March 19, 2026
d10-tm5.jpg


ಹೊಸದುರ್ಗ: ತಾಲೂಕಿನ ಜನರಿಗೆ ಚಿರತೆ ಕಾಟ ಮತ್ತು ಜಾಂಬವAತನ ಕಾಟ ತಪ್ಪಿದಂತೆ ಕಾಣುತ್ತಿಲ್ಲ. ಈವರೆಗೆ ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಆವರಣದಲ್ಲಿ ಕಾಣಸಿಕೊಳ್ಳುತ್ತಿದ್ದ ಕರಡಿಗಳು, ಈಗ ಇನ್ನೂ ಸ್ವಲ್ಪ ಮುಂದೆ ಹೋಗಿ ಖಾಸಗಿ ಬಡಾವಣೆಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿವೆ.
ಪಟ್ಟಣದ ಕಂಬದ ದೇವರ ಬಡಾವಣೆಯಲ್ಲಿ ಯಾವುದೋ ದನ ಅಥವಾ ಎಮ್ಮೆಯಂತೆಯೇ ಜೋಡಿ ಕರಡಿ ಸಹಜವಾಗಿ ಓಡಾಡುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಕರಡಿಯ ಹಿಂದೆ ಎರಡು ನಾಯಿಗಳು ಬೊಗಳಿಕೊಂಡು ಓಡಾಡುತ್ತಿದ್ದು, ಕರಡಿಯನ್ನ ಗುರುತಿಸಿದೆ ಯಾರಾದರೂ ಜನ ಬಂದಿದ್ದರೆ ಗತಿಯೇನು ಎಂಬ ಆತಂಕ ಕಾಡುತ್ತಿದ್ದು ಹಾಡು ಹಗಲೇ ಪಟ್ಟಣದಲ್ಲಿ ಕರಡಿಗಳ ಓಡಾಟದಿಂದ ಆತಂಕಗೊAಡಿರುವ ಪಟ್ಟಣದ ಜನತೆ ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ತಾಲೂಕಿನ ಮತ್ತೋಡು ಭಾಗದಲ್ಲಿ ಚಿರತೆಯೊಂದು ಕುರಿಗಳ ಮೇಲೆ ದಾಳಿ ಮಾಡಿ ಸುಮಾರು ೧೦ ಕ್ಕೂ ಹೆಚ್ಚು ಕುರಿಮರಿಗಳನ್ನ ಸಾಯಿಸಿತ್ತು ಈಗ ನೋಡಿದರೆ ಹೊಸದುರ್ಗ ಪಟ್ಟಣದಲ್ಲೆ ಹಾಡು ಹಗಲೆ ಕರಡಿ ನಿರ್ಭಯವಾಗಿ ತಿರುಗಾಡುತ್ತಿದೆ ಪರುಸ್ಧಿತಿ ಈಗೆಯೇ ಮುಂದುವರೆದರೆ ಎಲ್ಲಿಗೆ ಹೊಗುವುದು ಎಲ್ಲಿಗೆ ಬರುವುದು ಎಂಬAತಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading