ಹೊಸದುರ್ಗ: ತಾಲೂಕಿನ ಹಾಲುರಾಮೇಶ್ವರ ಯೋಜನಕಚೇರಿ ವ್ಯಾಪ್ತಿಯ ಬಂಟನಗವಿ ಗ್ರಾಮದ ಶ್ರೀ ದುರ್ಗಂಬಿಕಾ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೧ ಲಕ್ಷ ರೂ ಸಹಾಯ ಧನ ಮಂಜೂರಾಗಿ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಲರಾಮೇಶ್ವರ ಯೋಜನಾ ಕಚೇರಿಯ ಯೋಜನಾಧಿಕಾರಿ ಚಂದ್ರಶೇಖರ ಚೆಕ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ದೇವಸ್ಥಾನದ ಸಮಿತಿಯವರು ಆದಷ್ಟು ಬೇಗ ದೇವಸ್ಥಾನದ ಕಟ್ಟಡ ಕೆಲಸವನ್ನು ಮುಗಿಸಬೇಕು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಪ್ರದೇಶದ ಕೆರೆಗಳ ಹುಳೆತ್ತುವ ಕಾರ್ಯಕ್ರಮ. ಹಿಂದೂ ರುದ್ರ ಭೂಮಿ ಅಭಿವೃದ್ಧಿ. ನಿರ್ಗತಕರಿಗೆ ವಾತ್ಸಲ್ಯ ಮನೆ ನಿರ್ಮಾಣ. ನಿರ್ಗತಿಕರಿಗೆ ಮಾಸಾಸನ ವಿತರಣೆ. ತಾಲೂಕಿನಲ್ಲಿ ಪ್ರಸ್ತುತ ವರ್ಷದಲ್ಲಿ ನಾಲ್ಕು ಹೊಸ ಮನೆ ನಿರ್ಮಾಣ. ೨೮೦ ಜನ ನಿರ್ಗತಿಕರ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಸನ ವಿತರಣೆ ಮಾಡಲಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಪ್ರಸ್ತುತ ವರ್ಷದಲ್ಲಿ ತಾಲೂಕಿನಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಹೀಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗೋಸ್ಕರ ಶ್ರಮಿಸುತ್ತಿರುವ ಬಗ್ಗೆ ಜನರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಮಹಾಂತೇಶ್, ಕಾರ್ಯದರ್ಶಿ ಕರಿಯಪ್ಪ , ವಲಯದ ಮೇಲ್ವಿಚಾರಕ ನಾಗರಾಜ್ ಮತ್ತು ಸಮಿತಿಯ ಎಲ್ಲಾ ಸದಸ್ಯರು. ಮತ್ತು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.