ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಐತಿಹಾಸಿಕ ಚಿಕ್ಕ ಕೆರೆಯಲ್ಲಿ ದಿನಬೆಳಗಾದರೆ ಘನ ತ್ಯಾಜ್ಯ ವಸ್ತುಗಳ ಹಾವಳಿ ಹೆಚ್ಚಾಗಿದೆ. ಇಡೀ ಹೋಬಳಿಯ ಜನರಿಗೆ ಅವಲಂಬಿತವಾಗಿರುವ ಚಿಕ್ಕಕೆರೆಯು ಸ್ವಚ್ಛತೆಯ ಕಾಪಾಡುವವರು ಯಾರು ಎಂಬುವ ಪ್ರಶ್ನೆ ಮೂಡುತ್ತಿದೆ ಎಂದು ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಗಂಭೀರವಾಗಿ ಆರೋಪಿಸಿದ್ದಾರೆ.



ಅವರು ಸೋಮವಾರ ಪಟ್ಟಣದ ಐತಿಹಾಸಿಕ ಚಿಕ್ಕಕೆರೆ ಏರಿಯಾ ಮೇಲೆ ನಿಂತು ಕೆರೆಯಲ್ಲಿ ಹಾಕಿರುವ ಕುರಿ ಮೇಕೆ ವೀಕ್ಷಣೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಶ್ರೀ ಗುರು ತಿಪ್ಪೇರದ್ರಸ್ವಾಮಿ ನಿರ್ಮಿಸಿದಂತಹ ಚಿಕ್ಕಕೆರೆ 25 ವರ್ಷಗಳಂತ ತುಂಬಿದ್ದು, ಸ್ವಾಮಿಯ ಆಶೀರ್ವಾದದಿಂದ ತುಂಬಿ ಸುತ್ತಮುತ್ತಲ ರೈತರ ಜೀವನಾಡಿ ಆಗಿದೆ. ಮಾರ್ಚ್ ತಿಂಗಳಲ್ಲಿ ಜಾತ್ರಾ ಮಹೋತ್ಸವ ಇರುವುದರಿಂದ ಜಾತ್ರೆಗೆ ಬಂದ ಭಕ್ತಾದಿಗಳು ಕೆರೆ ನೀರು ಕುಡಿಯುವ ಸಂಭವಿಸುತ್ತದೆ. ಸುತ್ತಮುತ್ತಲ ರೈತರ ಹಾಗೂ ಜಾನುವಾರುಗಳಿಗೆ ಇದೇ ನೀರನ್ನು ಕುಡಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆರೆಯಲ್ಲಿ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದಾರೆ ಕುರಿ ಮೇಕೆ ಸತ್ತ ಸಂದರ್ಭದಲ್ಲಿ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಒಂದು ಚೀಲದಲ್ಲಿ ಹಾಕಿಕೊಂಡು ಕೆರೆ ನೀರಿನಲ್ಲಿ ರೈತರು ಹಾಕಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಅದೇ ರೀತಿ ಕೋಳಿ ಅಂಗಡಿ ತ್ಯಾಜ್ಯ, ಕುರಿ ಮೇಕೆ ಮಾಂಸದ ಅಂಗಡಿ ತ್ಯಾಜ್ಯ ಹಾಗೂ ಬಾರ್ ಗಳ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದ ನೀರು ಕಲಿಸಿ ತೆಗೆದುಕೊಳ್ಳುತ್ತಿದೆ ಆದ್ದರಿಂದ ಪಶು ಆಸ್ಪತ್ರೆ ಅಧಿಕಾರಿಗಳು ರೈತರ ಸಾಕು ಪ್ರಾಣಿಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನೆಲದಲ್ಲಿ ಹೂತು ಹಾಕಿ ಫೋಟೋ ಹಾಕಬೇಕು ಎಂದು ಆದೇಶಸಬೇಕು ಎಂದರು.
About The Author
Discover more from JANADHWANI NEWS
Subscribe to get the latest posts sent to your email.