ ನಾನು’ ಎಂದಾಗಿದೆ ಹಾಗಾಗಿ ಎಲ್ಲ ಮಾಲಾಧಾರಿಗಳು ವ್ರತ ಮುಗಿದಮೇಲು ಸಮಾಜದಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಬಾಳಿ ಬದುಕಬೇಕು. ಆಗ ನೀವು ಮಾಲೆ ಧಾರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದರು.

ಇದೆ ವೇಳೆಯಲ್ಲಿ ಹಿರೇಹಳ್ಳಿ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಓ. ಮಂಜುನಾಥ್,
ಅಯ್ಯಪ್ಪ ಸ್ವಾಮಿ ಗುರು ಸ್ವಾಮಿಗಳಾದ ದಳವಾಯಿ ಸ್ವಾಮಿ. ವಿಜಯಕುಮಾರ್ ಸ್ವಾಮಿ. ಪಾಲಯ್ಯ ಸ್ವಾಮಿ, ಸುಧೀರ್ ಸ್ವಾಮಿ, ಸೀನಪ್ಪ ಸ್ವಾಮಿ, ನಾಗರಾಜ್ ( ಮೂಕ ಸ್ವಾಮಿ) ರಾಘವಸ್ವಾಮಿ, ರಾಜ ಸ್ವಾಮಿ, ಸೇರಿದಂತೆ ಊರಿನ ಪ್ರಮುಖರು ಹಾಗೂ ಸಮಸ್ತ ಮಲ್ಲೂರಹಳ್ಳಿ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading