ಚಿತ್ರದುರ್ಗ ಡಿ. 09:
ಕೈಗಾರಿಕೋದ್ಯಮಿಗಳು ತಾವು ಉತ್ಪಾಧಿಸಿದ ವಸ್ತುಗಳ ಗುಣಮಟ್ಟ ಹೆಚ್ಚಿಸಿಕೊಂಡು ದೇಶ, ವಿದೇಶಗಳಿಗೆ ರಫ್ತು, ಮಾಡುವಂತಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಬಿ.ಕೆ.ಮಂಜುನಾಥಸ್ವಾಮಿ ಹೇಳಿದರು.
ಹಿರಿಯೂರು ನಗರದ ರಂಜಿತ್ ಹೋಟೆಲ್‍ನಲ್ಲಿ ಮಂಗಳವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಸಿ.ಟಿ.ಯೂ ಹಾಗೂ ಕಾಸಿಯಾ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಕೇಂದ್ರ ಸರ್ಕಾರದ ಯೋಜನೆಯಾದ ಆರ್‍ಎಎಂಪಿ ಯೋಜನೆಯಡಿ ಒಂದು ದಿನದ ರಫ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಫ್ತು ಎಂದರೆ ಒಂದು ದೇಶದಲ್ಲಿ ಉತ್ಪಾಧಿಸುವ ಸರಕು ಮತ್ತು ಸೇವೆಗಳನ್ನು ಇತರೇ ದೇಶಗಳಿಗೆ ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ. ಇದು ವಿದೇಶ ಮಾರುಕಟ್ಟೆಗಳನ್ನು ತಲುಪಲು ಮತ್ತು ಆದಾಯಗಳಿಸಲು ಕೈಗಾರಿಕೋದ್ಯಮಿಗಳಿಗೆ ಸಹಾಯ ಮಾಡುತ್ತದೆ. ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಅಂತರಾಷ್ಟ್ರೀಯ ಸಂಬಂಧಗಳನ್ನು ಸುಧಾರಿಸುತ್ತದೆ. ದೇಶಿಯವಾಗಿ ಉತ್ಪಾಧಿಸಿದ ವಸ್ತುಗಳನ್ನು ದೇಶದ ಗಡಿಯ ಹೊರಗೆ ಮಾಡುವುದನ್ನು ಒಳಗೊಂಡಿರುತ್ತದೆ ಎಂದರು.
ಭಾರತದ ಆರ್ಥಿಕತೆಯನ್ನು ಮುಖ್ಯವಾಗಿ ಮೂರು ವಲಯಗಳಾಗಿ ವಿಂಗಡಿಸಲಾಗಿದೆ ಪ್ರಾಥಮಿಕ ವಲಯ ಕೃಷಿ ಮತ್ತು ಗಣಿಗಾರಿಕೆ, ದ್ವಿತೀಯ ಉತ್ಪಾಧನೆ ಮತ್ತು ಸೇವಾ ವಲಯಗಳು ಹಾಗೂ ತೃತೀಯ ಬ್ಯಾಂಕಿಂಗ್, ಐಟಿ, ಆರೋಗ್ಯ ಇವುಗಳ ಜೊತೆಗೆ ಕ್ಯಾರ್ಟನರಿ (ಮಾಹಿತಿ) ಮತ್ತು ಕ್ರಿನರಿ (ನಿರ್ಧಾರ ತೆಗೆದುಕೊಳ್ಳುವಿಕೆ) ವಲಯಗಳು ಒಳಗೊಂಡಿರುತ್ತವೆ. ಆದರೆ ದ್ವಿತೀಯ ವಲಯವಾದ ಕೈಗಾರಿಕೆ ಉತ್ಪಾಧನೆ ಮತ್ತು ಸೇವಾ ವಲಯಗಳು ದೇಶದ ಜಿಡಿಪಿ ಮತ್ತು ಉದ್ಯೋಗದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್ ಬಿರಾದರ್ ಮಾತನಾಡಿ, ಭಾರತ ಸರ್ಕಾರವು ರಫ್ತು, ಉತ್ತೇಜನಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ರಫ್ತು, ಉತ್ತೇಜನ ಕಾರ್ಯಾಚರಣೆಗಳು, ಸಾಲ ಖಾತ್ರಿ ವಿಸ್ತರಣೆ ಮತ್ತು ಹೊಸದಾಗಿ ಸ್ಥಾಪಿಸಲಾಗಿರುವ “ಭಾರತ್ ಟ್ರೇಡ್-ನೆಟ್’ ಮೂಲಕ ಉತ್ಪಾಧನೆ ದಾಖಲೀಕರಣ ಹಾಗೂ ಹಣಕಾಸು ಪರಿಹಾರದ ಏಕೀಕೃತ ವೇದಿಕೆ ಇದರ ಜೊತೆಗೆ ರಪ್ತು ಪೆÇ್ರೀತ್ಸಾಹಗಳು, ಜಿ.ಎಸ್.ಟಿ. ವಿನಾಯತಿ, ಸಬ್ಸಿಡಿ ಸಾಲಗಳು ಮತ್ತು ತಂತ್ರಜ್ಞಾನದ ಮೂಲಕ ಕೈಗಾರಿಕಾ ವಲಯದ ಡಿಜಿಟಲೀಕರಣದಂತಹ ಕ್ರಮಗಳು ರಫ್ತುದಾರರಿಗೆ ಸಹಾಯ ಮಾಡುತ್ತದೆ ಅಲ್ಲದೇ ರಫ್ತು ಉತ್ತೇಜನಾ ಮಿಷನ್, ವಾಣಿಜ್ಯ ಎಂ.ಎಸ್.ಎಂ.ಇ. ಮತ್ತು ಹಣಕಾಸು ಸಚಿವಾಲಯಗಳು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಮುಖ್ಯವಾಗಿ ವಿಮೆಯ ಮೂಲಕ ರಫ್ತುದಾರರಿಗೆ ಅಪಾಯ ನಿರ್ವಹಣೆಯಲ್ಲಿ ನೆರವು ನೀಡುವ ಸೌಲಭ್ಯವನ್ನು ಒದಗಿಸಿದ ಆದ್ದರಿಂದ ಕೈಗಾರಿಕೋದ್ಯಮಿಗಳು ಇಂತಹ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಕ್ಯಾಯರ್ ಅಸೋಸಿಯೇಷನ್ ಅಧ್ಯಕ್ಷ ಮುರೇಶ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.