ಚಳ್ಳಕೆರೆ : ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸಮಾಜದಲ್ಲಿ ಅಪಪ್ರಚಾರ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ, ನಾನು ಏನಾದರೂ ಮಾಡಿದ್ದರೆ ಯಾವ ದೇವಸ್ಥಾನದಲ್ಲಿ ಆದರೂ ನಾನು ಪ್ರಮಾಣಕ್ಕೆ ಸಿದ್ದನಿದ್ದೇನೆ ಸುಖ ಸುಮ್ಮನೆ ನನ್ನ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸೋಮುಗುದ್ದು ರಂಗಸ್ವಾಮಿ ಕರೆ ನೀಡಿದ್ದಾರೆ


ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ನಾನು ರಾಜ್ಯಾದ್ಯಂತ ಸುತ್ತಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟಿದ್ದೇನೆ ಸುಮಾರು 17 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿ ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಕೊಂಚ ವಿರಳವಾಗಿದ್ದೇನೆ ಹೊರತು ರೈತ ಸಂಘದಿಂದ ಮುಕ್ತಿ ಪಡೆದಿಲ್ಲ, ಆದರೆ ನಮ್ಮ ಸಂಘದಲ್ಲೇ ಇದ್ದಂತಹ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತ ಮತ್ತೊಂದು ಸಂಘವನ್ನು ಕಟ್ಟಿಕೊಂಡು ಇರುವುದು ಬೇಸರ ತಂದಿದೆ.
ಸಮಾಜದಲ್ಲಿ ಯಾವೋಬ್ಬ ರೈತ ತನ್ನ ಸಂಘ ಕಟ್ಟಿಕೊಳ್ಳಲು ಸ್ವಾತಂತ್ರ್ಯವಿದೆ ಆದರೆ ಇನ್ನೊಂದು ಸಂಘದ ಅಧ್ಯಕ್ಷರ ವಿರುದ್ಧ ಸದಸ್ಯರ ವಿರುದ್ಧ ಮಾತನಾಡುವ ಹಕ್ಕಿಲ್ಲ ಆದ್ದರಿಂದ ನಮ್ಮ ಸಂಘದಲ್ಲಿ ನಮ್ಮ ಸಂಘದ ವಿರುದ್ಧ ಹಾಗೂ ನನ್ನ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ರೈತ ಮುಖಂಡ
ನಾಗರಾಜ್, ತಿಪ್ಪೇಸ್ವಾಮಿ, ಶಿವಣ್ಣ, ವೀರಭದ್ರಪ್ಪ, ಕೃಷ್ಣಮೂರ್ತಿ, ಶೇಷಾದ್ರಿ, ಮಹಾಂತೆಶ್, ಇತರರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.