
.ವರದಿ: ಕೆ.ಟಿ.. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ : ಹೋಬಳಿಯ ಮಲ್ಲೂರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಲ್ಲನಾಯಕನಹಳ್ಳಿ ಗ್ರಾಮದ ಸಮೀಪವಿರುವ ಹಳ್ಳಿ ಕಪಿಲೆ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಬೊಮ್ಮಲಿಂಗಪ್ಪ ಆಗ್ರಹಿಸಿದರು.
ನಂತರ ಮಾತನಾಡಿದ ಅವರು ಸುಮಾರು ವರ್ಷಗಳಿಂದ ಮೂಲಭೂತ ಸೌಲಭ್ಯ ದೊರೆಯುತ್ತಿಲ್ಲ. ಕುಡಿಯುವ ನೀರಿಗಾಗಿ ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿರುವ ಓಬಯ್ಯನಹಟ್ಟಿ ಹಾಗೂ ದಾಸರಮುತ್ತಯ್ಯನಹಳ್ಳಿ ಗ್ರಾಮಗಳಿಗೆ ಹೋಗಿ ಕುಡಿಯುವ ನೀರು ತರುವ ಪರಿಸ್ಥಿತಿ ಇದೆ. ಪ್ರಸ್ತುತ ಜಮೀನಿನಲ್ಲಿರುವ ಬೋರ್ವೆಲ್ ಗಳಿಂದ ವಿದ್ಯುತ್ ಇರುವ ಸಮಯವನ್ನು ನೋಡಿ ನೀರು ತರಬೇಕು ಇಲ್ಲವಾದಲ್ಲಿ ಎರಡರಿಂದ ಮೂರು ಕಿಲೋಮೀಟರ್ ಹೋಗಿ ನೀರು ತರಬೇಕಾಗುತ್ತದೆ.
ಬೆಳಗ್ಗೆನೇ ನೀರು ತಂದು ಕೂಲಿ ಕೆಲಸಕ್ಕೆ ತರಲೇಬೇಕು ಇಲ್ಲವಾದಲ್ಲಿ ಆ ದಿನದ ಕೂಲಿ ನೀರಿಗಾಗಿ ಮೀಸಲಿಡಬೇಕು. ಇಲ್ಲವಾದಲ್ಲಿ ಸಂಜೆ ಬಂದು ಕತ್ತಲಲ್ಲಿ ನೀರು ತರಬೇಕಾಗುತ್ತದೆ. ಈ ಕುರಿತಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿಯನ್ನು ನೀಡಿದರು ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿಲ್ಲ ಹಾಗೂ ಈ ಭಾಗದ ಜನಪ್ರತಿನಿಧಿಗಳನ್ನು ಸಂಪರ್ಕಿಸಿದರು ಸಹ ಪ್ರಯೋಜನವಾಗಿಲ್ಲ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.