July 13, 2025
IMG-20250510-WA0203.jpg

ವೈಜ್ಞಾನಿಕ ಜಾತಿ ಗಣತಿ ಸಮೀಕ್ಷೆಯಲ್ಲಿ ನವಜಾತ ಶಿಶುಗಳಿಗೆ ಯಾವ ರೀತಿಯ ಅವಕಾಶ ಕಲ್ಪಿಸಲಾಗಿದೆ?

ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಉತ್ತರ ನೀಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಡಾ. ವಾಸುದೇವ್ ಮೇಟಿ ಬಣ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯ.

ನಾಯಕನಹಟ್ಟಿ : ಪಟ್ಟಣದ 8 ಮತ್ತು 9ನೇ ವಾರ್ಡ್ ನಲ್ಲಿ ಜಾತಿಗಣತಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ನವಜಾತ ಶಿಶುಗಳಿಗೆ ಯಾವ ರೀತಿಯ ಅವಕಾಶ ಕಲ್ಪಿಸಲಾಗುವುದು ಎಂಬುದಕ್ಕೆ ಜಿಲ್ಲಾಧಿಕಾರಿಗಳು ಉತ್ತರ ನೀಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಡಾ. ವಾಸುದೇವ್ ಮೇಟಿ ಬಣದ ನಾಯಕನಹಟ್ಟಿ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಒತ್ತಾಯಿಸಿದರು.

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರ ಜಾತಿಗಣತಿ ಸಮೀಕ್ಷೆ ನಡೆಸಲು ಶಿಕ್ಷಕರನ್ನು ನೇಮಿಸಿದ್ದು, ಆಪ್ ಮೂಲಕ ನೊಂದಾಯಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಇದರಲ್ಲಿ ನವಜಾತ ಶಿಶುಗಳು ಹಾಗೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು ನೊಂದಾವಣೆ ಯಾಗಿರುವುದಿಲ್ಲ. ಅಂತ ಮಕ್ಕಳಿಗೆ ಜಾತಿಗಣತಿ ಸಮೀಕ್ಷೆಯಲ್ಲಿ ನೋಂದಾಯಿಸಲು ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ? ಇದು ಕೇವಲ ನಮ್ಮ ಪಟ್ಟಣದ ಸಮಸ್ಯೆಯಲ್ಲ ಇಡೀ ರಾಜ್ಯದ್ಯಂತ ಇರುವಂತಹ ಸಮಸ್ಯೆ.

ನವಜಾತ ಶಿಶುಗಳಿಗೆ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯಲ್ಲಿ ಹೆಸರು ನೋಂದಾಯಣಿಯಾಗಿಲ್ಲವೆಂದರೆ ಜಾತಿಗಣತಿ ಸಮೀಕ್ಷೆಯ ಆಪ್ ನಲ್ಲಿ ನೊಂದಾಯಿಸಲು ಹೋದರೆ ಆಧಾರ್ ನಂಬರ್ ಅಥವಾ ಪಡಿತರ ಚೀಟಿ ನಂಬರ್ ಹಾಕದಿದ್ದಲ್ಲಿ ತೆಗೆದುಕೊಳ್ಳುವುದಿಲ್ಲ. ಇಂಥ ಸಮಸ್ಯೆಗಳಿಗೆ ಸರ್ಕಾರ ಹಾಗೂ ರಾಜ್ಯದ ಆಯಾ ಜಿಲ್ಲಾಡಳಿತ ಅಧಿಕಾರಿಗಳು ಯಾವ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ? ಪ್ರಸ್ತುತ ನಮ್ಮ 8 ಮತ್ತು 9ನೇ ವಾರ್ಡ್ ಗಳಲ್ಲಿ ಸುಮಾರು 50 ರಿಂದ 100 ನವಜಾತ ಶಿಶುಗಳು ಇದ್ದು, ಇಡೀ ರಾಜ್ಯದ್ಯಂತ ಎಷ್ಟು ನವಜಾತ ಶಿಶುಗಳು ಇರಬಹುದು? ನೀವೇ ಉಳಿಸಿಕೊಳ್ಳಿ.

ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಇದೇ ರೀತಿಯಾದರೆ ಜಾತಿಗಣತಿ ಸಮೀಕ್ಷೆಯಲ್ಲಿ ನಮ್ಮ ಜನಸಂಖ್ಯೆ ಇದ್ದು ಕಡಿಮೆಯಾದಂತೆ ಯಾಗುತ್ತದೆ. ಜಾತಿಗಣತಿ ಸಮೀಕ್ಷೆಯಲ್ಲಿ ನವಜಾತ ಶಿಶುಗಳಿಗೆ ಆಧಾರ್ ನಂಬರ್ ಹಾಗೂ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದಿರುವಂತಹ ಮಕ್ಕಳಿಗೆ ಬರಿ ಹೆಸರಿನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪ್ರಸ್ತುತ ಜಾತಿಗತಿ ಸಮೀಕ್ಷೆ ನಡೆಸಲು ಒಂದು ವಾರ್ಡಿಗೆ ಒಬ್ಬ ಶಿಕ್ಷಕರನ್ನು ನೇಮಿಸಿದ್ದು, ಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡುಗಳಿಗೆ ಒಬ್ಬ ಶಿಕ್ಷಕರು ಹೇಗೆ ನಿರ್ವಹಿಸುತ್ತಾರೆ? ಒಂದು ಕುಟುಂಬದ ಸಮೀಕ್ಷೆ ನಡೆಸಲು 30 ರಿಂದ 45 ನಿಮಿಷ ತೆಗೆದುಕೊಳ್ಳುತ್ತದೆ. ಹೆಚ್ಚು ಜನಸಂಖ್ಯೆ ಹೊಂದಿರುವ ವಾರ್ಡುಗಳಿಗೆ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಸಮೀಕ್ಷೆಯನ್ನು ಸಕಾಲಕ್ಕೆ ಪೂರ್ಣಗೊಳಿಸಲು ಅನುಕೂಲ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಮಾಹಿತಿ ಮತ್ತು ತಂತ್ರಜ್ಞಾನ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
ಕುಮಾರಸ್ವಾಮಿ
ಅಪರ ಜಿಲ್ಲಾಧಿಕಾರಿಗಳು
ಚಿತ್ರದುರ್ಗ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading