ಚಿತ್ರದುರ್ಗ.
ನೈತಿಕತೆ, ಕರುಣೆ ಮತ್ತು ಪ್ರಜ್ಞೆಯ ಆಧಾರ ಸ್ತಂಭದ ಮೇಲೆ ಬುದ್ಧ ದಮ್ಮ ನಿಂತಿದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿಪಿ ತಿಪ್ಪೇಸ್ವಾಮಿ ಹೇಳಿದರು.
ಚಳ್ಳಕೆರೆಯ ಭಾರತೀಯ ಬಹುಜನ ಸಮಾಜ ಪಕ್ಷದ ಕಾರ್ಯಲಯದಲ್ಲಿ ಆಯೋಜಿಸಿದ್ದ ‘ಬೌದ್ಧ ಧರ್ಮದ ಪ್ರಸ್ತುತತೆ “ಕುರಿತು ಉಪನ್ಯಾಸ ನೀಡುತ್ತಾ ಧರ್ಮಕ್ಕೂ ಧರ್ಮಕ್ಕೂ ಇರುವ ವ್ಯತ್ಯಾಸವನ್ನು ವಿವರಿಸಿದರು.
ದೇವರಲ್ಲಿ ನಂಬಿಕೆ,ಆತ್ಮನಲ್ಲಿ ನಂಬಿಕೆ,ದೇವರ ಪೂಜೆ, ತಪ್ಪು ಮಾಡುವ ಆತ್ಮನನ್ನು ಸರಿಪಡಿಸುವುದು, ಪ್ರಾರ್ಥನೆಗಳು, ಧಾರ್ಮಿಕ ಸಮಾರಂಭಗಳು ಮತ್ತು ಬಲಿ ಗಳ ಕೊಡುವುದರ ಮೂಲಕ ದೇವರನ್ನು ಸಂತೃಪ್ತಿಗೊಳಿಸುವುದೇ ಧರ್ಮ. ಇವುಗಳ ಆಚರಣೆಯ ನೆಲೆಯ ಮೇಲೆ ಧರ್ಮಗಳು ನಿಂತಿವೆ ಎಂದರು. ಧರ್ಮವು ವ್ಯಕ್ತಿಯ ವೈಯಕ್ತಿಕವಾದದ್ದಾಗಿದ್ದು ಸಾಮಾಜಿಕವಾದದ್ದಲ್ಲ ಎಂಬುದಾಗಿದೆ.
ಆದರೆ ಭಗವಾನ್ ಬುದ್ಧರು ಬೋಧಿಸಿದ ಧಮ್ಮ ವು ಇದಕ್ಕೆ ಭಿನ್ನವಾಗಿದೆ. ದಮ್ಮ ಸಾಮಾಜಿಕವಾದದ್ದಾಗಿದ್ದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮನುಷ್ಯ ಮನುಷ್ಯರ ನಡುವೆ ಸರಿಯಾದ ಸಂಬಂಧ ಇರುವಂತೆ ನೋಡಿಕೊಳ್ಳುವುದೇ ದಮ್ಮದ ಮುಖ್ಯ ಉದ್ದೇಶ ವಾಗಿದೆ. ಸ್ವಾತಂತ್ರ ಬಯಸುವವರೆಲ್ಲ ದಮ್ಮ ವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೂಢನಂಬಿಕೆಗೆ ಅವಕಾಶ ಕೊಡದ ಅರಿವಿನ ಪ್ರಜ್ಞೆಯನ್ನು ಧರ್ಮದ ಮೊದಲ ಸ್ತಂಭವೆಂದು ಬುದ್ಧರು ಹೇಳಿದ್ದಾರೆ . ಕರುಣೆ ಪ್ರೀತಿ ಇಲ್ಲದ ಸಮಾಜ ಬದುಕಲು ಸಾಧ್ಯವಿಲ್ಲ ಆದ್ದರಿಂದ ಕರುಣೆಯನ್ನು ದಮ್ಮದ ಎರಡನೇ ಮುಖ್ಯಸ್ಥಂಭವೆಂದು ಭಗವಾನರು ಹೇಳಿದ್ದಾರೆಂದರು.
ಯಾರು ಕಾಣದ ದೇವರನ್ನು ನಾವು ಪೂಜೆ ಮತ್ತು ತಪಸ್ಸು ಮಾಡುವುದರಿಂದ,ನಮ್ಮ ಪಾಪಗಳನ್ನು ಕ್ಷಮಿಸಿ ದೇವರು ಮೋಕ್ಷ ಕೊಡಿಸುತ್ತಾನೆಂದು ಕಣ್ಮುಚ್ಚಿ ಕುಳಿತುಕೊಳ್ಳದೆ,ವಾಸ್ತವದಲ್ಲಿ ವೈಚಾರಿಕ ಜೀವನ ಕ್ರಿಯೆಗಳಿಂದ ಇಹದಲ್ಲಿಯೇ ಸ್ವರ್ಗವನ್ನು ಕಾಣಬಹುದೆಂದು ಭಗವಾನರು ಸಾಧಿಸಿ ತೋರಿಸಿದ್ದಾರೆ. ನಮಗೆ ಎದುರಾಗಿರುವ
ಪ್ರಜ್ಞೆ ಮತ್ತು ಕರುಣೆಯ ಒಂದು ವಿಶಿಷ್ಟ ಸಂಯೋಗವೇ ಬುದ್ಧ ದಮ್ಮ ವಾಗಿದೆ ಎಂದರು .
ಭೂ ಹೋರಾಟ ಸಮಿತಿಯ ಅಧ್ಯಕ್ಷರಾದ ಭೀಮನಕೆರೆ ಶಿವಮೂರ್ತಿಯವರು ಶೋಷಿತ ಜಾತಿಗಳು ಬಾಬಾ ಸಾಹೇಬರು ತೋರಿದ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವುದರ ಮೂಲಕ ಮಾತ್ರವೇ ಪ್ರಭುದ್ಧ ಭಾರತ ನಿರ್ಮಾಣ ಸಾಧ್ಯವೆಂದರು. ಮನುಷ್ಯ ಮನುಷ್ಯರಲ್ಲಿ ಭಿನ್ನತೆ ತೊರೆದೆ ಪ್ರೀತಿಯನ್ನು ಬಿತ್ತುವ ಬೌದ್ಧ ಧರ್ಮ ಅನುಸರಿಸುವುದೊಂದೇ ಪ್ರಪಂಚದ ಮನುಷ್ಯರೆಲ್ಲರೂ ಅನುಸರಿಸಬಹುದಾದ ಏಕೈಕ ಧರ್ಮವಾಗಿದೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿ ಭಾರತೀಯ ಬಹು ಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ಪ್ರಕಾಶ್ ಮಾತನಾಡಿದರು
ಸಭೆಯಲ್ಲಿ ಬಂಗಾರಪ್ಪ, ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ರಾಜಣ್ಣ ಮಂಜು ಭೀಮನಕೆರೆ ಶಿವಮೂರ್ತಿ ರೇಣುಕಮ್ಮ ತಿಮ್ಮಕ್ಕ ಪುಟ್ಟಮ್ಮ ಪ್ರಜ್ವಲ್ ಇನ್ನು ಮುಂತಾದವರು ಭಾಗವಹಿಸಿದ್ದರು






About The Author
Discover more from JANADHWANI NEWS
Subscribe to get the latest posts sent to your email.