ಚಳ್ಳಕೆರೆ ಜ.10
ವಿದ್ಯುತ್ ಲೈನ್ ಇದೆ ವಿದ್ಯುತ್ ಪರಿವರ್ತಕ ಅಳವಡಿಸಿ ಎರಡು ವರ್ಷಗಳು ಕಳೆದರೂ ನಿರಂತರ ಜ್ಯೋತಿ ಯೋಜನೆಯಡಿ ಬೆಸ್ಕಾಂ ಅಧಿಕಾರಿಗಳು ಬುಡಕಟ್ಟು ಸಮುದಾಯಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ನೀಡದೆ ಮತ್ತು ಹಟ್ಟಿ ನಿವಾಸಿಗಳು ರಾತ್ರಿ ಕತ್ತಲಲ್ಲಿ ಕಾಲ ಕಳೆಯುವಂತಾಗಿದ್ದರೆ,
ಹೌದು ಇದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮಪಂಚಾಯಿತಿ ವ್ಯಾಪ್ತಿಯ ತೋಲಬಾಲಯ್ಯನಹಟ್ಟಿಯ ನಿವಾಸಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಲೈನ್ ಹಾಗೂ ವಿದ್ಯುತ್ ಪರಿವರ್ತಕ ಅಳವಡಿ ಸುಮಾರು ಮೂರು ವರ್ಷಗಳು ಕಳೆದರೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವುದರಿಂದ ಗಿಡಗೆಂಟೆಗಳ ಪೊದೆ ಸೇರಿದರೆ ಇತ್ತ ನಂತರಇಲ್ಲಿನ ಬುಡಕಟ್ಟು ಸಮುದಾಯದ ಕುಟುಂಬಗಳು ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಕಾಲಕಳೆಯುವಂತಾಗಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇಲ್ಲಿನ ನಿವಾಸಿಗಳಿಗೆ ನಿರಂತರ ಜ್ಯೋತಿ ಬೆಳಗಿಸುವರೇ ಕಾದು ನೋಡ ಬೇಕಿದೆ.
ರಸ್ತೆ ಅಭಿವೃದ್ಧಿ ಪಡಿಸಿ.
ತೋಡ್ಲರಹಟ್ಟಿಯಿಂದ ಕಾವಲರಹಟ್ಟಿ .ತೋಲಬಾಲನಹಟ್ಟಿ ಸಂಪರ್ಕ ರಸ್ತೆ ಗುಂಡಿಗಳಾಗಿದ್ದು ರಸ್ತೆಗೆ ಸೀಮೆಜಾಲಿ ಚಾಚಿಕೊಂಡು ರೈತರ ಎತ್ತಿನಗಾಡಿ. ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದ್ದು . ಪ್ರತಿ ನಿತ್ಯ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಾಗೂ ತುರ್ತು ಸಂಬರ್ಭದಲ್ಲಿ ರಾತ್ತಿವೇಳೆ ಸಂಚರಿಸಲು ತುಂಬಾ ತೊಂದರೆಯಾಗುತ್ತಿದ್ದು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.









About The Author
Discover more from JANADHWANI NEWS
Subscribe to get the latest posts sent to your email.