July 12, 2025
IMG-20250710-WA0277.jpg

ವರದಿ : ಮದ್ಲೇಟಪ್ಪ ದವ ಡಬೆಟ್ಟ ಪಾವಗಡ :ತಾಲ್ಲೂಕ್ ಪಾವಗಡ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಜುಲೈ 21 ಸೋಮವಾರ ರಂದು ಪಾವಗಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಾವಗಡದ ಕ್ಷೇತ್ರದ ಶಾಸಕರ ಹಾಗೂ ತುಮುಲ್ ಅಧ್ಯಕ್ಷ ಹೆಚ್ ವಿ ವೆಂಕಟೇಶ್ .ಮಾಜಿ ಸಚಿವ ವೆಂಕಟರಮಣಪ್ಪ . ಜಿಲ್ಲಾಧಿಕಾರಿ ಶುಭ ಕಲ್ಯಾಣ್ . CEO ಪ್ರಭು . ಪೊಲೀಸ್ ವರಿಷ್ಟಾಧಿಕಾರಿ ಕೆ ವಿ ಅಶೋಕ್.ತಹಸಿಲ್ದಾರ್ ವರದರಾಜು ರವರು ಸಭೆ ನಡೆಸಿ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ರವರು. ಆಯೋಜಿಸುವ ಕುರಿತು ಚರ್ಚಿಸಿದರು.

ಬಳಿಕ ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ ಮತ್ತು ನಾಗಲಮಡಿಕೆ ಕ್ರಾಸ್ ನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಬಳಿ ತುಂಗಭದ್ರಾ ಕುಡಿಯುವ ನೀರಿನ ಯೋಜನೆಗೆ ಚಾಲನೆ ಮತ್ತು SC ಮತ್ತು ST ಹಾಸ್ಟೆಲ್ ಲೋಕಾರ್ಪಣೆ ಮಾಡುವ ಕುರಿತಾಗಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಸುದೇಶ್ ಬಾಬು  ಮಾಜಿ ಅಧ್ಯಕ್ಷ ರಾಜೇಶ್  ಸದಸ್ಯಎನ್ ರವಿ  ಮುಖಂಡ ಬತ್ತಿನೇನಿ ನಾನಿ ರವರು, ಉಪ ವಿಭಾಗಧಿಕಾರಿ ಶಿವಪ್ಪ ಕಡಕೋಳ ರವರು ಸೇರಿ ಜಿಲ್ಲಾ .ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading