ಚಳ್ಳಕೆರೆ ಡಿ.10
ಆನ್‌ಲೈನ್ ವಂಚನೆ ಹಾಗೂ ಕಳ್ಳತನ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜತೆಗೆ ಸಿಬ್ಬಂದಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ಪೂರ್ವವಲಯ ಐಜಿಪಿ ರಮೇಶ್ ಬಾನೋತ್ ಹೇಳಿದರು.
ಚಳ್ಳಕೆರೆ ಪೋಲಿಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದ ಮಾತನಾಡಿದರು.




‘ಫೋನ್ ಕರೆ ಮಾಡಿ ಹಣ ದ್ವಿಗುಣಗೊಳಿಸಿ ಖಾತೆಗೆ ಜಮಾ ಮಾಡುವುದಾಗಿ ಜನರಿಗೆ ಆಮಿಷವೊಡ್ಡಿ ಹಣ ಲಾಪಟಾಯಿಸುವ ದುಷ್ಕರ್ಮಿಗಳ ಗುಂಪು ಕೆಲಸ ಮಾಡುತ್ತಿದೆ. ಘಟನೆ ನಡೆದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಬೇಕು. ಇಲ್ಲವೇ ಸಮೀಪದ ಠಾಣೆಗೆ ದೂರು ನೀಡಿದರೆ ಪ್ರಕರಣ ಬೇಧಿಸಿ, ಆರೋಪಿಯಿಂದ ಹಣ ವಾಪಸ್ ಪಡೆಯಲು ಸಹಕಾರಿಗುತ್ತದೆ. ದೂರು ನೀಡಲು ವಿಳಂಬ ಮಾಡಿದರೆ ಆರೋಪಿ ತಪ್ಪಿಸಿಕೊಳ್ಳುವ ಅಪಾಯವಿದೆ’ ಎಂದರು.
ಠಾಣೆಗೆ ಬಂದ ಸಾರ್ವಜನಿಜರಿಗೆ ಸ್ಪಂದಿಸಿ ನೊಂದವರಿಗೆ ನ್ಯಾಯಕೊಡಿಸುವಂತೆ ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾವರಿಷ್ಠಾಧಿಕಾರಿ ರಂಜಿತ್ ಬಂಡಾರಿ.ಡಿವೈಎಸ್ಪಿ ರಾಜಣ್ಣ.ಠಾಣಾಧಿಕಾರಿ ದೇಸಾಯಿ.ಪಿಎಸ್ ಐ ಸತೀಶ್ ನಾಯ್ಕ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.