ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ ): ತಾಲೂಕು ರೈತ ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ತಹಶೀಲ್ದಾರ್
ಎಸ್.ಎನ್.ನರಗುಂದ ಅವರಿಗೆ ಸಲ್ಲಿಸಲಾಯಿತು.
ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್ ಮಾತನಾಡಿ ತಾಲೂಕಿನಲ್ಲಿ ರೈತರು ಬೆಳೆದಿರುವ ಭತ್ತ ಮತ್ತು ರಾಗಿ ಬೆಳೆಯನ್ನು ಕಟಾವು ಮಾಡಲು ರೈತರಿಂದ ಕಟಾವು ಮಿಷನ್ ಗಳಿಗೆ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವಂತೆ ದರವನ್ನು ಪಡೆಯಬೇಕು, ರೈತರು ಬೆಳೆದಿರುವ ಭತ್ತ ಮತ್ತು ರಾಗಿ ಬೆಳೆಗಳನ್ನು ಮಾರಾಟ ಮಾಡಲು ಖರೀದಿ ಕೇಂದ್ರವನ್ನು ತೆರೆಯಬೇಕು, ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲದಲ್ಲಿ ಆಗದೆ ವಿಳಂಬವಾಗುತ್ತಿದ್ದು ಇದರಿಂದ ರೈತರು ಪ್ರತಿನಿತ್ಯ ಕಚೇರಿಗೆ ಅಲೆಯುವಂತಾಗಿದೆ, ರೈತರುಗಳು ಕಷ್ಟಪಟ್ಟು ಬೆಳೆದಂತಹ ತೆಂಗಿನಕಾಯಿಗಳನ್ನು ಮಾರುಕಟ್ಟೆಗೆ ತಂದರೆ ಅಲ್ಲಿ ವ್ಯಾಪಾರಿಗಳಿಂದ ತೂಕದಲ್ಲಿ ಮೋಸವಾಗುತ್ತಿದೆ. ಇಷ್ಟೆಲ್ಲ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ತಾಲೂಕು ದಂಡಾಧಿಕಾರಿಗಳು ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ
ಎಸ್.ಹೆಚ್.ಕುಮಾರ, ಕೃಷ್ಣೆಗೌಡ, ಶ್ರೀನಿವಾಸ್, ಭಾಸ್ಕರ, ಕೆಂಪೇಗೌಡ, ಶಿವರಾಮ, ಎಸ್.ಬಿ.ಮಂಜುನಾಥ್, ಬಾಬು, ಕೋಟೆಗೌಡ, ನಂಜುಂಡೇಗೌಡ, ಸ್ವಾಮಿಗೌಡ, ರವಿಕುಮಾರ ಸೇರಿದಂತೆ ಹಲವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.