December 14, 2025
IMG20250210124807_01.jpg

ಚಳ್ಳಕೆರೆ ಫೆ 10.

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಆಡಳಿತಧಿಕಾರಿಗಳ ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆಕಪ್ಪು ಪಟ್ಟಿ ಧರಿಸಿ ಅನಿರ್ಧಿಷ್ಟವದಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಟಿ.ರಘುಮೂರ್ತಿ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ ಇದು ಕೆಲಸದ ಒತ್ತಡ ಅಂದುಕೊಳ್ಳದೆ ಸರಕಾರ ಸೌಲಭ್ಯಗಳನ್ನು ನಿಗದಿತ ಸಮಯಕ್ಕೆ ತಲುಪಿಸಲು ಹಾಗೂ ಮದ್ಯವರ್ತಿಗಳಿಂದ ಆಗುವ ನಕಲಿ ದಾಖಲೆ ಹಾವಳಿಯನ್ನು ತಪ್ಪಿಸಲು ಹೊಸ ಹೊಸ ತಾಂತ್ರಿಕ ಯೋಜನೆ ಜಾರಿಗೊಳಿಸುತ್ತಿದ್ದು ಅದನ್ನು ಸವಾಲಾಗಿ ಸ್ವೀಕರಿದಿ ಯಾರ ಒತ್ತಡಕ್ಕೂ ಮಣಿಯದೆ ತಪ್ಪುಗಳನ್ನು ಮಾಡದೆ ಕರ್ತವ್ಯ ನಿರ್ವಹಿಸಿ ನಿಮ್ಮ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಗ್ರಾಮಾಡಳಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ ಮಾತನಾಡಿ ಕೆಲಸ ನಿರ್ವಹಿಸಲು ಬೇಕಾಗಿರುವ ಅತ್ಯಗತ್ಯ ಅತ್ಯಾಧುನಿಕ ಸೌಲಭ್ಯ ನೀಡದೆ ಕೆಲಸ ಮಾಡುವಂತೆ ಮೇಲಾಧಿಕಾರಿಗಳು ಒತ್ತಡ ಹೇರುವುದನ್ನು ವಿರೋಧಿಸಿ ನಮ್ಮ ಬೇಡಿಕೆ ಈಡೇರುಸುವ ತನಕ ಅನಿರ್ದಿಷ್ಟ ದಿನಗಳ ವರೆಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು. ಜೀವ ಇಲ್ಲದ ಯಂತ್ರಗಳಿಗೆ ವಿಶ್ರಾಂತಿ ಇದೆ. ಆದರೆ, ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳಿಗಿಲ್ಲ. ಮೇಲಾಧಿಕಾರಿಗಳ ಪಾಲಿಗೆ ಯಂತ್ರಕ್ಕಿಂತಲೂ ಕಡೆಯಾಗಿದ್ದೇವೆ. ಈ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಮಗೆ ಆರೋಗ್ಯ ತಪಾಸಣೆ ಮಾಡಿದರೆ ಬಹುತೇಕ ನೌಕರರಿಗೆ ಬಿಪಿ, ಶುಗರ್ ಬಂದಿರುವ ಬಗ್ಗೆ ಅನುಮಾನಗಳು ಬರುತ್ತವೆ. ಮಾನಸಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುವಾಗ ಹೆಚ್ಚು ಕಡಿಮೆಯಾದರೆ ಅದಕ್ಕೆ ನಮ್ಮದೇ ತಲೆ ತಂಡವಾಗುತ್ತದೆ. ಏನಾದರೂ ನಮಗೆ ಹೆಚ್ಚು ಕಡಿಮೆಯಾದರೆ ನಮ್ಮ ಕುಟುಂಬದ ನಿರ್ವಹಣೆ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರೇಯಾಂಕ ಗಳಿಸಬೇಕು ಎನ್ನುವ ಉದ್ದೇಶದಿಂದ ಮೇಲಾಧಿಕಾರಿಗಳು ಒತ್ತಡ ಹಾಕಿ ಬಿಡುವಿಲ್ಲದೆ ದುಡಿಸಿಕೊಳ್ಳುತ್ತಾರೆ. ವಿಚಿತ್ರ ಎಂದರೆ ಕಚೇರಿಗಳಿಗೆ ವೇಳೆ ಮುಗಿದ ಮೇಲೆ ಮೀಟಿಂಗ್ ಮಾಡುವುದು ಅಲ್ಲದೆ ರಜೆ ದಿನದ ಹಿಂದಿನ ದಿನದ ಸಂಜೆ ಮೀಟಿಂಗ್ ಮಾಡಿ, ಇದೆಲ್ಲ ಗೊತ್ತಿಲ್ಲ ನಾಳೆ ಈ ಕೆಲಸ ಪೂರ್ಣಗೊಳಿಸಬೇಕು. ಇಲ್ಲದೆ ಹೋದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎನ್ನುವ ಭಯದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ ಎಂದು ಕಂದಾಯ ನೌಕರರ ಅಳಲಾಗಿದೆ.
ರಜೆ ದಿನಗಳಲ್ಲಿ ನಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಲಾಗುತ್ತಿಲ್ಲ. ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯದಂತಾಗಿದೆ. ಇದರಿಂದ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ ಎಂದು ನೋವು ತೋಡಿಕೊಂಡರು

ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಅಂದಾಜು 17ಕ್ಕೂ ಅಧಿಕ ಮೊಬೈಲ್ ಅಥವಾ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದಾರೆ. ಇದನ್ನು ನಿರ್ವಹಿಸಲು ಬೇಕಾದ ಮೊಬೈಲ್, ಲ್ಯಾಪ್ ಟಾಪ್ ಅತ್ಯಾಧುನಿಕ ಉಪಕರಣ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು ವೃತ್ತಕ್ಕೆ ಒಂದರಂತೆ ಮೊಬೈಲ್, ಲ್ಯಾಪ್‌ಟಾಪ್, ಗೂಗಲ್ ಕ್ರೋಮ್‌ಬುಕ್, ಪ್ರಿಂಟರ್, ಇಂಟರ್‌ನೆಟ್ ಸೌಲಭ್ಯ ನೀಡುವವರೆಗೆ ಕೆಲಸ ಮಾಡುವುದಿಲ್ಲ, ಆಧಾರ್‌ಸೀಡ್, ಲ್ಯಾಂಡ್ ಬೀಟ್, ಬಗರ್‌ಹುಕುಂ, ಹಕ್ಕುಪತ್ರ, ನಮೂನೆ 1-5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆಪ್, ವಿವಿಧ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಮುನ್ನು ಗ್ರಾಮಾಡಳಿತ ಅಧಿಕಾರಿಗಳು ತಹಶೀಲ್ದಾರ್ ರೆಹಮಾನ್ ಪಾಷ ಇವರಿಗೆ ಒಂದು ತಿಂಗಳು ರಜೆ ನೀಡುವ ಮೂಲಕ ಪ್ರತಿಭಟನೆಗೆ ಮುಂದಾದರು.
ತಾಲೂಕಿನ ಎಲ್ಲಾ ಪಿರ್ಕ ಗ್ರಾಮಲೆಕ್ಕಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading