ಹೊಸದುರ್ಗ ಡಿ. 10 :- ಸಾಹಿತ್ಯ ದಿಂದ ಈ ನೆಲದ ಸಾಂಸ್ಕ್ರತಿಕ ಬದುಕು ಕಟ್ಟುವ ಕೆಲಸ ಆಗಬೇಕು ನೆಲ ಜಲ , ಸಂರಕ್ಷಣೆ . ವಿದ್ಯಾಥಿ೯ ದಿಸೆ ಯಿಂದಲೇ ಅದು ಆಗಬೇಕು ನೆಲಮೂಲದ ಕವಿ ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ಪ್ರತಿ ಶಾಲಾ ಕಾಲೇಜುಗಳಲ್ಲಿ ನಾಡಿನ ಕವಿ ,ಕಾವ್ಯ ,ಕಥೆಗಳನ್ನು ವಿದ್ಯಾಥಿ೯ ಗಳಿಗೆ ಪರಿಚಯಿಸುವ ಕೆಲಸವನ್ನು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಮಾಡುತ್ತಿದೆ ಎಂದು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಯ ಅಧ್ಯಕ್ಷ ಗೋ.ತಿಪ್ಪೇಶ್ ತಿಳಿಸಿದರು
ಅವರು ಶ್ರೀರಾಂಪುರದ ಹೋಬಳಿಯ ನಾಯಿಗೆರೆ ಬಳಿ ಇರುವ ಇಂದಿರಾ ಗಾಂಧಿ ವಸತಿಯುತ ಶಾಲೆ ಯಲ್ಲಿ ಆಯೋಜಿಸಿದ್ದ ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಕುರಿತು ವಿದ್ಯಾಥಿ೯ ಗಳೊಂದೆ ನಡೆಸಿದ ಚಿಂತನ – ಮಂಥನ ಸಂವಾದ ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕಾಯ೯ ಕ್ರಮ ವನ್ನು ಉದ್ಘಾಟಸಿದ ಹಿರಿಯ ಸಾಹಿತಿ ನಿ.ವೃ ಪ್ರಾಚಾರ್ಯ ರಾದ ಪಿ.ಎಲ್.ಲೋಕೇಶ್ ಮಾತನಾಡಿ ತಾಲ್ಲೂಕಿನಲ್ಲಿ ಸಾಹಿತ್ಯ ಕವಿ ಕಾವ್ಯ ,ಕಥತೆಗಳ ಕುರಿತು ,ಚಿಂತನ – ಮಂಥನ ಕಾಯ೯ಕ್ರಮ ಗಳು ಬಹಳಷ್ಟು ಕಡಿಮೆ ಆಗುತ್ತಿದ್ದು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಯ ಅಧ್ಯಕ್ಷ ಗೋ.ತಿಪ್ಪೇಶ್ ಮತ್ತು ತಂಡ ಅತ್ಯುತ್ತಮ ವಾದ ಕಾಯ೯ಕ್ರಮ ಕ್ರಮ ನಿಜಕ್ಕೂ ಶ್ಲಾಘನೀಯ ಎಂದ ಅವರು ಸಾಹಿತ್ಯ ಮನುಷ್ಯ ಮನುಷ್ಯ ನನ್ನಾಗಿ ಬದುಕಲು ಸಂಸ್ಕಾರ ವನ್ನು ಕಲಿಸುತ್ತದೆ , ಸಾಹಿತ್ಯ ಜನ ಜೀವನದ ಪ್ರತಿ ಬಿಂಬ ವಿದ್ಯಾಥಿ೯ ಗಳು ಹೆಚ್ಚು ಇಂತಹ ಸಾಹಿತ್ಯ ಚಟುವಟಿಕೆ ಗಳಲ್ಲಿ ಭಾಗವಹಿಸಿ ಬೇಕು ಎಂದು ತಿಳಿಸಿದರು.
ಛೂಮಂತ್ರಯ್ಯನ ಕಥೆಗಳು ಕುರಿತು ಹುಳಿಯಾರ್ ನ ಸಾಹಿತಿ ,ಚಿಂತಕ ,ಪತ್ರಕತ೯ ಕಿರಣ್ ಕುಮಾರ್ ಬಿಳಿಗೆರೆ ಕೃಷ್ಣಮೂತಿ೯ ಅವರ ಛೂಮಂತ್ರಯ್ಯನ ಕಥೆಗಳು ಬಹಳ ಅಪರೂಪದ ಕಥೆ ಗಳು ನಾವು ಆಧುನಿಕ ಜಗತ್ತಿಗೆ ತೆರೆದು ಕೊಂಡಿದ್ದು ನಮ್ಮ ಸಾವಯವ ಕೃಷಿ ಬದುಕು ಸಾಹಿತ್ಯ ,ಸಂಸ್ಕೃತಿ, ಬಗ್ಗೆ ಹೆಚ್ಚು ಗಮನ ಕೊಡುತ್ತಿಲ್ಲ ಮೊಬೈಲ್ ಒಂದೇ ಎಲ್ಲಾ ನಮಗೆ ಎಂದು ಭ್ರಮಿಸಿದ್ದೇವೆ.

ಭ್ರಮಿಸಿದ್ದೇವೆ ಇದು ತುಂಬಾ ಅಪಾಯಕಾರಿ ಬೆಳವಣಿಗೆ ನಾವು ಧುನಿಕತೆಯ ಜೊತೆಗೆ ಸಾಹಿತ್ಯ ದ ಕೃಷಿ ಬದುಕು ಗಟ್ಟಿ ಗೊಳಿಸಿ ಬೇಕಾಗಿದೆ ಬಿಳಿಗೆರೆಯವರು ಅವರು ಅವರ ಕಥೆಗಳು ನಮ್ಮನ್ನೆಲ್ಲ ಆಕಡೆ ಕರೆದು ಹೋಗುತ್ತವೆ ನಿಜಕ್ಕೂ ವಿದ್ಯಾಥಿ೯ ಗಳು ಹೆಚ್ಚು ಹೆಚ್ಚು ಓದುವ ಮೂಲಕ ಕವಿಯ ಆಶಯ ದಂತೆ ನಾವು ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಛೂಮಂತ್ರಯ್ಯನ ಕಥೆಗಳ ಕೃತಿ ರಚನೆಕಾರ ಬಿಳಿಗೆರೆ ಕೃಷ್ಣಮೂತಿ೯ ಮಾತನಾಡಿ ಛೂಮಂತ್ರಯ್ಯನ ಕಥೆಗಳ ಪ್ರೀತಿಯ ಪಾತ್ರ ಅಂತ:ಕರಣದ ನುಡಿ ,ಗ್ರಾಮೀಣ ಕೃಷಿ ನಾಡಿ ಮಿಡಿತ ವನ್ನು ಮಾತನಾಡಿಸಿ ನಮ್ಮ ನೆಲದ ಸಾವಯ ಕೃಷಿಯ ಬದುಕು ಮರೆತರೆ ನಾವು ವಿನಾಶದ ಅಂಚಿಗೆ ಹೋಗುತ್ತೆವೆ ವೈಜ್ಞಾನಿಕತೆಯ ಜೊತೆ ಜೊತೆಗೆ ನಮ್ಮ ಕೃಷಿ ಯ ಕಡೆ ಮತ್ತೆ ಬರಬೇಕಾಗಿದೆ ಅದು ವಿದ್ಯಾಥಿ೯ ದಿಸೆಯಿಂದಲೆ ಬರಬೇಕು ಅದಕ್ಕೆ ನಾವು ಹೆಚ್ಚು, ಹೆಚ್ಚು ಸಾಹಿತ್ಯ ವನ್ನು ಓದ ಬೇಕು.ಆಗ ನಮಗೆ ಬುದ್ದ ,ಬಸವ ,ಅಂಬೇಡ್ಕರ್ ,ಅಥ೯ವಾಗುತ್ತಾರೆ ಕೃಷಿ ಯಲ್ಲಿ ದುಡಿಯುವ ವಗ೯ವನ್ನು ಬೇರೆ ಬೇರೆ ಪದವಿಯಲ್ಲಿ ಬಂದ ಅಧಿಕಾರಿಗಳಿ ಕೈ ಕೊಟ್ಟ ಗೌರವವನ್ನು ಕೊಡಬೇಕು.ಪಠ್ಯದ ಜೊತೆಗೆ ಮಕ್ಕಳು ಹಾಡು ,ಒಗಟು ,ಕಥೆಗಳು ಅಬ್ಯಾಸ ಮಾಡಬೇಕು ಹೆಜ್ಜೆ ಸಾಲು ಸಾಂಸ್ಕ್ರತಿಕ ವೇದಿಕೆ ಇಂತಹ ಒಂದು ಉತ್ತಮ ವಾದ ಕಾಯ೯ಕ್ರಮ ಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕಾಯ೯ ಕ್ರಮದ ಅಧ್ಯಕ್ಷತೆ ಯನ್ನು ಇಂದಿರಾ ಗಾಂಧಿ ವಸತಿಯುತ ಶಾಲೆ ಯ ಪ್ರಾಚಾಯ೯ರಾದ ಮಂಜುನಾಥ್ ವಹಿಸಿದ್ದರು. ವೇದಿಕೆ ಯಲ್ಲಿ ಹೊಸದುಗ೯ ದ ಖ್ಯಾತ ಕವಿಗಳಾದ ,ನಿಸಾರ್ ಅಹಮದ್ ,ಕವಿಯಿತ್ರಿ ಎಂ.ಆರ್.ನಳಿನ , ಸಾಹಿತಿ ನಾಗತೀಹಳ್ಳಿ ಮಂಜುನಾಥ್, ನಿ.ಶಿ. ರಾಜಪ್ಪ , ಕಲಾವಿದ ಪೀಲಾಪುರ ಆರ್.ಕಂಠೇಶ್ ಭರತ್ ,ಶಾಲಾ ವಿದ್ಯಾಥಿ೯ ಗಳು ,ಶಿಕ್ಷಕರು , ಉಪಸ್ಥಿತರಿದ್ದರು.
ಇದೇ ಸಂದಭ೯ದಲ್ಲಿ ನಾಡಿನ ಮುತ್ಸದ್ದಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರ ನಿಧನಕ್ಕೆ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು.
About The Author
Discover more from JANADHWANI NEWS
Subscribe to get the latest posts sent to your email.