ಹಿರಿಯೂರು :
ಕಾಯಕವೇ ಕೈಲಾಸವೆಂದು ಭಾವಿಸಿದ್ದ ವಚನಕಾರರುಗಳು ಸಮಾಜದ ಲೋಪದೋಷಗಳನ್ನು ತಿದ್ದುವ ಕೆಲಸ ಮಾಡಿದರಲ್ಲದೆ, ಕಾಯಕತತ್ವವನ್ನು ಜಗತ್ತಿಗೆ ಸಾರಿದರು, ಇಂತಹ ವಚನಕಾರರುಗಳ ಸರಳ ವಚನಗಳ ಮಹತ್ವವನ್ನು ಇಂದಿನ ಯುವಜನತೆ ಅರಿಯಬೇಕು ಎಂಬುದಾಗಿ ಉಪತಹಶೀಲ್ದಾರ್ ತಿಪ್ಪೇಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದಲಿತ ವಚನಕಾರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ನಂತರ ಅವರು ಮಾತನಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪತಹಶೀಲ್ದಾರ್ ತಿಪ್ಪೇಸ್ವಾಮಿ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಎ.ಡಿ.ಎ ಮಂಜುನಾಥ್, ಪಶು ಪಾಲನ ಇಲಾಖೆ ಡಾ.ಮಹಮ್ಮದ್ ಹುಸೇನ್, ತಾಲೂಕು ದೈಹಿಕ ಪರಿವೀಕ್ಷಕರಾದ ರವೀಂದ್ರ ನಾಯಕ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ತಾಲೂಕು ಅಧ್ಯಕ್ಷ ರಾಘವೇಂದ್ರ, ಬಬ್ಬೂರು ಪರಮೇಶ್, ಎಸ್ಟಿ ಘಟಕ ಅಧ್ಯಕ್ಷ ರಂಗಸ್ವಾಮಿ, ಭಾರತ ಸೇವಾದಳ ತಾಲೂಕು ಅಧಿನಾಯಕ ಟಿ.ಎಸ್.ಶಶಿಧರ್ ಕಂದಾಯ ಇಲಾಖೆ ಶ್ರೀನಿವಾಸ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.