January 29, 2026
FB_IMG_1733757591756.jpg


ಹಿರಿಯೂರು:
ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವುದಲ್ಲದೆ ಮನೋರಂಜನೆಯನ್ನು ಸಹ ನೀಡುತ್ತವೆ, ಜೊತೆಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತವೆ ಎಂಬುದಾಗಿ ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸ ಮಂಜುನಾಥ್ ಹೇಳಿದರು.
ತಾಲ್ಲೂಕಿನ ವೇದಾವತಿ ನಗರದಲ್ಲಿ ಪ್ರೀಮಿಯರ್ ಲೀಗ್ ವತಿಯಿಂದ ಡಿಸೆಂಬರ್ 7 ಮತ್ತು 8 ರಂದು ನಡೆದ ವಿಪಿಎಲ್ ಸೀಸನ್ 2 ಪಂದ್ಯಾವಳಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಈ ಪಂದಯಾವಳಿಯಲ್ಲಿ ಒಟ್ಟು ಏಳು ತಂಡಗಳು ಅದ್ಭುತವಾಗಿ ಉತ್ತಮ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೈಟಿ ಬ್ಲಾಸ್ಟರ್ ತಂಡಕ್ಕೆ ಪ್ರಥಮ ಸ್ಥಾನ ದೊರಕಿತು. ಈ ತಂಡಕ್ಕೆ ಮಾನಸ ಮಂಜುನಾಥ್ ಅವರು 25,000 ರೂಗಳ ಬಹುಮಾನ ನೀಡಿ ವಿಜೇತರನ್ನು ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಹ್ಲಾದ್ ರವರು ಎರಡನೇ ಬಹುಮಾನ ಪಡೆದ ಫ್ಲೈಯಿಂಗ್ ಈಗಲ್ಸ್ ತಂಡಕ್ಕೆ 15000 ರೂ ಬಹುಮಾನ ವಿತರಿಸಿದರು, ಕೆಪಿಸಿಸಿ ಸದಸ್ಯರಾದ ನಿಂಗರಾಜ್ ಮೂರನೇ ಬಹುಮಾನ ಪಡೆದ ಎಂಸಿಸಿ ತಂಡಕ್ಕೆ 10000 ರೂಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮನವಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾನಸ ಮಂಜುನಾಥ್ ಗೌಡ, ಅಂಬೇಡ್ಕರ್ ಸೇನಾ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಕೆ.ಪಿ.ಶ್ರೀನಿವಾಸ್, ನಗರದ ಮುಖಂಡರಾದಂತಹ ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಲಿಂಗರಾಜು, ಡಿ.ಪ್ರಸನ್ನಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಪ್ರಹ್ಲಾದ್, ಅಂಬೇಡ್ಕರ್ ಸೇನಾ ಸಮಿತಿಯ ಸದಸ್ಯ ನರಸಿಂಹಮೂರ್ತಿ, ಯೂಥ್ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಗುರುಪ್ರಸಾದ್, ನೀ ಅಪರಾಧಿ ಪತ್ರಿಕೆ ಸಂಪಾದಕ ಕೆ.ಆರ್.ಧನಂಜಯ್, ಕಾಂಗ್ರೆಸ್ ಮುಖಂಡರಾದ ದೇವರಾಜ್, ಸೇವಾದಳ ಮಹಿಳಾ ಜಿಲ್ಲಾಧ್ಯಕ್ಷರಾದ ಇಂದ್ರಮ್ಮ, ಭೀಮ ಆರ್ಮಿ ತಾಲ್ಲೂಕು ಅಧ್ಯಕ್ಷರಾದ ಹೆಚ್. ಪ್ರದೀಪ್ ಇವರುಗಳು ಪ್ರತಿ ತಂಡದ ಆಟಗಾರರಿಗೆ ಶುಭಕೋರಿದರು. ಹಾಗೂ ಈ ಕಾರ್ಯಕ್ರಮದ ಆಯೋಜಕರಾದ ಎಸ್.ಕೆ. ರಘು, ಧನುಷ್, ಜಗನ್ ಡಿ.ಜೆ. ಶಿವಕುಮಾರ್, ಸಿ. ಪ್ರತಾಪ್ ಎಲ್ಲರಿಗೂ ಅಭಿನಂದಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading