
ಚಳ್ಳಕೆರೆ ಸೆ.10
ಗ್ರಾಮೀಣ ಭಾಗದ ಜನರ ತುರ್ತು ಚಿಕಿತ್ಸೆ ಹಾಗೂ ಆರೋಗ್ಯ ಸೇವೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜುರಾತಿ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹೌದು ಇದು ಚಳ್ಳಕೆರೆ ತಾಲ್ಲೂಕು,
ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮವು ಒಂದು ಜಿಲ್ಲಾ ಪಂಚಾಯತ್ ಕ್ಷೇತ್ರವಾಗಿದ್ದು, ಈ
ಹಿರೇಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಸದರಿ ಗ್ರಾಮವು ವೈದ್ಯಕೀಯ
ಸೌಲಭ್ಯಗಳಿಂದ ವಂಚಿತವಾಗಿದ್ದು ರೋಗಿಗಳು, ಗರ್ಭಿಣಿ.ಬಾಣಂತಿಯರು. ಹೆರಿಗೆ ಹಾಗೂ ತುರ್ತು ಚಿಕಿತ್ಸೆ ಪಡೆಯಲು ದೂರದ ಚಳ್ಳಕೆರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕಿತ್ಸೆಗಾಗಿ ಹೋಗುವಾಗ ಮಾರ್ಗದಲ್ಲಿಯೇ ಅನೇಕ
ರೋಗಿಗಳು ಮೃತಪಟ್ಟಿದ್ದು ವೈದ್ಯಕೀಯ ಸೌಲಭ್ಯಕ್ಕಾಗಿ ಇಲ್ಲಿನ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿಯಿದ್ದು, ಕೂಡಲೇ ಹಿರಿಹಳ್ಳಿ ಗ್ರಾಮದ ಜನರು ಆರೋಗ್ಯ ದೃಷ್ಠಿಯಿಂದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸುವಂತೆ ಹಿರೆಹಳ್ಳಿ ಗ್ರಾಮದ ನಿಜಲಿಂಗಪ್ಪ .ಮಂಜಮ್ಮ .ರಾಜಣ್ಣ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷರು.ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.