March 16, 2026
IMG-20241210-WA0146.jpg

ನಾಯಕನಹಟ್ಟಿ: ಗೌಡಗೆರೆ ಗ್ರಾಮ ಸಂಪೂರ್ಣವಾಗಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಗಿಣಿಯಾರ್ ತಿಪ್ಪೇಶ್ ಗಂಭೀರವಾಗಿ ಆರೋಪಿಸಿದ್ದಾರೆ.

ಮಂಗಳವಾರ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವನೀರು, ಜನಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿದೆ ಎಂದು ಆರೋಪಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ಎರಡು ತಿಂಗಳಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ಇಲ್ಲ. ಅಭಿವೃದ್ಧಿ ಅಧಿಕಾರಿಗಳೇ ಬಂದರೂ ಸಹ ಚಾರ್ಜ್ ತೆಗೆದುಕೊಂಡಿಲ್ಲ. ಸಾಕಷ್ಟು ಬಾರಿ ನೀರಿನ ಸಮಸ್ಯೆಯನ್ನು ಅಧ್ಯಕ್ಷರಿಗೆ ಹೇಳಿದರೆ ನಿಮ್ಮ ಗೌಡಗೆರೆ ಊರಿನ ಸಮಸ್ಯೆಯನ್ನು ನಿಮ್ಮ ಗ್ರಾಮದ ಸದಸ್ಯರೇ ಪರಿಹರಿಸಬೇಕು ಎಂದು ಉಡಾಫೆ ಉತ್ತರವನ್ನು ನೀಡುತ್ತಾರೆ.

ನಾವು ಸದಸ್ಯರಾಗಿ ಯಾರನ್ನು ಕೇಳಬೇಕು ಎಂಬ ಪ್ರಶ್ನೆ ಉದ್ಭವವಾಗಿದೆ.ಕುಡಿಯುವ ನೀರಿಗಾಗಿ ಗ್ರಾಮದಲ್ಲಿ ಕಳೆದ 15 ದಿನಗಳಿಂದ ಆಹಾಕಾರ ಜೋರಾಗಿದೆ. ನಮಗೆ ಮತ ಹಾಕಿ ಆರಿಸಿ ಕಳುಹಿಸಿದ ಮತದಾರರಿಗೆ ಕುಡಿಯುವ ನೀರಿಲ್ಲ.ಗ್ರಾಮದಲ್ಲಿ ಮೂರು ಕುಡಿಯುವ ನೀರಿನ ಬೋರ್ವೆಲ್ ಮೋಟಾರ್ ಸುಟ್ಟು ಹೋಗಿವೆ. ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನು ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮತ್ತು ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಗಿಣಿಯಾರ್ ತಿಪ್ಪೇಶ್ ಗಂಭೀರವಾಗಿ ಆರೋಪಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವರೆ ಕಾದು ನೋಡಬೇಕಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading