ಹೊಸದುರ್ಗ ಫೆ.10
ಇಂದು ಶ್ರೀ ದುರ್ಗಾಂಭಿಕಾ ದೇವಿಯವರ ನೂತನ ದೀಪಸ್ತಂಭ ಪ್ರತಿಷ್ಠಾಪನೆ ಮಹೋತ್ಸವ
ಪಟ್ಟಣದ ನಗರ ದೇವತೆಯಾದ ಶ್ರೀ ದುರ್ಗಾಂಭಿಕಾ ದೇವಿಯವರ ದೇವಸ್ಧಾನದಲ್ಲಿ ನೆಲಸಿರುವ ಶ್ರೀ ಮಾತಂಗ್ಯಮ್ಮ ದೇವಿ ಹಾಗೂ ಶ್ರೀ ಮಾರಾಳಮ್ಮ ದೇವಿಯವರ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ದುಗಾಂಭಿಕಾ ದೇವಿಯವರ ನೂತನ ದೀಪಸ್ತಂಭ ಪ್ರತಿಷ್ಠಾಪನೆ ಮಹೋತ್ಸವವು ಫೆ.೧೧ ರಂದು ಮಂಗಳವಾರ ಜರುಗಲಿದ್ದು
ಮಹೋತ್ಸವದ ಅಂಗವಾಗಿ ಫೆ.೧೦ ರಂದು ಸೋಮವಾರ ಮುಂಜಾನೆ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ಗೂದೋಳಿ ಲಗ್ನದಲ್ಲಿ ಗಂಗಾಪೂಜೆ, ಪ್ರದಾನ ನವಗ್ರಹ, ದೇವತೆಯರ ಕಲಶಾರಧನೆ, ಹೋಮ, ನೂತನ ವಿಗ್ರಹ ಬಿಂಭ ಶುದ್ದಿ ಧ್ಯಾನ ನಂತರ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ಫೆ.೧೧ ರಂದು ಮಂಗಳವಾರ ಬೆಳಗಿನ ಜಾವ ನೂತನ ವಿಗ್ರಹ ಅಷ್ಟಭಂದ, ಪ್ರಾಣಪ್ರತಿಷ್ಠಾಪನೆ, ಗಣಪತಿ ನವಗ್ರಹ, ಹೋಮ, ದೇವತೆಯರ ಹೋಮ, ಬೆಳಿಗ್ಗೆ ೯.೩೦ ಕ್ಕೆ ಮಹಾಪೂರ್ಣಾಹುತಿ, ಕಳಶಾಭೀಷೇಕ, ಕಳಶಾಭೀಷೇಕ, ಪಂಚಾಮೃತಾಭಿಷೇಕ, ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿದ್ದು ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ದೇವಸ್ಧಾನದ ಆಡಳಿತ ಮಂಡಳಿಯ ಕಮಿಟಿಯವರು ಮತ್ತು ಭಕ್ತರು ಭಾಗವಹಿಸಲಿದ್ದಾರೆ.


About The Author
Discover more from JANADHWANI NEWS
Subscribe to get the latest posts sent to your email.