ನಾಯಕನಹಟ್ಟಿ: ದಿವಂಗತ ಪುನೀತ್ ರಾಜಕುಮಾರ್ ಪುತ್ತಳಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹೋಬಳಿ ಘಟಕದ ವತಿಯಿಂದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ರವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ಇದೇ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಹೋಬಳಿ ಘಟಕ ಅಧ್ಯಕ್ಷ ಪ್ರಕಾಶ್ ಮಾತನಾಡಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಹಿರಿಯ ನಾಗರಿಕರಿಗೆ ವೃದ್ರಾಶ್ರಮ ಸ್ಥಾಪಿಸುವ ಮೂಲಕ ಎಲ್ಲಾ ವರ್ಗದವರಿಗೂ ತಮ್ಮ ಕೈಲಾದ ಸಹಾಯ ಹಸ್ತ ಚಾಚುವ ಮೂಲಕ ಪುನೀತ್ ರಾಜಕುಮಾರ್ ಸಮಾಜಕ್ಕೆ ಮಾದರಿಯಾಗಿದ್ದಾರೆ.ಅವರ ಪುತ್ತಳಿಯನ್ನು ನಾಯಕನಹಟ್ಟಿ ಪಟ್ಟಣದಲ್ಲಿ ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಹೋಬಳಿ ಉಪಾಧ್ಯಕ್ಷ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಬಿ ಓಬಯ್ಯ, ನಗರ ಘಟಕ ಅಧ್ಯಕ್ಷ ಎಂ ಸಿದ್ದೇಶ್, ಯುವ ಘಟಕ ಅಧ್ಯಕ್ಷ ಜಿ ಟಿ ಶಿವಶಂಕರ್, ಯುವ ಘಟಕ ಉಪಾಧ್ಯಕ್ಷ ಜಿ ಬಿ ವಿಜಯ್, ಸಂಘಟನಾ ಉಸ್ತುವಾರಿ ತಿಪ್ಪೇಸ್ವಾಮಿ, ಕಾರ್ಮಿಕ ಘಟಕ ಅಧ್ಯಕ್ಷ ಜಿ ಸಿ ಓಂಕಾರಪ್ಪ, ಸಂಚಾಲಕರಾದ ಟಿ ಟಿ ಹರೀಶ್, ಸದಸ್ಯರಾದ ಮಹೇಂದ್ರ, ಸಿದ್ದೇಶ್, ಎಸ್ ರಂಗನಾಥ್, ಬಿ ಕಾಟಯ್ಯ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.