ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕೆ.ಎಂ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಹೆಚ್.ಆರ್.ಹರೀಶ್ ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಗೆ ಕೆ.ಎಂ.ಮಂಜುನಾಥ್ ಮತ್ತು ಎ.ಎನ್.ರೇಣುಕೇಶ್ ರವರು ನಾಮಪತ್ರ ಸಲ್ಲಿಸಿದ್ದರು.


ನಂತರ ನಡೆದ ಚುನಾವಣೆಯಲ್ಲಿ
ಕೆ.ಎಂ.ಮಂಜುನಾಥ್ ಅವರು 9 ಮತಗಳನ್ನು ಪಡೆದು ಆಯ್ಕೆಗೊಂಡರೆ ಇವರ ಪ್ರತಿಸ್ಪರ್ಧಿ ಎ.ಎನ್.ರೇಣುಕೇಶ್ ರವರು 4 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಒಂದು ಮತವು ತಿರಸ್ಕೃತಗೊಂಡಿದೆ.
ಚುನಾವಣಾ ಅಧಿಕಾರಿಯಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆವರು ಕಾರ್ಯನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕರ್ತಾಳು ಧರ್ಮೇಶ್,
ಕೆ.ಎನ್.ಕಿರಣ್ ಕುಮಾರ್, ಆಸಿಫ್ ಖಾನ್, ಹೆಚ್.ಎಸ್.ಮಧುಸೂದನ್, ವಿಶಾಲಾಕ್ಷಿ ಜವರನಾಯಕ, ಪ್ರಭಾಸುರೇಶ್, ಭಾಗ್ಯಶಂಕರ್, ಜಯಮ್ಮ ಪುಟ್ಟಶೆಟ್ಟಿ, ರೂಪಲವ, ಲಕ್ಷ್ಮಿ ಮೋಹನ್, ಪವಿತ್ರಧರ್ಮರಾಜ್,
ಪಿಡಿಓ ಸರಳ ಭಾಗವಹಿಸಿದ್ದರು.
ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ನೂತನ ಅಧ್ಯಕ್ಷ ಕೆ.ಎಂ.ಮಂಜುನಾಥ್ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರುಗಳು ಅಭಿನಂದಿಸಿದರು.
ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ
ಕೆ.ಎಂ.ಮಂಜುನಾಥ್ ಅವರು ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರುಗಳಿಗೆ ಹಾಗೂ ವಿವಿಧ ಮುಖಂಡರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಉತ್ತಮ ಕಾರ್ಯಗಳನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಕೃಷ್ಣೆಗೌಡ, ಹನಸೋಗೆ ತಿಮ್ಮೇಗೌಡ, ನಿವೃತ್ತ ಪಿಡಿಓ ಮಾದೇಗೌಡ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಯೋಗೇಶ್, ನವೀನಗುಂಡ, ರುದ್ರೇಶ್, ಕರ್ತಾಳುಮಧು, ನಿವೃತ್ತ ಪೊಲೀಸ್ ಅಧಿಕಾರಿ ಸಿದ್ದಯ್ಯ, ಶಿವಣ್ಣ, ಸುರೇಶ, ಮರೀಗೌಡ, ನಟಬುದ್ಧಿ, ರಜಿಯಾ, ಬಂಗಾರಪ್ಪ, ಅಬ್ಬುರುಸುಭಾಷ್, ವಸಂತ, ಜಯರಾಮ, ಮಹದೇವ, ರಾಮು, ತಮ್ಮಯ್ಯ, ಮುತ್ತು, ರೈಸ್ ಮಿಲ್ ಹರೀಶ್, ಕಿರಣ್, ಗ್ಯಾಸ್ ಜನಾರ್ಧನ್, ಬಿದರಕ್ಕಬಾಬು, ಸುಬ್ರಮಣ್ಯ, ಸಂದೀಪ, ನರಸಿಂಹೇಗೌಡ, ವೃಷಭೇಂದ್ರ, ಹರೀಶ್ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.