January 29, 2026
IMG-20251210-WA0276.jpg

ನಾಯಕನಹಟ್ಟಿ : ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಗೌರವ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಗೌರವ ಹಾಗೂ ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ನಾಯಕನಹಟ್ಟಿ ಠಾಣಾಧಿಕಾರಿ ಜಿ ಪಾಂಡುರಂಗಪ್ಪ ಹೇಳಿದರು.ಹೋಬಳಿಯ ಎನ್ ದೇವರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗ, ಚಳ್ಳಕೆರೆ ಉಪ ವಿಭಾಗ ಹಾಗೂ ತಳಕು ವೃತ್ತ ಮತ್ತು ನಾಯಕನಹಟ್ಟಿ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಒಂಟಿ ಮಹಿಳೆಯರು ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ವಿಳಾಸ ಹಾಗೂ ಯಾವುದೇ ರೀತಿಯ ಮಾಹಿತಿ ಕೇಳಿದಾಗ ಅಂತವರಿಂದ ಜಾಗೃತರಾಗಿರಬೇಕು. ಏಕೆಂದರೆ ಅವರು ವಿಳಾಸ ಕೇಳುವ ನೆಪ ಹೇಳಿ ನಿಮ್ಮಲ್ಲಿರುವ ಬೆಲೆಬಾಳು ವಸ್ತುಗಳನ್ನು ಕಳವು ಮಾಡುವ ಅವಕಾಶವಿರುತ್ತದೆ.ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಮೂರು ನಾಲ್ಕು ಬಾರಿ ಓಡಾಡುವುದು ಕಂಡು ಬಂದರೆ , ಅಂಥವರ ಮೇಲೆ ನಿಗ ವಹಿಸಿ , ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಿದರೆ ಅಪರಾಧ ಆಗುವುದನ್ನು ತಡೆಯಬಹುದು. ಗ್ರಾಮದ ಒಂಟಿಮನೆ, ಅಂಗಡಿ, ದೇವಸ್ಥಾನ, ತೋಟ, ಶಾಲಾ ಹಾಗೂ ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಿಕೊಂಡರೆ ಅಪರಾಧವಾಗುವುದನ್ನು ತಡೆಯಬಹುದು. ಎಷ್ಟೋ ಕಳ್ಳರು ಸಿಸಿ ಕ್ಯಾಮೆರಾ ಇರುವುದನ್ನು ಗಮನಿಸಿ ಅಪರಾಧ ಕೃತ್ಯ ವ್ಯಸಗದೆ ಆ ಜಾಗದಿಂದ ಪರಾರಿಯಾಗಿರುವ ಉದಾಹರಣೆಗಳಿವೆ. ಅಪರಾಧಗಳನ್ನು ತಡೆಯಲು ಗ್ರಾಮಗಳ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ನೇರಲಗುಂಟೆ ಬ್ಯಾಂಕ್ ಸೂರನಾಯಕ, ಜಿ ತಿಪ್ಪೇಸ್ವಾಮಿ, ಪಿ.ಜಿ. ಬೋರಣ್ಣ, ಮಲ್ಲಿಕಾರ್ಜುನ, ಮುದಿಯಪ್ಪ, ಜಿ ಎಂ ಜಯಣ್ಣ, ವಕೀಲರಾದ ಉಮಾಪತಿ, ಹಿರೇಹಳ್ಳಿ ಮಲ್ಲೇಶ್,ಗುಂತಕೋಲ್ಮನಹಳ್ಳಿ ಮಲ್ಲೇಶ್, ನಾಯಕನಹಟ್ಟಿ ಪೊಲೀಸ್ ಠಾಣೆಯ ಎಎಸ್ಐ ತಿಪ್ಪೇಸ್ವಾಮಿ, ಅಣ್ಣಪ್ಪ ನಾಯ್ಕ, ಶಿವರಾಜ್, ಶ್ರೀಹರಿ, ಲೋಹಿತ್, ವೀರೇಶ್ ಮಹೇಶ್ ಇನ್ನು ಮುಂತಾದವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading