January 29, 2026
IMG20260110153417_01.jpg

ಚಳ್ಳಕೆರೆ: ಜನವರಿ 12ರಿಂದ ಶ್ರೀ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ.

ವಿಶೇಷ

ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ಶ್ರೀ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವವು ಜನವರಿ 12ರಿಂದ 17ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಗ್ರಾಮಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಜಾತ್ರಾ ಅಂಗವಾಗಿ ಜನವರಿ 12ರಂದು ಗಣಹೋಮ ಪೂಜೆ, 13ರಂದು ದೇವಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಹೋಮ–ಹವನಗಳು, 14ರಂದು ಗ್ರಾಮ ದೇವರ ಕಳಶ ಮತ್ತು ಬಲಿಕಾರ್ಯಕ್ರಮ, 15ರಂದು ನಗರಂಗೆರೆ ಗ್ರಾಮವಾಸಿಗಳ ವಿಶೇಷ ಪೂಜೆ, 16ರಂದು ಅನ್ನಸಂತರ್ಪಣೆ ಹಾಗೂ ಗ್ರಾಮೋತ್ಸವ, 17ರಂದು ಶ್ರೀ ದೇವಿಗೆ ಮಹಾಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರಾ ಸಮಿತಿಯವರು ಭಕ್ತರಿಗೆ ಯಾವುದೇ ಅಸೌಕರ್ಯವಾಗದಂತೆ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾತ್ರೆಯ ಅಂಗವಾಗಿ ಗ್ರಾಮ ಪ್ರವೇಶಕ್ಕೆ ಸಾಂಪ್ರದಾಯಿಕ ಸಾರು ಹಾಕುವ ಪದ್ಧತಿ ಪಾಲಿಸಲಾಗಿದ್ದು, ಗ್ರಾಮಸ್ಥರು ಒಗ್ಗಟ್ಟಿನಿಂದ ಉತ್ಸವದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಜಾತ್ರಾ ಸಮಿತಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸರ್ವ ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆಯ ಯಶಸ್ಸಿಗೆ ಸಹಕರಿಸುವಂತೆ ಕೋರಲಾಗಿದೆ.

ವಿಶೇಷ

ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಗ್ರಾಮದೆವತೆ ವಮಾರಮ್ಮ ದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ಭಕ್ತಿಭಾವದಿಂದ ನಡೆಯುತ್ತಿದ್ದು, ಈ ಬಾರಿ ಜಾತ್ರೆಗೆ ಗ್ರಾಮಸ್ಥರು ವಿಶಿಷ್ಟ ಸಂಪ್ರದಾಯದೊಂದಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿ ಗ್ರಾಮಸ್ಥರೆಲ್ಲರು ಸೇರಿ ದೇವಿಗೆ ಸಾರು ಹಾಕುವ ಮೂಲಕ ಜಾತ್ರೆಯ ಪೂರ್ವ ಆಚರಣೆ ನಡೆಸಲಾಯಿತು. ಈ ವೇಳೆ ಸಾರು ಹಾಕಿದ ನಂತರ ಗ್ರಾಮಕ್ಕೆ ಯಾವುದೇ ಹೊಸಬರು ಹಾಗೂ ವಾಹನಗಳು ಪ್ರವೇಶ ಮಾಡದಂತೆ ಊರ ಪ್ರವೇಶದ ಎಲ್ಲಾ ರಸ್ತೆಗಳಲ್ಲೂ ಬೇಲಿ ಹಾಕಿ ಕಾವಲು ಕಾಯಲಾಗುತ್ತಿದೆ.
ಮಂಗಳವಾರ ದೇವಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಊರ ಸುತ್ತ ಸರಗು ಹಾಕುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಸೋಮವಾರದಿಂದ ಆರಂಭವಾಗಿ ಐದು ದಿನಗಳ ಕಾಲ ಈ ಜಾತ್ರೆ ವಿಜೃಂಭಣೆಯಿಂದ ನಡೆಯಲಿದೆ.
ಗ್ರಾಮಕ್ಕೆ ಬರುವವರು ಅಗತ್ಯ ವಸ್ತುಗಳನ್ನು ಮಾತ್ರ ತರಬಹುದಾಗಿದ್ದು, ಊರಿನಿಂದ ಹೊರಗೆ ಊಟ ಅಥವಾ ನೀರನ್ನು ತೆಗೆದುಕೊಂಡು ಹೋಗುವಂತಿಲ್ಲ. ಊರಿಗೆ ಸರಗು ಹಾಕುವವರೆಗೂ ಅಪರಿಚಿತರನ್ನು ಗ್ರಾಮಕ್ಕೆ ಬಿಡಲಾಗುವುದಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವನ್ನು ಗ್ರಾಮಸ್ಥರು ಪಾಲಿಸುತ್ತಿದ್ದಾರೆ.
ದೇವಿಯ ಜಾತ್ರಾ ಮಹೋತ್ಸವವನ್ನು ಭಕ್ತರು ಅಪಾರ ಶ್ರದ್ದೆ-ಭಕ್ತಿಯಿಂದ ಆಚರಿಸುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಇಡೀ ಗ್ರಾಮವೇ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಸಾಮಾನ್ಯವಾಗಿ ಜನದಟ್ಟಣೆಯಿಂದ ಕಿಕ್ಕಿರಿದುಕೊಂಡಿರುವ ಗ್ರಾಮದ ಬೀದಿಗಳು ಇದೀಗ ಬಿಕೋ ಎನ್ನುತ್ತಿರುವುದು ಜಾತ್ರೆಯ ವೈಶಿಷ್ಟ್ಯವಾಗಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading