December 14, 2025
IMG-20250210-WA0216.jpg

ಚಳ್ಳಕೆರೆ ಫೆ.10

ಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹ ಅಪಾರ’ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ಅಯೋಜಿಸಿದ್ದ ದಲಿತ ವಚನಕಾರರ ಜಯಂತಿ ಉದ್ಘಾಟಿಸಿ ಮಾತನಾಡಿದರು. ‘ಕಾಯಕ ನಿಷ್ಠೆ, ಸಮಾಜಮುಖಿ ಚಿಂತನೆ, ಲಿಂಗಾಂಗ ಸಾಮರಸ್ಯಗಳ ಮೂಲಕ ದಲಿತ ಸಮುದಾಯದ ಕಾಯಕ ಜೀವಿಗಳು ತಮ್ಮ ಬದುಕಿನ ಅನುಭವ, ನೋವು, ನಲಿವುಗಳನ್ನು ವಚನಗಳಲ್ಲಿ ಸಂಗ್ರಹಿಸುತ್ತ ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದು ಇಂತಹಬವಚನಕಾರರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ‘ಇತರೆ ವಚನಕಾರರಿಗಿಂತ ದಲಿತ ವಚನಕಾರರ ವಚನಗಳಲ್ಲಿ ಬಳಸಿದ ಶಬ್ದಗಳಿಗೆ ಗಟ್ಟಿತನವಿದೆ. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ,ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರುಗಳ ವಚನಗಳು ನಮಗೆಲ್ಲ ದಾರಿ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈತ್ರ ದ್ಯಾಮಣ್ಣ.ಮಾಜಿ ಗ್ರಾಪಂ ಅಧ್ಯಕ್ಷ ಓ.ಆನಂದ್.ನಗರಸಭೆ ಸದಸ್ಯ ವೀರಭದ್ರಯ್ಯ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜಯತುನ್ ಬಿ. ಉಪಾಧ್ಯೆ.ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ.ಸದಸದ್ಯರಾದ ರಮೇಶ್ ಗೌಡ. ಬಡಗಿಪಾಪಣ್ಣ. ಅನ್ವರ್.ವೀರಭದ್ರಿ.ವಕೀಲ ಶಶಿರಾಜ್.ಜಿಪಂ ನಾಮನಿರ್ದೇಶನ ಸದಸ್ಯ ರಂಗಸ್ವಾಮಿ.ಗ್ಯಾರೆಂಟಿ ತಾಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ. ತಾಪಂ ಇಒ ಶಶಿಧರ್ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading