ಚಳ್ಳಕೆರೆ ಮಾ.10
ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಸ್ಕೂಟಿಯಲ್ಲಿಟ್ಟಿದ್ದ.1.40 ಕದ್ದು ನಾಲ್ಕು ದಿನಗಳು ಕಳೆಳೆಯುವ ಮುನ್ನವೇ ಮತ್ತೆ ಬೈಕ್ ನಲ್ಲಿದ್ದ 1.70 ಲಕ್ಷ ಕಳವಾದ ಘಟನೆ ಬ್ಯಾಂಕ್ ಗ್ರಾಹಕರಲ್ಲಿ ಭೀತಿಯನ್ನುಂಟು ಮಾಡಿದೆ.
ಹೌದು ಇದು ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗ ತಾಲೂಕಿನ ಕುರುಡಿಹಳ್ಳಿ ಗ್ರಾಮದ ತಿಪ್ಪೇಸ್ವಾಮಿ ಎಂಬವರು ಬೆಳಗ್ಗೆ .10.20ರ ಸಮಯದಲ್ಲಿ ತನ್ನ ಬೈಕ್ ನ ಸೈಡ್ ಬ್ಯಾಗ್ ನಲ್ಲಿಟ್ಟು ಬ್ಯಾಂಕ್ ಒಳಗೆ ಹೋಗಿ ಬರುವಷ್ಟರಲ್ಲಿ ಬ್ಯಾಗ್ ನಲ್ಲಿದ್ದ ಹಣ ಕಳವಾಗಿರುವುದು ಕಂಡು ಬಂದಿದೆ.
ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೋಲಿಸ್ ಅಧಿಕಾರಿಗಳು ಕೆನರಾ ಬ್ಯಾಂಕ್ ನಲ್ಲಿರುವ ಸಿ.ಸಿ.ಕ್ಯಾಮರ ಪರಿಶೀಲನೆ ಮಾಡಿಲು ಮುಂದಾಗಿದ್ದು ತನಿಖೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಒಟ್ಟಾರ ಬ್ಯಾಂಕ್ ಗಳ ಮುಂದಿನ ಅಕ್ರಮ ಹೋಟೆಲ್. ನಗರದ ಪ್ರಮುಖ ಸ್ಥಳಗಲ್ಲಿ ಸಿ.ಸಿ.ಕ್ಯಾಮರಗಳಿಲ್ಲದೆ ಇರುವುದೇ ಕಳ್ಳರಿಗೆ ವರದಾನವಾಗಿದ್ದು ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಸಿ.ಸಿ.ಕ್ಯಾಮರ ಅಳವಡಿಸಿವರೇ ಕಾದು ನೋಡ ಬೇಕಾಗಿದೆ.


About The Author
Discover more from JANADHWANI NEWS
Subscribe to get the latest posts sent to your email.