September 14, 2025
IMG-20250510-WA0066.jpg

.

ನಾಯಕನಹಟ್ಟಿ:: ಪಟ್ಟಣದ ಶ್ರೀ ಕಾಳಿಕಾದೇವಿ ವಾರ್ಷಿಕೋತ್ಸವ ಪ್ರಯುಕ್ತ ಪಲ್ಲಕ್ಕಿ ಉತ್ಸವ ಆಚರಿಸಲಾಗುತ್ತದೆ.
ಶುಕ್ರವಾರ ಪಟ್ಟಣದ ಶ್ರೀ ಕಾಳಕಾದೇವಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವವನ್ನು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಭವ್ಯ ಮೆರವಣಿಗೆ ಮೂಲಕ ಶ್ರೀ ಕಾಳಕಾದೇವಿಯ ಪಲ್ಲಕ್ಕಿ ಉತ್ಸವವನ್ನು ಕರೆತರಲಾಯಿತು.

ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ರಥೋತ್ಸವದ ಪಕ್ಕದಲ್ಲಿರುವ ಅರಳಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಪಲ್ಲಕ್ಕಿ ಉತ್ಸವವನ್ನು ಶ್ರೀ ಕಾಳಕಾದೇವಿ ದೇವಸ್ಥಾನಕ್ಕೆ ಕರೆತಂದು ದೇವಿಯನ್ನು ಗುಡಿ ತುಂಬಿಸಲಾಯಿತು.

ಇದೆ ವೇಳೆ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಪಿ.ಲೋಕೇಶ್ ಚಾರಿ ಮಾತನಾಡಿದ ಅವರು ಪ್ರತಿ ವರ್ಷ ಸಾಂಪ್ರದಾಯದಂತೆ ಶ್ರೀ ಕಾಳಕಾದೇವಿ ವಾರ್ಷಿಕೋತ್ಸವ ಪ್ರಯುಕ್ತ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ. ಭಾರತ ದೇಶದಲ್ಲಿ ಇತ್ತೀಚಿಗೆ ನಡೆದ ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯಿಂದ ಭಾರತ ದೇಶದ 26 ಮಂದಿ ಅಮಾಯಕರು ಮರಣ ಹೊಂದಿದರು ಪಾಪಿ ಪಾಕಿಸ್ತಾನ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಯಿತು. ಪಾಕಿಸ್ತಾನ ಮತ್ತು ಭಾರತಕ್ಕೆ ಯುದ್ಧ ಆಗುವ ಮತ್ತು ಸಂಭವವಿದೆ ಹೆಮ್ಮೆಯ ಭಾರತ ದೇಶದ ಸೈನ್ಯ ಹಾಗೂ ಯೋಧರಿಗೆ ಶ್ರೀ ಕಾಳಕಾದೇವಿ ಹೆಚ್ಚಿನ ರೀತಿ ಶಕ್ತಿ ನೀಡಿ ಯುದ್ಧವನ್ನು ಯಶಸ್ವಿಗೊಳಿಸಲು ಎಂದರು.

ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ. ತಿಪ್ಪೇಶ್ ಚಾರಿ, ಉಪಾಧ್ಯಕ್ಷ ಕೆ .ವೆಂಕಟೇಶ್ ಚಾರಿ, ಸಹ ಕಾರ್ಯದರ್ಶಿ ಹನುಮಂತಚಾರಿ, ಖಜಾಂಚಿ ಆರ್ ವೆಂಕಟೇಶ್ ಚಾರಿ, ಸದಸ್ಯರಾದ ಟಿ ರಾಜು , ಚಂದ್ರಪ್ಪ ,ಗೋವಿಂದಪ್ಪ, ಧನುಶ್ ಚಾರಿ, ಆರ್. ಮಹಾಂತೇಶ್, ಕಾಳಾಚಾರಿ ,ಸದಾನಂದ, ನಾರಾಯಣ ಚಾರಿ, ಕಾರ್ತಿಕ್, ಕರುಣೆಂದ್ರ ಚಾರಿ , ಮೌನೇಶ ಚಾರಿ ,ತಿಪ್ಪೇಶ್ ಚಾರಿ, ಲಕ್ಷ್ಮಣಚಾರಿ. ವಿಶ್ವಕರ್ಮ ಸಮಾಜದ ಮಹಿಳೆಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading