ಹೊಸದುರ್ಗ: ಪ್ರತಿಯೋಬ್ಬರೂ ಸಹಾ ಹೆಣ್ಣನ್ನು ಗೌರವಿಸಬೇಕು, ಹೆೆಣ್ಣಿನ ತ್ಯಾಗ, ಪ್ರೀತಿಗೆ ಸರಿಸಾಟಿ ಇಲ್ಲ ಎಂದು ವಕೀಲೆ ಶ್ರೀಮತಿ ಜ್ಯೋತಿ ಅಭಿಪ್ರಾಯಿಸಿದರು.
ನಿಸರ್ಗ ಮಹಿಳಾ ಮಹಾ ಒಕ್ಕೂಟ ಹೊಸದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನಿಸರ್ಗ ಸಂಸ್ಧೆಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಹಕ್ಕುಗಳು ಮತ್ತು ಸಮಾನತೆ ಕುರಿತಂತೆ ಮಾತನಾಡಿದರು.
ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಇಂದಿಗೂ ಸಹಾ ತಪ್ಪಿಲ್ಲ, ಇಂದು ನಾವೆಲ್ಲರೂ ಸಹಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ,ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ ಅವಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಮಹಿಳೆಯರ ಪರವಾಗಿ ಅನೇಕ ಕಾನೂನುಗಳು ಜಾರಿಗೆ ಬಂದಿವೆ ಎಂದರು. ತವರಿಂದ ಗಂಡನ ಮನೆಗೆ ಹೋದ ಹೆಣ್ಣು ವಿನಾಕಾರಣ ಆಸ್ತಿಯ ಹಕ್ಕು ಚಲಾಯಿಸಬೇಡಿ ಅದು ಹೆಣ್ಣು ಮಕ್ಕಳಿಗೆ ಶ್ರೇಯಸ್ಸು ಅಲ್ಲಾ ಎಂದು ಕಿವಿ ಮಾತು ಹೇಳಿದ ಅವರು ಕುಟುಂಬದ ಮನೆಯಲ್ಲಿ ಮಾನಸಿಕ ನೆಮ್ಮದಿ ಇರಬೇಕು ಅಂತಹ ಮನೆಗಳಲ್ಲಿ ಸಂತೋಷ ಇರುತ್ತದೆ ಎಂದು ವ್ಯಾಖ್ಯಾನಿಸಿದರು.
ನಿಸರ್ಗ ಮಹಿಳಾ ಮಹಾ ಒಕ್ಕೋಟದ ಅಧ್ಯಕ್ಷೆ ಶ್ರೀಮತಿ ಶೈಲಜ ಅಧ್ಯಕ್ಷತೆ ವಹಿಸಿದ್ದರು. ನಿಸರ್ಗ ಸಂಸ್ಧೆಯ ನಿರ್ಧೇಶಕಿ ವಂದನೀಯ ಸಿಸ್ಟರ್,ಮರಿಯಾ ಪಿಂಟೊ ಕಾರ್ಯಕ್ರಮವನ್ನ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು, ಸಿಡಿಪಿಓ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರೂಪರಾಣಿ ಮಹಿಳಾ ಸಬಲೀಕರಣ ಕುರಿತಂತೆ ಮಾತನಾಡಿದರು.
ಮುಖ್ಯ ಅತಿಧಿಗಳಾಗಿ ನಿಸರ್ಗ ಸಂಸ್ಧೆಯ ಸುಪೀರಿಯರ್ ವಂದನೀಯ ಸಿಸ್ಟರ್ ಮೋಕ್ಷ, ನಿಸರ್ಗ ಸ್ವ ಶಕ್ತಿ ಸೌಹಾರ್ಥ ಸ್ವ ಸಹಾಯ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಅನಸೂಯ, ದೇವಿಗೆರೆ ರೈತ ಶಕ್ತಿ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷೆ ಶ್ರೀಮತಿ ಭಾರತಿ,ಮೇಲ್ವಿಚಾರಕಿ ಜಯಮ್ಮ,ಸುಮ, ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ಮೂರ್ತಿ ಸೇರಿದಂತೆ ನಿಸರ್ಗ ಸಂಸ್ಧೆಯ ಸಿಬ್ಬಂಧಿ ವರ್ಗ ಮತ್ತು ಮಹಿಳಾ ಮಹಾ ಒಕ್ಕೋಟದ ಸರ್ವ ಸದಸ್ಯರುಗಳು ಭಾಗವಹಿಸಿದ್ದg
About The Author
Discover more from JANADHWANI NEWS
Subscribe to get the latest posts sent to your email.