ಚಳ್ಳಕೆರೆ ಜ.11
ಸಾರಿಗೆ ಸಂಸ್ಥೆಗಳ ನಷ್ಟ ತಪ್ಪಿಸೋಕೆ ಬಸ್ ದರ ಏರಿಕೆ ಮಾಡಿದರೆ ಇತ್ತ ಸಾರಿಗೆ ಬಸ್ ಚಾಲಕರು ಖಾಸಗಿ ಬಸ್ ಮಾಲಿಕರಿಂದ ಹಣ ಪಡೆದ 8 ಜನ ಅಮಾನತು ಆಗಿರುವುದು ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರದ ಸರಕಾರಿ ಸಾರಿಗೆ ಬಸ್ ಘಟದಲ್ಲಿನ ಬಸ್ ಚಾಲಕರು ಖಾಸಗಿ ಬಸ್ ಮಾಲಿಕರೊಂದಿಗೆ ಸಹಕರಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಬಿಡಬೇಕಾದ ಸಾರಿಗೆ ಚಾಲಕರು ಖಾಸಗಿ ಬಸ್ ಮಾಲಿಕರಿಂದ ಫೊನ್ ಫೇ ಮೂಲಕ ಹಣ ಹಾಕಿಸಿಕೊಂಡು ಗ್ರಾಮೀಣ ಭಾಗಕ್ಕೆ ಸರಿಯಾಗಿ ಬಸ್ ಬಿಡದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ.
ಖಾಸಗಿ ಬಸ್ ಮಾಲಿಕ ಪ್ರವೀಣ್ ರಾಜ್ಯ ರಸ್ತೆ ಸಾರಿಗೆ ಚಾಲಕ ಹಾಗೂ ನಿರ್ವಾಹರ ವಿರುದ್ದು ದೂರು ನೀಡಿದ ಬೆನ್ನಲ್ಲೇ 8 ಜನ ಬಸ್ ಚಾಲಕರನ್ನು ಅಮಾನತು ಮಾಡಲಾಗಿದ್ದು ತನಿಖೆ ಮಾಡಿದರೆ ಇನ್ನು ಹಲವು ಚಾಲಕರು ಖಾಸಗಿ ಬಸ್ ಮಾಲಿಕರಿಂದ ಹಣ ಪಡೆದಿರುವುದು ಬಯಲಾಗಲಿದೆ.




ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ ಮಂಜುನಾಥ, ಜಗದೀಶ.ಆರ್, ರವಿಕುಮಾರ.ಎಸ್. ಪ್ರಕಾಶ.ಈ. ಸಿದ್ದಲಿಂಗಯ್ಯ ಮಠಪತಿ, ಮಹಾಸ್ವಾಮಿ ಇವರು ಖಾಸಗಿ ಬಸ್ ಮಾಲೀಕರ ಮತ್ತು ನಿರ್ವಾಹಕರಿಂದ ದಿನವೊಂದಕ್ಕೆ ರೂ:200 ಗಳನ್ನು ಪೋನ್‌ಪೇ ಮುಖಾಂತರ
ಮತ್ತು ನಗದಾಗಿ ಹಣ ಪಡೆದು ಚಿತ್ರದುರ್ಗ-ಪಾವಗಡ-ಚಿತ್ರದುರ್ಗ, ಚಿತ್ರದುರ್ಗ-ಮಲ್ಲಸಮುದ್ರ
ಮಾರ್ಗಗಳಲ್ಲಿ ನಿಗಮದ ವಾಹನಗಳನ್ನು ಸರಿಯಾಗಿ ಕಾರ್ಯಾಚರಣೆ ಮಾಡದೇ ಸಂಸ್ಥೆಗೆ ಮತ್ತು ಸಾರಿಗೆ ಆದಾಯ ನಷ್ಟವಾಗಲು ಕಾರಣರಾಗಿರುತ್ತಾರೆ. ಡಿಪೋ ಮ್ಯಾನೇಜರ್, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕೆ.ಎಸ್.ಆರ್.ಟಿ.ಸಿ., ಚಿತ್ರದುರ್ಗ ವಿಭಾಗ, ಚಿತ್ರದುರ್ಗ ಮಂಜುನಾಥ ಇವರ ಮೇಲೆ ದೂರು ನೀಡಿದ್ದು,
ನಿಯಂತ್ರಾಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಭದ್ರತಾ ಮತ್ತು ಜಾಗೃತಿ ಶಾಖೆಯ
ಬೆಂಗಳೂರು ಇವರಿಗೆ ಫೋನ್ ಮುಖಾಂತರ ವಿಚಾರ ತಿಳಿಸಿ ಅವರು ದೂರು ನೀಡಿದಾಗ ತನಿಖೆ ನಡೆಸಿ ಎಂಟು ಜನರನ್ನು ಅಮಾನತು ಮಾಡಿದ್ದಾರೆ.
ನೀನು ಕೊಟ್ಟಿರುವಂತಹ ದೂರ
ನಿಯಂತ್ರಾಣಾಧಿಕಾರಿಗಳ ಕಛೇರಿಯಲ್ಲಿ ಮೇಲಾಧಿಕಾರಿಗಳು ನಮ್ಮ ಹತ್ತಿರ ಲಿಖಿತ ಹೇಳಿಕೆಯನ್ನು ಪ್ರತಿಗಳನ್ನು ವಾಟ್ಸಪ್ ಮುಖಾಂತರ ಕಳುಹಿಸಿದ ನಂತರ ಅದೇ
ದಿನ ಚಿತ್ರದುರ್ಗ ವಿಭಾ ತೆಗೆದುಕೊಂಡು ಕಾನೂನು ಕ್ರಮ ಕೈಗೊಂಡಿರುತ್ತಾರೆ.






ಸಾರಿಗೆ ಸಚಿವ ರಾಮಲಿಂಗರೆಡ್ಡಯವರು ಚಳ್ಳಕೆರೆ ಸಾರಿಗೆ ಡಿಪೋ ಕಡೆ ಗಮನ ಹರಿಸ ಬೇಕಿದೆ.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯರು ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ಹಾಗೂ ಸಾರಿಗೆ ಘಟಕ ಪ್ರಾರಂಭಿಸಿದರೂ ಸಹ ಗ್ರಾಮೀಣ ಭಾಗಕ್ಕೆ ಸಾರಿಗೆ ಬಸ್ ಸಂಚಾರ ವಿಲ್ಲದೆ ದಿನ ನಿತ್ಯ ಪರದಾಡುವಂತಾಗಿದೆ.
ಇತ್ತ ಸಾರಿಗೆ ಬಸ್ ಸಿಬ್ಬಂದಿಗಳು ಖಾಸಗಿ ಬಸ್ ಮಾಲಿಕರಿಂದ ಹಣ ಪಡೆದು ಬಸ್ ಸಂಚಾರ ಮಾಡದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳ ಬೇಕಿದೆ.
About The Author
Discover more from JANADHWANI NEWS
Subscribe to get the latest posts sent to your email.