September 15, 2025
mgnrea.jpg

ಬೆಂಗಳೂರು ಏ.10.ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ NMMS ದೈನಂದಿನ ಹಾಜರಾತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಹೆಚ್ಚು ಪಾರದರ್ಶಕವಾಗಿ ಅನುಷ್ಠಾನಿಸಲು ಎಲ್ಲಾ ಸಮುದಾಯ ಕಾಮಗಾರಿಗಳನ್ನು NMMS App ಮುಖಾಂತರ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಹಾಜರಾತಿಗಳನ್ನು Geo Tagged Photograph ಗಳ ಮೂಲಕ ಪ್ರತಿ ದಿನ ಎರಡು ಬಾರಿ ಕಡ್ಡಾಯವಾಗಿ ಸೆರೆಹಿಡಿಯಲು ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿದೆ

ಅದರಂತೆ ಪ್ರತಿ ದಿನ ಸಮುದಾಯ ಕಾಮಗಾರಿಗಳಲ್ಲಿ NMMS App ಮುಖಾಂತರ ಕಾರ್ಮಿಕರ ಹಾಜರಾತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.

NMMS App ಮುಖಾಂತರ ಸೆರೆಹಿಡಿಯುವ Photo ಗಳನ್ನು ವೀಕ್ಷಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರೂ ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸಲಾಗಿದೆ. NMMS ರಲ್ಲಿರುವ ಕಾರ್ಮಿಕರ ಸಂಖ್ಯೆಗೂ ಹಾಗೂ NMR ರಲ್ಲಿ ಸೃಜಿಸಿರುವ ಕಾರ್ಮಿಕರ ಸಂಖ್ಯೆಗಳಿಗೂ ತಾಳೆಯಾಗುತ್ತಿಲ್ಲ ಹಾಗೂ ಅನೇಕ ಕಾಮಗಾರಿಗಳಲ್ಲಿ ಒಂದೇ ತೆರನಾದ ಕಾರ್ಮಿಕರು ಕಂಡುಬರುತ್ತಿರುವುದಾಗಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ದೂರು ಸಲ್ಲಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ದಿನಾಂಕ 01.04.2025 ರಿಂದ NMMS ರಲ್ಲಿ ಪಡೆಯಲಾಗುವ ಹಾಜರಾತಿಗಳಿಗೆ ಗ್ರಾಮ ಪಂಚಾಯತಿಗಳ ಕಾಮಗಾರಿಗಳಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಿ, ಧೃಡೀಕರಿಸಿ ಸಹಿ ಮಾಡುವುದು, ಅನುಷ್ಠಾನ ಇಲಾಖೆಗಳಿಗೆ ಸಂಬಂಧಿಸಿದಂತೆ ಮೊದಲನೇ ಸಹಿದಾರರು (1st Signatory) ಪರಿಶೀಲಿಸಿ, ದೃಡೀಕರಿಸಿ ಸಹಿಮಾಡುವುದು ಹಾಗೂ ಸಂಬಂಧಪಟ್ಟ ಕಾಮಗಾರಿಗಳ ಕಡತದಲ್ಲಿ ಲಗತ್ತಿಸಿ ನಂತರ Wage List ಸೃಜಿಸುವುದು. ಎರಡನೇ ಸಹಿದಾರರು (2nd Signatory) ಕಾಲಕಾಲಕ್ಕೆ ಕಾರ್ಮಿಕರ ಹಾಜರಾತಿಗಳನ್ನು ಕಡತಗಳಲ್ಲಿ ಪರಿಶೀಲಿಸುವುದು. ಇದರಿಂದ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ನೈಜ ಕಾರ್ಮಿಕರಿಗೆ ಕೂಲಿ ಮೊತ್ತವನ್ನು ಪಾವತಿಸಬಹುದಾಗಿರುತ್ತದೆ. ಈ ಪಕ್ರಿಯೆಯನ್ನು ಉಲ್ಲಂಘಿಸಿ, ಕೂಲಿ ಮೊತ್ತವನ್ನು ಪಾವತಿಸಿದಲ್ಲಿ ಸಂಬಂಧ ಪಟ್ಟವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಿ, ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading