ಚಳ್ಳಕೆರೆ ಜ.11.
ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ಘಟದಲ್ಲಿನ ಬಸ್ ಚಾಲಕರು ಖಾಸಗಿ ಬಸ್ ಮಾಲಿಕರೊಂದಿಗೆ ಸಹಕರಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕಾದ ಸಾರಿಗೆ ಚಾಲಕರು ಖಾಸಗಿ ಬಸ್ ಮಾಲಿಕರಿಂದ ಫೊನ್ ಫೇ ಮೂಲಕ ಹಣ ಹಾಕಿಸಿಕೊಂಡು ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್ ಬಿಡದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ. ಎಂಬ ಸುದ್ದಿಯನ್ನು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಕಾಲೇಜು ವಿದ್ಯಾರ್ಥಿಗಳಿಂದ ಮತ್ತೋಂದು ಪ್ರಕರಣ ಬೆಳಕಿಗೆ.

ಹೌದು ಇದು ಚಳ್ಳಕೆರೆ ನಗರ ಸಾರಿಗೆ ಬಸ್ ನಿಲ್ದಾಣದಿಂದ ಪ್ರತಿ ನಿತ್ಯ ರಾತ್ರಿ 7 ಗಂಟೆಗೆ ದೊಡ್ಡಬಾದಿಹಳ್ಳಿಗೆ ಹೋಗುವ ಸಾರಿಗೆ ಬಸ್ ನ್ನು ಖಾಸಗಿ ಬಸ್ ಮಾಲಿಕರ ಒತ್ತಡಕ್ಕೆ ಹಣದ ಆಸೆಗೆ ಎರಡು ಮೂರು ದಿನ ಬಸ್ ಮಾರ್ಗಕ್ಕೆ ಬಿಡುತ್ತಿರಲಿಲ್ಲ ಪ್ರತಿ ನಿತ್ಯ 20 ಕ್ಕೂ ಹೆಚ್ಚು ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದ ನಂತರ ಬೇರೆ ಬಸ್ ವ್ಯವಸ್ಥೆಮಾಡುತ್ತಿದ್ದರು.
ಈಗ ಏಕಾಏಕಿ ಸುಮಾರು ಮೂರು ತಿಂಗಳಿಂದ ರಾತ್ರಿ 7 ಗಂಟೆಗೆ ಬಿಡ ಬೇಕಾದ ಸಾರಿಗೆ ಬಸ್ಸನ್ನು ಬೆಂಗಳೂರು ಮಾರ್ಗಕ್ಕೆ ಬಿಟ್ಟಿದ್ದು ಸರಕಾರಿ ಬಸ್ ಮಾರ್ಗ ಇದೆ ಆದರೆ ಈ. ಸರಕಾರಿ ಬಸ್ ಪರವಾನಿಗೆ ಲೈನ್ಗೆ ಖಾಸಗಿ ಬಸ್ ಮಾಲಿಕರಿಂದ ಕಮಿಷನ್ ಪಡೆದು ಸರಕಾರಿ ಬಸ್ ಬದಲಿಗೆ ಖಾಸಗಿ ಬಸ್ ಬರುತ್ತಿದ್ದು ಇದರಿಂದ ದೊಡ್ಡ ಬಾದಿಹಳ್ಳಿ ಗ್ರಾಮದಿಂದ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಸುಮಾರು 70 ಕಿ.ಮೀ ಹೋಗ್ತಾ ಬರ್ತಾ 140 ಕಿ.ಮೀ ದೂರ ಖಾಸಗಿ ಬಸ್ಸಿ ಗೆ ಹಣ ನೀಡಿ ಹೋಗುವ ಅನಿವಾರ್ಯವಾಗಿದ್ದು.
ಇದರಿಂದ ವಿದ್ಯಾರ್ಥಿಗಳ ಸಾರಿಗೆ ಬಸ್ ಪ್ರಾಯಾಣ ಪಾಸ್ ಹಾಗೂ ಸರಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದ ವಂಚಿತರಾಗುವ ಜತೆಗೆ ಸರಕಾರಿ ಬಸ್ ಬದಲು ಖಾಸಗಿ ಬಸ್ ಸಂಚರಿಸುವುದರಿಂದ. ರಾಜ್ಯ ರಸ್ತೆ ಸಾರಿಗೆ ನಿಗಮದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ.
ಘಟಕದ ವ್ಯವಸ್ಥಾಪಕ ಸಂಪರ್ಕ ಕಡಿತ.
ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾರಿಗೆ ಡಿಪೋಗೆ ಮನವಿ ನೀಡಲು ಹೋದರೆ ಕಂಪ್ಯೂಟರ್ ಮುಂದೆ ಕುಳಿತು ಮ್ಯಾನೇಜರ್ ಇಲ್ಲ ಎಂದು ಹೇಳಿ ಮನವಿ ಸ್ವೀಕರಿಸಿ ಕಳಿಸಿ ಎಂದು ಹೇಳಿ ಕಳಿಸುತ್ತಾರೆ.
8 ಜನ ಚಾಲಕ ನಿರ್ವಾಹಕರು ಅಮಾನತು ವಿಷಯ ತಿಳಿದ ಪತ್ರಕರ್ತರು ಸಂಪರ್ಕಿಸಿ ಅಮಾನತು ಬಗ್ಗೆ ಮಾಹಿತಿ ಕೇಳಿದರೆ ಕೆರೆ ಕಟ್ ಮಾಡುತ್ತಾರೆ. ಸಾರಿಗೆ ಘಟಕ್ಕೆ ಹೋದರೂ ಸಹ ನಾನು ವಿಸಿ ಯಲ್ಲಿದ್ದೇನೆ ನಾನೇ ಕರೆ ಮಾಡುತ್ತೇನೆ ಎಂದು ಹೇಳಿದರೂ ಸಹ ಕರೆ ಮಾಡಿಲ್ಲ ಪತ್ರಕರ್ತರ ಕರೆಯೂ ಸ್ವೀಕರಿಸುತ್ತಿಲ್ಲ ಡಿಪೋ ವ್ಯವಸ್ಥಾಪಕರು.
ಖಾಸಗಿ ಬಸ್ ಇಲ್ಲದ ರೂಟ್ ಗಳಲ್ಲಿ ಸರಕಾರಿ ಬಸ್ ಓಡಿಸಬೇಕು ಆದರೆ ಚಳ್ಳಕೆರೆ ಸಾರಿಗೆ ಡಿಪೋ ಮಾತ್ರ ಸಕಾರಿ ಬಸ್ ರೂಟ್ ಗೆ ಖಾಸಗಿ ಬಸ್ ಓಡಿಸಲು ಬಿಟ್ಟಿರುವುದು ಮಾತ್ರ ದೊಡ್ಡ ದುರಂತ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಗ್ರಾಮೀಣ ರಸ್ತೆಗಳಿಗೆ ಸರಕಾರಿ ಬಸ್ ಓಡಿಸುವರೇ ಕಾದು ನೋಡ ಬೇಕಿದೆ.






About The Author
Discover more from JANADHWANI NEWS
Subscribe to get the latest posts sent to your email.