September 14, 2025
IMG-20250910-WA0144.jpg

ನಾಯಕನಹಟ್ಟಿ: ಹೋಬಳಿಯ ನಾಯಕ ಸಮುದಾಯದ ಬಹು ದಶಕಗಳ ಕನಸಾಗಿದ್ದ ಮಹರ್ಷಿ ವಾಲ್ಮೀಕಿ ಪುತ್ತಳಿ ನಿರ್ಮಾಣ ಕಾಮಗಾರಿಗೆ ಇಂದು ಚಾಲನೆ ನೀಡಿರುವುದು ಸಂತಸದ ಸಂಗತಿಯಾಗಿದೆ ಎಂದು ಸುಚೇತನ ವಾಲ್ಮೀಕಿ ಮಹಿಳಾ ಸಂಘದ ಪದಾಧಿಕಾರಿ ಎನ್.ಇಂದಿರಮ್ಮ ಹೇಳಿದರು.

ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಬುಧವಾರ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಪುತ್ತಳಿ ನಿರ್ಮಾಣ ಕಾರ್ಯದ ನಿಮಿತ್ತ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತ ದೇಶದ ಆದಿಕವಿ ಎಂದೇ ಪ್ರಸಿದ್ಧಿಯಾದ ಮಹರ್ಷಿ ವಾಲ್ಮೀಕಿಯವರು ಬೇಡ ಸಮುದಾಯದ ಪ್ರಥಮ ಪುರುಷರಾಗಿದ್ದಾರೆ.ಅಂತಹ ಮಹಾನ್ ಪುರುಷರ ಪ್ರತಿಮೆಯನ್ನು ನಾಯಕನಹಟ್ಟಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಅವರ ತತ್ವದರ್ಶಗಳನ್ನು ಮುಂದಿನ ಪೀಳಿಗೆಗೆ ಪ್ರಚುರ ಪಡಿಸುವ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಪುತ್ತಳಿ ನಿರ್ಮಾಣ ಕಾರ್ಯ ಸಹಕಾರಿಯಾಗಲಿದೆ ಎಂದರು.
ನಾಯಕನಹಟ್ಟಿ ಹೋಬಳಿಯಲ್ಲಿ ಅತಿ ಹೆಚ್ಚು ವಾಲ್ಮೀಕಿ ಸಮುದಾಯದ ಜನರಿದ್ದರೂ ಇಲ್ಲಿಯವರೆಗೆ ವಾಲ್ಮೀಕಿ ಪುತ್ಥಳಿ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ. ಮಹರ್ಷಿ ವಾಲ್ಮೀಕಿ ಅವರ ಬುದ್ಧಲಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ದಶಕಗಳಿಂದ ಕ್ಷೇತ್ರವನ್ನು ಆಳಿದ ಶಾಸಕರಾದಿಯಾಗಿ ಎಲ್ಲ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಯಾರು ಸಹ ಇದರ ಬಗ್ಗೆ ಮುತುವರ್ಜಿ ವಹಿಸಿರಲಿಲ್ಲ. ಆದರೆ ನಾಯಕನಹಟ್ಟಿ ಹೋಬಳಿಯ ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷರಾದ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಸಂಘದ ಸದಸ್ಯರಾದ ಬಂಡೆಕಪಲೆ ಓಬಣ್ಣ, ಎಸ್.ಓಬಣ್ಣ, ಕಾಕಸೂರಯ್ಯ, ನಾಗರಾಜ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಹೋಬಳಿಯ ಸಮಸ್ತ ನಾಯಕ ಸಮುದಾಯದ ಜನರು ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಮುಂದೆ ಬಂದಿದ್ದಾರೆ. ನಾಯಕನಹಟ್ಟಿ ಹೋಬಳಿಯ ಮಟ್ಟಿಗೆ ಇದೊಂದು ಐತಿಹಾಸಿಕವಾದ ಹೆಜ್ಜೆಯಾಗಿದೆ. ಹಾಗಾಗಿ ಸುಚೇತನ ವಾಲ್ಮೀಕಿ ಮಹಿಳಾ ಸಂಘದ ಸದಸ್ಯರಾದ ನಾವುಗಳು ವಾಲ್ಮೀಕಿ ಪುತ್ತಳಿ ನಿರ್ಮಾಣ ಕಾರ್ಯದಲ್ಲಿ ಶ್ರಮಿಸುತ್ತೇವೆ ಎಂದು ನಾಯಕ ಸಮುದಾಯದ ಸದಸ್ಯೆ ಶಾಂತಮ್ಮ ಹೇಳಿದರು.

“ಯಾವುದೇ ಪುತ್ತಳಿ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾಯಕನಹಟ್ಟಿ ಪಟ್ಟಣದಲ್ಲಿ ನಿರ್ಮಿಸುತ್ತಿರುವ ಮಹರ್ಷಿ ವಾಲ್ಮೀಕಿ ಅವರ ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಯಾವ ಜನಪ್ರತಿನಿಧಿಗಳಿಂದಾಗಲಿ ಅಥವಾ ಸರ್ಕಾರದ ಅನುದಾನವಾಗಲಿ ಬಳಸಿಕೊಳ್ಳದೆ ಹೋಬಳಿಯಾದ್ಯಂತ ಇರುವ ಎಲ್ಲಾ ನಾಯಕ ಸಮುದಾಯದ ಪ್ರತಿ ಮನೆ ಮನೆಯಿಂದಲೂ ಪಕ್ಷರಹಿತವಾಗಿ ಸಮುದಾಯದ ಸಹಭಾಗಿತ್ವದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ಮಹರ್ಷಿ ವಾಲ್ಮೀಕಿಯವರ ಪುತ್ತಳಿ ನಿರ್ಮಾಣಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಪ್ಪಮ್ಮ ಹೇಳಿದರು.

ಇದೇ ವೇಳೆ ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ,
ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿಎಂ ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ್ರು), ನಿರ್ದೇಶಕರಾದ ನಾಗರಾಜ, ಹನುಮಣ್ಣ, ಬೈಯಣ್ಣ, ರುದ್ರಣ್ಣ, ಕಾಕಸೂರಯ್ಯ, ಜಿ.ವೈ.ತಿಪ್ಪೇಸ್ವಾಮಿ, ಚಿನ್ನಯ್ಯ, ಬಂಡೆಕಪಿಲೆ ಓಬಣ್ಣ, ಗ್ರಾಮಸ್ಥರಾದ ಟಿ.ಮಹೇಶ್ವರಿ, ಡಿ.ಟಿ.ರೇಖಾ, ಚಂದನ, ಟಿ.ತಿಪ್ಪಮ್ಮ, ಸರಸ್ವತಿ, ನೀಲಮ್ಮ, ರತ್ನಮ್ಮ, ಲಕ್ಷ್ಮೀ, ಕವಿತ, ಟಿ.ಬಸಣ್ಣ, ಶಿವಲಿಂಗಪ್ಪ, ಪಿ.ಜಿ.ಬೋರನಾಯಕ, ನಲಗೇತನಹಟ್ಟಿ ಎನ್.ಬಿ.ದೊಡ್ಡಬೋರಯ್ಯ, ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಪಿ.ಎನ್.ಮುತ್ತಯ್ಯ ಅವರೂ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading