.
ನಾಯಕನಹಟ್ಟಿ::ಡಿ.9. ಜಂತುಹುಳ ನಿವಾರಿಸಲು ಅಲ್ಬೆಂಡೆಜಾಲ್ ಮಾತ್ರೆ ಸೇವಿಸಬೇಕು ಎಂದು ಮುಷ್ಟಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಶ್ರೀಮತಿ ಸುಮಯ ಹೇಳಿದ್ದಾರೆ.


ಅವರು ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ
ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಮುಸ್ಟಲಗುಮ್ಮಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಜಂತುಹುಳ ನಿರ್ವಹಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಗುಂತಕೋಲಮ್ಮನಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ. ಎ. ಮತ್ತು. ಬಿ. ಕೇಂದ್ರದ ಮಕ್ಕಳಿಗೆ ಜಂತುಹುಳ ನಿವಾರಣಾ ಅಲ್ಬೆಂಡೆಜಾಲ್ ಮಾತ್ರೆ ವಿತರಣೆ ಮಾಡಿ ಮಾತನಾಡಿದರು ಜಂತು ಹುಳ ಪ್ರತಿಯೊಬ್ಬ ಮನುಷ್ಯನ ದೇಹದ ಕರುಳಿನಲ್ಲಿರುವ ನೆಮಟೋಡ್ ಅಸ್ಕರಿಸ್ ಜಾತಿಯ ತುಂಡುಗಳು ಮನುಷ್ಯ ಹಾಗೂ ಇತರೆ ಸ್ತನಿಗಳಲ್ಲಿ ಇದರಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಜಂತುಹುಳ ಕಂಡು ಬಂದರೆ ಔಷದ ಕುಡಿಸುತ್ತಾರೆ ದೊಡ್ಡವರಿಗೆ ಕೆಲವೊಂದು ಬಾರಿ ಡಬಲ್ ಡೋಸ್ ತೆಗೆದುಕೊಂಡರು ಸಹ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ತುಂಬಾ ಕಲುಷಿತ ಪ್ರದೇಶಗಳಲ್ಲಿ ಹಾಗೂ ಕರುಳಿನಲ್ಲಿ ಇರುವಂತಹ ಹುಳುಗಳು ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ತಿಳಿಸಿದರು.
ಇದೇ ವೇಳೆ ಸಮುದಾಯ ಆರೋಗ್ಯ ಅಧಿಕಾರಿ ಗೀತಾ ಮಾತನಾಡಿದ ಅವರು ಜಂತುಹುಳುಗಳು ನಮ್ಮ ದೇಹದಲ್ಲಿರುವ ಪೌಷ್ಟಿಕ ಸತ್ವಗಳನ್ನು ಸೇವಿಸಿ ಅಪೌಷ್ಟಿಕತೆ ಉಂಟಾಗುವಂತೆ ಮಾಡುತ್ತವೆ ಪೌಷ್ಟಿಕಾಂಶದ ಕೊರತೆ ಉಂಟಾಗಿ ಹೊಟ್ಟೆ ಉಬ್ಬರ ,ವಾಕರಿಕೆ, ಕೆಮ್ಮು, ವಾಂತಿ ,ಗ್ಯಾಸ್ಟಿಕ್, ಮತ್ತಿತರ ಸಮಸ್ಯೆಗಳು ಸೃಷ್ಟಿಯಾಗುವ ಜೊತೆಗೆ ದೇಹದ ರಕ್ತವನ್ನು ಹೀರಿಕೊಳ್ಳುತ್ತವೆ ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಲಕ್ಷ್ಮಿದೇವಿ, ಅಂಗನವಾಡಿ ಶಿಕ್ಷಕಿ ರಾದ ಪಾಲಮ್ಮ ಮತ್ತು ಶ್ರೀದೇವಿ ಸೇರಿದಂತೆ ಅಂಗನವಾಡಿ ಮಕ್ಕಳು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.