ಚಳ್ಳಕೆರೆ ನ.10
ಚಳ್ಳಕೆರೆ ತಾಲ್ಲೂಕು, ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಅಕ್ಕಿ ಮತ್ತು ಬೆಲ್ಲವನ್ನು ಬಹಿರಂಗ
ಹರಾಜು ಮಾಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಭಕ್ತಾಧಿಗಳಿಂದ ದೇಣಿಗೆ ಮೂಲಕ ಸಂಗ್ರಹವಾಗಿ, ಉಳಿಕೆಯಾಗಿರುವ ಅಂದಾಜು 10 ಟನ್
ದಪ್ಪ (ಮಿಕ್ಸ್). ಅಕ್ಕಿಯನ್ನು ಮತ್ತು ಮತ್ತು ಬೆಲ್ಲ 200 ಕೆ.ಜಿ. ಬೆಲ್ಲ ಇರುವ ಸ್ಥಿತಿಯಲ್ಲಿಯೇ ಬಹಿರಂಗ
ಹರಾಜು ಮೂಲಕ ವಿಲೇವಾರಿ ಮಾಡಲು ಉಲ್ಲೇಖಿತ ಪ್ರಕಟಣೆಯಲ್ಲಿ ದಿನಾಂಕ : 06-11-2024 ರಂದು
ನಿಗದಿಪಡಿಸಲಾಗಿರುತ್ತದೆ.
ಆದರೆ, ತುರ್ತು ಕೆಲಸ ಕಾರ್ಯಗಳ ಕಾರಣದಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠದ ಆವರಣದಲ್ಲಿ ದಪ್ಪ ಅಕ್ಕಿಯನ್ನು ಬಹಿರಂಗ ಹರಾಜನ್ನು ದಿನಾಂಕ: 13-1-2024 ರಂದು ಬೆಳಿಗ್ಗೆ
11,30 ಕ್ಕೆ ಮುಂದೂಡಿ ಮರು ನಿಗದಿಪಡಿಸಿದೆ. ಹರಾಜಿನಲ್ಲಿ ಭಾಗವಹಿಸುವ ಆಸಕ್ತರು ಅಕ್ಕಿ ಮತ್ತು ಬೆಲ್ಲ
ವ್ಯಾಪಾರಸ್ತರು ಭಾಗವಹಿಸಲು ಕೋರಿದೆ.
1) ಹರಾಜಿನಲ್ಲಿ ಭಾಗವಹಿಸುವವರು ರೂ.5,000-00ಗಳ ಮಂಗಡ ಹಣ ಡಿಪಾಸಿಟ್ ಆಗಿ ಸಂದಾಯ
ಮಾಡತಕ್ಕದ್ದು.
2) ಹರಾಜನ್ನು ಪ್ರಾರಂಭಿಸುವ ಮುನ್ನ ಬಿಡ್‌ದಾರರು ಅಕ್ಕಿ ಮತ್ತು y ಖುದ್ದು ಪರಿಶೀಲಿಸಿ ಒಂದು
ಕೆ.ಜಿಗೆ ಅನ್ವಯವಾಗುವಂತೆ ಹರಾಜಿನಲ್ಲಿ ಬಿಡ್ ಮಾಡತಕ್ಕದ್ದು.
3) ಅಂತಿಮವಾಗಿ ಅತೀ ಹೆಚ್ಚು ಬಿಡ್ (ಕೂಗಿದ)ದಾರರುಗರಿಗೆ ಸ್ಥಳದಲ್ಲಿಯೇ ಅಖೈರು ಹರಾಜು ಮೊತ್ತದ
ಉಳಿದ ಶೇಕಡಾ 75 ರಷ್ಟು ಮೊತ್ತವನ್ನು
ಶೇ. 25 ರಷ್ಟು ಸಂದಾಯ ಮಾಡತಕ್ಕದ್ದು,
3 ದಿನಗಳೊಳಗಾಗಿ ಅಕ್ಕಿಯನ್ನು Weighbridge ಮೂಲಕ ತೂಕದ ತಕ್ಷಣ ಬಾಕಿ ಹಣ ಸಂದಾಯ
ಮಾಡಿ ಅಕ್ಕಿಯನ್ನು ಸಾಗಾಣಿಕೆ ಮಾಡತಕ್ಕದ್ದು,
4) ಹರಾಜನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ
ಇರುತ್ತದೆ.
ಹೆಚ್ಚಿನ ಮಾಹಿತಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ,
ನಾಯಕನಹಟ್ಟಿ, ಚಳ್ಳಕೆರೆ ತಾಲ್ಲೂಕು, ಸಂಪರ್ಕಿಸಲು ಕೋರಿದೆ.

About The Author
Discover more from JANADHWANI NEWS
Subscribe to get the latest posts sent to your email.