ವರದಿ-ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಹೊಸದುರ್ಗ ತಾಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ಮಹೋತ್ಸವ ಹಾಗೂ ರಾಷ್ಟ್ರೀಯ ಭಗೀರಥ ಜಯಂತ್ಯೋತ್ಸವ ಕಾರ್ಯಕ್ರವ ಅಂಗವಾಗಿ ಸೋಮವಾರ ಬೆಳ್ಳಿಗ್ಗೆಯಿಂದಲೇ ಮಠದ ಅರ್ಚಕರುಗಳಿಂದ ಹೋಮ,ಹವನಗಳು ಜರುಗಿದವು
ಎರಡೂ ದಿನಗಳ ಕಾಲ ನಡೆಯುತ್ತಲಿದೆ ರೋಮಾಂಚನ ಸ್ಪರ್ಧೆ
ನೋಡುಗರ ಮನಸೂರೆಗೊಳ್ಳುವ ರಾಜ್ಯ ಮಟ್ಟದ ಭರ್ಜಿರಿ ಟಗರು ಕಾಳಗ ಮತ್ತು ಜೋಡಿ ಎತ್ತಿನ ಗಾಡಿ ಸ್ಪರ್ಧೆ. ತಾಲೂಕಿನ ಬ್ರಹ್ಮ ವಿದ್ಯಾನಗರ ಭಗೀರಥ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ ಮಹೋತ್ಸವ ಹಾಗೂ ರಾಷ್ಟ್ರೀಯ ಭಗೀರಥ ಜಯಂತ್ಯೋತ್ಸವದಲ್ಲಿ ಸೋಮವಾರ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಸ್ಪರ್ಧೆ ಹಾಗೂ ಟಗರು ಕಾಳಗ ಆಯೋಜಿಸಲಾತ್ತು, ಜೋಡಿ ಎತ್ತಿನ ಗಾಡಿ ಸ್ಪರ್ಧೆ ಶ್ರೀಮಠದ ಪಕ್ಕದಲ್ಲಿ ೧೦ ಎಕರೆ ಭೂಮಿಯನ್ನು ಸಿದ್ಧಗೊಳಿಸಲಾಗಿತ್ತು. ಬಾಗಲಕೋಟೆ, ಮೈಸೂರು, ಮಂಡ್ಯ, ಕಡೂರು, ಅಜ್ಜಂಪುರ ಸೇರಿದಂತೆ ವಿವಿಧೆಡೆಯಿಂದ ೨೫ ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿ ಸ್ಪರ್ಧೆಗಿಳಿದಿದ್ದರು. ಸುಮಾರು ೫೦ ಕ್ಕೂ ಹೆಚ್ಚು ಎತ್ತಿನಗಾಡಿ ಸ್ಪರ್ಧೆಗೆ ಆಗಮಿಸಿದ್ದವು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹೧ ಲಕ್ಷ, ₹೬೦,೦೦೦ ಹಾಗೂ ೨೫,೦೦೦ ಬಹುಮಾನ ಘೋಷಿಸಲಾಗಿದೆ.
ಟಗರು ಕಾಳಗ : ೮, ೪ ಮತ್ತು ೬ ಹಲ್ಲುಗಳಿರುವ ಟಗರುಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ.
ಜೋಡಿ ಎತ್ತಿನ ಗಾಡಿ ಸ್ಪರ್ಧೆ ಹಾಗೂ ಟಗರು ಕಾಳಗ ಫೆ. ೧೦ ಕ್ಕೆ ಬೆಳಿಗ್ಗೆ ೧೦ ಗಂಟೆಗೆ ಆರಂಭವಾಗಿ, ಫೆ.೧೧ ರವರೆಗೆ ನಡೆಯಲಿದೆ. ಪಟ್ಟಾಭಿಷೇಕದ ಅಂಗವಾಗಿ ಬೆಳ್ಳಿಗ್ಗೆಯಿಂದಲೇ ಮಠದ ಅರ್ಚಕರುಗಳಿಂದ ಹೋಮ, ಹೂವಿನ ಕಾರ್ಯಕ್ರಮ, ಮಠಾಧೀಶರುಗಳಿಂದ ಆರ್ಶೀವಚನ, ಸಂಜೆ ವೇದಿಕೆ ಕಾರ್ಯಕ್ರಮ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಗೀರಥ ಶ್ರೀಗಳಿಗೆ ೨೦೦೦ ನೇ ಸಾಲಿನ ಫೆ. ೧೦ ರಂದು ಪಟ್ಟಾಭಿಷೇಕವಾಗಿದ್ದು, ಇದೀಗ ೨೬ ವರ್ಷ ಪೂರೈಸಿದೆ. ಪಟ್ಟಾಭಿಷೇಕ ಬಂದಾಗಿನಿAದಲೂ ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಜೊತೆಗೆ ಎಲ್ಲಾ ಸಮುದಾಯಗಳ ಜೊತೆ ಸಹಬಾಳ್ವೆ ಸಹಕಾರದಿಂದ ಇದ್ದು, ಜನಮೆಚ್ಚುಗೆ ಗಳಿಸಿದ್ದಾರೆ. ಶ್ರೀಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಕೂಡ ನಡೆಯುತ್ತಿದೆ.



About The Author
Discover more from JANADHWANI NEWS
Subscribe to get the latest posts sent to your email.