September 15, 2025
IMG-20250410-WA0128.jpg

ಚಳ್ಳಕೆರೆ: ಕಂಪನಿಗಳಲ್ಲಿ ದುಡಿಯಲು ನೌಕರರಾಗಿ ಹೋಗುತ್ತಿರುವ ವಿದ್ಯಾರ್ಥಿಗಳು ಕಂಪನಿ ಮಾಲೀಕರಾಗುವ ಗುರಿ ಇರಿಸಿಕೊಳ್ಳಬೇಕು 

ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

 ನಗರದ ಹೊರವಲಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೃತ್ತಿ ತರಬೇತಿ ಪಡೆದು ವಿವಿಧ ಕಂಪನಿಗಳಿಗೆ ಉದ್ಯೋಗಸ್ಥರಾಗಿ ನಿಯೋಜನೆಗೊಂಡಿದ್ದ 78 

ವಿದ್ಯಾರ್ಥಿಗಳಿಗೆ ನಿಯೋಜಿತ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಮಳೆ ಕೊರತೆ ಅನುಭವಿಸುವ 16 ಜಿಲ್ಲೆಗಳಲ್ಲಿ ಚಳ್ಳಕೆರೆ ತಾಲೂಕು ಅತ್ಯಂತ ಬರದ ನೆಲೆಯಾಗಿದೆ. ಇಲ್ಲಿ ಜನಜೀವನ ಸುಧಾರಣೆಗೆ ಶಿಕ್ಷಣ ಮತ್ತು ಉದ್ಯೋಗ ಆಧಾರವಾಗಬೇಕು. ಇದನ್ನು ಗುರಿಯಾಗಿಸಿಕೊಂಡು ಸ್ಥಳೀಯ ಬಡಕುಟುಂಬಗಳ ಅನುಕೂಲಕ್ಕೆ ಇಂಜಿನಿಯರಿಂಗ್ ಕಾಲೇಜು ಮತ್ತು ಜಿಟಿಟಿಸಿ ವೃತ್ತಿಪರ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಣ ಬದುಕಿನ ಭದ್ರತೆ ಆಗಬೇಕು. ಸ್ವಾವಲಂಬಿಯಾಗಿ ಉದ್ಯೋಗಸ್ಥರಾಗುವ ಮೂಲಕ ತಂದೆ ತಾಯಿ ಮತ್ತು ಕುಟುಂಬವನ್ನು ಪ್ರೀತಿಯಿಂದ ಸಾಕಬೇಕು. ಇದರಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಗುರಿ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ , ನಗರಸಭೆ ಅಧ್ಯಕ್ಷೆ ಆರ್. ಮಂಜುಳ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ಮಲ್ಲಿಕಾರ್ಜುನ, ಸದಸ್ಯರಾದ ಕೆ. ವೀರಭದ್ರಯ್ಯ, ಸುಜಾತ, ಕವಿತಾ.ಪ್ರಾಚಾರ್ಯ ಜಿ.ಆರ್. ತಿಪ್ಪೇಸ್ವಾಮಿ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading